Advertisement
ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದ ನಿವಾಸಿ ಇರ್ಫಾನ್ ಶೇಖ್ ಎಂಬಾತನೇ ಥಳಿತಕ್ಕೊಳಾಗದ ಯುವಕ. ಬೆಂಗಳೂರು ಮೂಲದ ರಹೀನಾ ಎಂಬಾಕೆ ಯುವಕನಿಗೆ ಹಲ್ಲೆಗೈದ ಯುವತಿ.
Related Articles
Advertisement
ಇದರಿಂದ ಆಕೆ ಮೂರು ತಿಂಗಳ ಗರ್ಭಿಣಿಯಾದ ವಿಷಯವನ್ನು ಪ್ರಿಯಕನಿಗೆ ತಿಳಿಸಿದ್ದಳು. ಆದರೆ. ಇರ್ಫಾನ್ ಗರ್ಭಪಾತ ಮಾಡಿಸಿದ ಬಳಿಕ ಮದುವೆಯಾಗುವ ಯೋಚನೆ ಮಾಡೋಣ ಎಂದು ಹೇಳಿದ್ದ. ಆದರೆ, ಈ ನಡುವೆ ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕಲಬುರಗಿಗೆ ಇರ್ಫಾನ್ ಬಂದು ಇಲ್ಲೇ ಉಳಿದಿದ್ದಾನೆ ಎಂಬುವುದು ಯುವತಿಯ ಆರೋಪ.
ಇಷ್ಟೇ ಅಲ್ಲ, ಕಲಬುರಗಿಗೆ ಬಂದ ಸೇರಿದ ಬಳಿಕ ಲಾಕ್ ಡೌನ್ ಮುಗಿದ ಬಳಿಕ ಮದುವೆಯಾಗುವುದಾಗಿ ಹೇಳಿದ್ದ. ಆದರೆ, ಈಗ ಬೇರೆಯರವನ್ನು ಮದುವೆಯಾಗು, ನನ್ನ ತಂದೆ-ತಾಯಿ ನನಗೆ ಬೇರೆ ಹುಡುಗಿಯನ್ನು ನೋಡುತ್ತಿದ್ದಾರೆ ಎಂದು ಹೇಳಿದ್ದನಂತೆ. ಹೀಗಾಗಿ ಈ ಹಿಂದೆಯೇ ಒಮ್ಮೆ ಪ್ರಿಯಕರನನ್ನು ಹುಡುಕಿಕೊಂಡು ಆಕೆ ಬಂದಿದ್ದಳು. ಆಗ ಇರ್ಫಾನ್ ಕುಟುಂಬದವರು ಸೇರಿಕೊಂಡುಸಬ್ ರಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಗೆಂದು ಅರ್ಜಿ ಮೇಲೆ ಸಹಿ ಮಾಡಿಸಿಕೊಂಡರು. ಆದರೆ, ಬಳಿಕ ಮತ್ತೆ ಇರ್ಫಾನ್ ಮದುವೆ ಆಗುವುದಿಲ್ಲ ಎಂದು ನಿರಾಕರಿಸುತ್ತಿದ್ದಾನೆ ಎಂದು ಅಕೆ ದೂರಿದ್ದಾಳೆ. ಇತ್ತ ನಾನು ರಹೀನಾಳನ್ನು ಪ್ರೀತಿಸುತ್ತಿರಲಿಲ್ಲ. ಕೇವಲ ಸ್ನೇಹಿತರಾಗಿದ್ದೇವು ಎಂದು ಇರ್ಫಾನ್ ಹೇಳಿದ್ದಾನೆ. ಅಲ್ಲದೇ, ನನ್ನ ಸ್ನೇಹಿತನಾಗಿರುವ ಅಜರ್ ಎಂಬಾತ ಆಕೆಯನ್ನು ಪ್ರೀತಿಸುತ್ತಿದ್ದ. ನಾನು ಯಾವುದೇ ಹೊಂದಿಲ್ಲ. ಈಕೆ ಕೆಲ ಫೋಟೋಗಳನ್ನೇ ಹಿಡಿದುಕೊಂಡು ನನಗೆ ಮದುವೆಯಾಗುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ ಎಂದು ಇರ್ಫಾನ್ ಆರೋಪಿಸಿದ್ದಾನೆ. ಇನ್ನು, ಪೊಲೀಸ್ ಠಾಣೆ ಮುಂದೆ ಗಲಾಟೆ ನಂತರ ಅಲ್ಲಿನ ಪೊಲೀಸರು, ಇದು ಮಹಿಳಾ ಠಾಣೆಗೆ ಸಂಬಂಧಪಟ್ಟ ವಿಷಯ. ಹೀಗಾಗಿ ಅಲ್ಲಿಗೆ ಹೋಗಿ ಎಂದು ತಿಳಿಸಿದ್ದರು. ಆದರೆ, ಯುವತಿಯಾಗಲಿ, ಯುವಕನಾಗಲಿ ಎಲ್ಲಿಯೂ ಯಾವುದೇ ದೂರು ನೀಡಿಲ್ಲ ಎಂದು ಪೊಲೀಸ್ ಅಧಿಕಾರಿಗಳ ಮಾಹಿತಿ.