Advertisement
ಕ್ಷೇತ್ರದ ಸಂಕ್ಷಿಪ್ತ ಇತಿಹಾಸ: 1957ರಿಂದ ಇದುವರೆಗೆ ಒಟ್ಟು 18 ಸಾರ್ವತ್ರಿಕ ಚುನಾವಣೆಗಳನ್ನು ಕಲಬುರಗಿ ಕಂಡಿದೆ. 1957ರಿಂದ 1991ರ ವರೆಗೂ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದರು. 1957, 1962 ಮತ್ತು 1967ರಲ್ಲಿ ಸತತ ಮೂರು ಬಾರಿ ಗೆಲುವು ಕಂಡಿದ್ದ ಮಹದೇವಪ್ಪ ಯಶವಂತರಾಯ ಅವರು ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಇವರದಾಖಲೆಯನ್ನು ಇದುವರೆಗೂ ಯಾರೂ ಸರಿಗಟ್ಟಲು ಅಥವಾ ಮೀರಿಸಲು ಆಗಿಲ್ಲ.
1.97 ಲಕ್ಷ ಮತ ಪಡೆದರೆ, ಡಾ| ಜವಳಿ 1.40 ಲಕ್ಷ ಮತಗಳನ್ನು ಪಡೆದಿದ್ದರು. ಬಸವರಾಜ ಪಾಟೀಲ ಸೇಡಂ 3.28 ಲಕ್ಷ ಮತಗಳನ್ನು ಪಡೆಯುವ ಮೂಲಕ ಅತ್ಯಧಿಕ 1.31 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಬಸವರಾಜ ಪಾಟೀಲ ಸೇಡಂ ಅವರ ಜಯ ಕ್ಷೇತ್ರದ ಇತಿಹಾಸದಲ್ಲಿ ದಾಖಲಾಗಿದೆ. 1998ರಲ್ಲಿ ಚುನಾವಣೆಯ ಮರು ವರ್ಷವೇ ನಡೆದ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಕಾಂಗ್ರೆಸ್ ಕಲಬುರಗಿಯನ್ನು ಮತ್ತೆ ತಕ್ಕೆಗೆ ತೆಗೆದುಕೊಳ್ಳುವಲ್ಲಿ ಸಫಲವಾಗಿತ್ತು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಇಕ್ಬಾಲ್ ಅಹ್ಮದ್ ಸರಡಗಿ ಗೆಲುವು ಸಾಧಿಸಿದ್ದರು. ಅಂದಿನಿಂದ 2019ರವರೆಗೂ ಕಾಂಗ್ರೆಸ್ ತನ್ನ ಗೆಲುವಿನ ಓಟವನ್ನು ಮುಂದುವರಿಸಿತ್ತು. ಈ ಗೆಲುವಿನ ಓಟಕ್ಕೆ ಬಿಜೆಪಿ ಬ್ರೇಕ್ ಹಾಕಿದೆ. ಅದರಲ್ಲೂ 9 ಬಾರಿ ಶಾಸಕರಾಗಿ ಮತ್ತು ಎರಡು ಬಾರಿ ಸಂಸದರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಜೆಪಿ ಮಕಾಡೆ ಮಲಗಿಸಿದೆ.
Related Articles
Advertisement
ಸೋತ ಪ್ರಮುಖರು: ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಘಟಾನುಘಟಿ ನಾಯಕರು ಸೋಲನ್ನು ಕಂಡಿದ್ದಾರೆ. 1971ರ ಸಾರ್ವತ್ರಿಕ ಚುನಾವಣೆಯಲ್ಲಿ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರುಸ್ಪರ್ಧಿಸಿ ಸೋಲು ಕಂಡಿದ್ದರು. ವೈಜನಾಥ ಪಾಟೀಲರು 1980, 1991ರಲ್ಲಿ ಸೋಲು ಅನುಭವಿಸಿದ್ದರು. 1998ರಲ್ಲಿ ಬಸವರಾಜ ಪಾಟೀಲ ಸೇಡಂ ಗೆಲುವು ಸಾಧಿಸುವ ಮುನ್ನ 1991ರಲ್ಲಿ ಸೋತಿದ್ದರು. ಅಲ್ಲದೇ, 1999 ಹಾಗೂ 2004ರ ಚುನಾವಣೆಯಲ್ಲೂ ಬಸವರಾಜ ಪಾಟೀಲ ಸೇಡಂ ಪರಾಭವಗೊಂಡಿದ್ದರು. ಈಗ ಮಲ್ಲಿಕಾರ್ಜುನ ಖರ್ಗೆ ಕೂಡ ಸೋತ ಗಣ್ಯರ ಸಾಲಿಗೆ ಸೇರ್ಪಡೆಯಾಗಿದ್ದಾರೆ.