Advertisement

ಜೇವರ್ಗಿ ಕ್ಷೇತ್ರದಿಂದ ಬಿಜೆಪಿಗೆ ಲೀಡ್‌ ಎಷ್ಟು?

09:52 AM May 09, 2019 | Naveen |

ಕಲಬುರಗಿ: ರಾಷ್ಟ್ರದ ಗಮನ ಸೆಳೆದಿರುವ ಕಲಬುರಗಿ ಮೀಸಲು ಕ್ಷೇತ್ರದ ಚುನಾವಣೆ ಹೊಸ ವಿಷಯಗಳಿಗೆ ನಾಂದಿ ಹಾಡಿದ್ದಲ್ಲದೇ ಸ್ವಾರಸ್ಯಕರ ಚರ್ಚೆಗೂ ಎಡೆ ಮಾಡಿ ಕೊಟ್ಟಿತು ಎಂದರೆ ತಪ್ಪಾಗುವುದಿಲ್ಲ.

Advertisement

ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಒಂದೊಂದು ಕ್ಷೇತ್ರದಲ್ಲಿ ಒಂದೊಂದು ವಿಷಯದ ಕುರಿತು ಚರ್ಚೆ ಜೋರಾಗೇ ನಡೆದಿದೆ. ಜೇವರ್ಗಿ ವಿಧಾನಸಭೆ ಕೆ¡ತ್ರದಲ್ಲಿ ಈ ಸಲ ಬಿಜೆಪಿಗೆ ಎಷ್ಟು ಲೀಡ್‌ ಬರುತ್ತದೆ ಎನ್ನುವ ವಿಷಯ ಕ್ಷೇತ್ರವಲ್ಲದೇ ಜಿಲ್ಲೆಯಾದ್ಯಂತ ಕೇಳಿ ಬರುತ್ತಿದೆ.

2009ರಲ್ಲಿ ಕಾಂಗ್ರೆಸ್‌ಗೆ 2764 ಮತಗಳು ಲೀಡ್‌ ಬಂದಿದ್ದರೆ 2014ರಲ್ಲಿ ಬಿಜೆಪಿಗೆ 1028 ಮತಗಳು ಲೀಡ್‌ ಬಂದಿದ್ದವು. ಈ ಸಲದ ಚುನಾವಣೆಯಲ್ಲಿ ಬಿಜೆಪಿಗೆ ಎಷ್ಟು ಲೀಡ್‌ ಎನ್ನುವುದೇ ಕುತೂಹಲದ ಸಂಗತಿಯಾಗಿದೆ. ಬಿಜೆಪಿಗೆ ಹೆಚ್ಚಿನ ಲೀಡ್‌ ಬರುವುದು ಸ್ಪಷ್ಟ. ಆದರೆ ಎಷ್ಟು ಎನ್ನುವುದರ ಕುರಿತು ಪ್ರತಿ ಹಳ್ಳಿಯಲ್ಲೂ ಚರ್ಚೆ ನಡೆಯುತ್ತಿದೆ.

ಕಾಂಗ್ರೆಸ್‌ ಸ್ವಲ್ಪ ಮತಗಳನ್ನಾದರೂ ಪಡೆಯುತ್ತದೆ ಎಂದು ಒಬ್ಬರೂ ಷರತ್ತು ಕಟ್ಟುವ ಮಾತೇ ಆಡುತ್ತಿಲ್ಲ ಜೇವರ್ಗಿ ವಿಧಾನಸಭೆ ಕ್ಷೇತ್ರದಲ್ಲಿ 118798 ಪುರುಷರು, 117398 ಮಹಿಳೆಯರು ಸೇರಿದಂತೆ ಒಟ್ಟು 236230 ಮತದಾರರಿದ್ದಾರೆ. ಇವರಲ್ಲಿ 146165 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದರಲ್ಲಿ 76215 ಪುರುಷರು, 69582 ಮಹಿಳೆಯರು ಸೇರಿದ್ದಾರೆ.

ಜಾತಿ ನಿಂದನೆ ಪ್ರತಿಧ್ವನಿ: ಚುನಾವಣೆಯಲ್ಲಿ ಜಾತಿ ನಿಂದನೆ ಪ್ರಕರಣಗಳು ತೀವ್ರವಾಗಿ ಪ್ರತಿಧ್ವನಿಗೊಂಡಿವೆ. ನೆಲೋಗಿ ಜಾತಿ ನಿಂದನೆ ಪ್ರಕರಣವಂತೂ ಚುನಾವಣೆಯುದ್ದಕ್ಕೂ ಹಾಗೂ ನಂತರವೂ ಸದ್ದು ಮಾಡಿತು. ಒಟ್ಟಾರೆ ಚುನಾವಣೆಯ ಕೇಂದ್ರ ವಿಷಯವಾಯಿತು. ಮತಗಳ ಸರಾಸರಿಯಲ್ಲಿ ಭಾರಿ ವ್ಯತ್ಯಾಸವಾದಲ್ಲಿ ಈ ಪ್ರಕರಣವೇ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ.

