ಮಾಡಿದ್ದೇನೆ ಎನ್ನುವ ಬದಲು ಖರ್ಗೆಯವರು ನಾವು ಮಾಡಿದ್ದೇವೆ ಎನಬೇಕು ಎಂದು ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ ಟಾಂಗ್ ನೀಡಿದರು.
Advertisement
ಇಂಗಳಗಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ಧಾಳಿ ನಡೆಸಿದರು.
ಯಾದಗಿರಿ ಜಿಲ್ಲೆಯಿಂದ ಗುಳೆ ಹೋಗುತ್ತಾರೆ. ಇದೇನಾ ಅವರು ಮಾಡಿರುವ ಅಭಿವೃದ್ಧಿ ಎಂದು ಪ್ರಶ್ನಿಸಿದರು. ಕಲಬುರಗಿ ನಗರದ ಎಂಎಸ್‌ಕೆ ಮಿಲ್, ಶಹಾಬಾದ ನಗರದ ಸಿಮೆಂಟ್ ಕಂಪನಿ
ಹಾಗೂ ಕುರುಕುಂಟಾದ ಸಿಮೆಂಟ್ ಘಟಕಗಳು ಮಲ್ಲಿಕಾರ್ಜುನ ಖರ್ಗೆ ರಾಜ್ಯದಲ್ಲಿ ಮಂತ್ರಿಯಾಗಿದ್ದಾಗಲೇ ಬಂದ್ ಆಗಿವೆ. ಇದನ್ನು
ಜನರು ಮರೆಯಬಾರದು ಎಂದರು. ಎಸ್‌ಸಿ ಘಟಕದ ತಾಲೂಕು ಅಧ್ಯಕ್ಷ ರಾಜು
ಮುಕ್ಕಣ್ಣ ಮಾತನಾಡಿ, ಪಾಕಿಸ್ತಾನದ ಪಾಪಿಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರನ್ನು ಕೊಂದ ಭಾರತೀಯ ಸೈನ್ಯದ ಕ್ರಮವನ್ನೇ ಕಾಂಗ್ರೆಸ್ ಪ್ರಶ್ನಿಸಿದೆ. ಎಷ್ಟು ಜನರು ಸತ್ತಿದ್ದಾರೆ ಲೆಕ್ಕ ಕೊಡಿ ಎಂದು ಕಾಂಗ್ರೆಸ್ ನಾಯಕರು
ಕೇಳುತ್ತಿದ್ದಾರೆ. ರಕ್ತ ಹೀರುವ ಸೊಳ್ಳೆಗಳನ್ನು ಹೊಸಕಿಹಾಕಿದ ಬಳಿಕ ಎಷ್ಟು ಸೊಳ್ಳೆ ಸತ್ತಿವೆ ಎಂದು ಲೆಕ್ಕ ಇಡಲಾದಿತೆ? ಕಾಂಗ್ರೆಸ್ ಪಕ್ಷದ ಜನದ್ರೋಹ ಬಯಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಮುಖ ನೋಡಿ ಸಾಕಾಗಿದೆ. ಅವರ ಮಗ ಪ್ರಿಯಾಂಕ್ ಖರ್ಗೆ ಬಹಳ ಡೇಂಜರ್. ಮಂತ್ರಿಯಾಗಿ ಗಾಳಿಯಲ್ಲಿ ಓಡಾಡುತ್ತಿದ್ದಾನೆ. ಇವರ ಆಟ ಕೊನೆಗಾಣಬೇಕು ಎಂದು ಹೇಳಿದರು.
Related Articles
ಟೀಕಿಸಿದ್ದ ಕಾಂಗ್ರೆಸ್‌ನ ಬಾಬುರಾವ ಚವ್ಹಾಣ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜು
ಮುಕ್ಕಣ್ಣ, ಚುನಾವಣೆಯಲ್ಲಿ ಜಾಧವ ಗೆದ್ದು ಸಚಿವರಾಗುತ್ತಾರೆ. ಸೋತ ನಂತರ ಖರ್ಗೆ ಅವರು ರೋಗಿಯಾಗಿ ಡಾ| ಉಮೇಶ ಜಾಧವ ಅವರ ದವಾಖಾನೆಯಲ್ಲಿ ದಾಖಲಾಗುತ್ತಾರೆ ಎಂದು ಚುಚ್ಚಿದರು.
Advertisement
ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಟಾಳ, ವಾಲ್ಮೀಕಿ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಧರ್ಮಣ್ಣ ಇಟಗಾ ಮಾತನಾಡಿದರು.
ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ, ವಾಡಿ ಅಧ್ಯಕ್ಷ ಬಸವರಾಜಪಂಚಾಳ, ಜಿಲ್ಲಾ ಮುಖಂಡ ಶರಣಪ್ಪ ತಳವಾರ, ಶ್ರೀಶೈಲ ನಾಟೀಕಾರ,
ಚಂದ್ರಕಾಂತ ಹೂಗಾರ, ಶಂಕರ ಜಾಧವ ಪಾಲ್ಗೊಂಡಿದ್ದರು. ಅಂಬೇಡ್ಕರ್ ಅವರು ಕಾಂಗ್ರೆಸ್ ಈಸ್ ಬರ್ನಿಂಗ್ ಹೌಸ್ ