ಜೇವರ್ಗಿ : ಸೂಕ್ತ ಸಮಯದಲ್ಲಿ ಬಾಲಕನೋರ್ವನಿಗೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದು ಸೂಕ್ತ ಚಿಕಿತ್ಸೆ ನೀಡದ ಅರೋಗ್ಯ ಕೇಂದ್ರದ ವಿರುದ್ಧ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ನಡೆದಿದೆ.
ನೆಲೋಗಿ ನಿವಾಸಿ ಗುರು ಮಂಗಾ (10) ಮೃತ ಬಾಲಕ.
ಶನಿವಾರ ಮಧ್ಯಾಹ್ನ ಬಾಲಕ ಟ್ರ್ಯಾಕ್ಟರ್ ಮೇಲಿಂದ ಬಿದ್ದು ಗಾಯಗೊಂಡಿದ್ದ ಈ ವೇಳೆ ಆತನನ್ನು ನೆಲೋಗಿಯಲ್ಲಿರೋ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬರಲಾಗಿತ್ತು ಆದರೆ ಅಲ್ಲಿ ವೈದ್ಯರು ಇಲ್ಲದ ಕಾರಣ ಬಾಲಕನನ್ನು ಜೇವರ್ಗಿಯಲ್ಲಿರೋ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಬಾಲಕ ಸಾವನ್ನಪ್ಪಿದ್ದಾನೆ.
ಬಾಲಕ ಸಾವನ್ನಪ್ಪಿರುವುದಕ್ಕೆ ನೆಲೋಗಿಯಲ್ಲಿರೋ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದಿರುವುದೇ ಕಾರಣ ಎಂದು ಆಕ್ರೋಶಗೊಂಡ ಕುಟುಂಬಸ್ಥರು ಹಾಗೂ ಸಾರ್ವಜನಿಕರು ನೆಲೋಗಿ ಅರೋಗ್ಯ ಕೇಂದ್ರದ ಎದುರು ಟೈರ್ ಗೆ ಬೆಂಕಿ ಹಚ್ಚಿ ಆರೋಗ್ಯ ಕೇಂದ್ರದ ಮುಂದಿದ್ದ ಆ್ಯಂಬುಲೆನ್ಸ್ ಗೆ ಕಲ್ಲೆಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ಮೂರು ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ ರಾಗಿ ಖರೀದಿಗೆ ಕೇಂದ್ರದ ಒಪ್ಪಿಗೆ: ಸಿಎಂ