Advertisement

ಬಿಜೆಪಿಯವರು ಕನಿಷ್ಠ 15 ಸಾವಿರ ಮತ ಲೀಡ್‌ ಪಡೆಯುತ್ತೇವೆ ಎನ್ನುತ್ತಿದ್ದರೆ ಕಾಂಗ್ರೆಸ್‌ನವರು ಕನಿಷ್ಠ ಲೀಡ್‌ನ್ನಾದರೂ ಪಡೆಯುತ್ತೇವೆ ಎನ್ನುವ ವಿಶ್ವಾಸ ಹೊಂದಿದ್ದಾರೆ.

ಚುನಾವಣೆ ಮುಂಚೆಯ ಹವಾ ನೋಡಿದರೆ ಬಿಜೆಪಿಗೆ ಹೆಚ್ಚಿನ ಮತಗಳು ಬರಬಹುದು ಎಂದು ನಿರೀಕ್ಷೆಯಿತ್ತು. ಆದರೆ ಕ್ಷೇತ್ರದ ಶಾಸಕ ಡಾ| ಅಜಯ ಸಿಂಗ್‌ ಪ್ರತಿ ಹಳ್ಳಿಗಳಿಗೂ ಹೋಗಿ ಮತದಾರನ್ನು ಭೇಟಿಯಾಗಿ ಕಲಬುರಗಿ ಅಭಿವೃದ್ಧಿಗೆ ಡಾ| ಮಲ್ಲಿಕಾರ್ಜುನ ಖರ್ಗೆ ಅವರ ಆಯ್ಕೆ ಕುರಿತಾಗಿ ಮನವರಿಕೆ ಮಾಡಲಾಗಿತ್ತು. ಇದರ ಪರಿಣಾಮ ಕಾಂಗ್ರೆಸ್‌ ಪಕ್ಷಕ್ಕೆ ಎರಡ್ಮೂರು ಸಾವಿರ ಹೆಚ್ಚು ಮತಗಳು ಲಭಿಸಲಿವೆ. ಚುನಾವಣೆ ಸಮಯದಲ್ಲಿ ಜಾತಿ ನಿಂದನೆ ವಿಷಯ ಚಾಲ್ತಿಗೆ ತಂದಿರುವುದು ಸಮಂಜಸವಲ್ಲ.
•ಸಿದ್ಧಲಿಂಗರೆಡ್ಡಿ ಇಟಗಿ,
ಅಧ್ಯಕ್ಷರು, ಜೇವರ್ಗಿ ಬ್ಲಾಕ್‌ ಕಾಂಗ್ರೆಸ್‌

ಕಾಂಗ್ರೆಸ್‌- ಜೆಡಿಎಸ್‌ ಒಗ್ಗೂಡಿ ಕೆಲಸ ಮಾಡಿರುವುದು ಉತ್ತಮವಾಗಿದೆ. ಎಲ್ಲ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಚುನಾವಣೆ ಸಮಯದಲ್ಲಿ ವಿಷಯವೊಂದನ್ನು ಮುಂದಿಟ್ಟುಕೊಂಡು ಮತಗಳ ವಿಭಜನೆ ಕಾರ್ಯ ನಡೆಯಿತಾದರೂ ಅದೇನು ಪರಿಣಾಮ ಬೀರಿಲ್ಲ.
ಬಸವರಾಜ ಖಾನಗೌಡ,
ಅಧ್ಯಕ್ಷರು, ತಾಲೂಕು ಜೆಡಿಎಸ್‌

ಯುವಕರೆಲ್ಲ ತಂಡವಾಗಿ ಕೆಲಸ ಮಾಡಿದ್ದೇವೆ. ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲಾಗಿದೆ. ಜತೆಗೆ ಮೋದಿ ಹವಾ ಇದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಭರ್ಜರಿ ಬೆಂಬಲ ಸಿಕ್ಕಿದೆ. ಹಿಇಗಾಗಿ ಕನಿಷ್ಠ 15000 ಲೀಡ್‌ ಬಿಜೆಪಿಗೆ ದೊರೆಯಲಿದೆ ಎನ್ನುವ ದೃಢ ವಿಶ್ವಾಸ ಹೊಂದಲಾಗಿದೆ. ಜೇವರ್ಗಿ ಕ್ಷೇತ್ರದಲ್ಲಿ ಪಡೆಯುವ ಮತ ಹೆಚ್ಚಳವೇ ಕಲಬುರಗಿ ಲೋಕಸಭಾ ಕ್ಷೇತ್ರದ ಫಲಿತಾಂಶಕ್ಕೆ ನಾಂದಿಯಾಗಲಿದೆ.
ಸಾಯಬಣ್ಣ ದೊಡ್ಮನಿ,
ಅಧ್ಯಕ್ಷರು ತಾಲೂಕು ಬಿಜೆಪಿ ಘಟಕ

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next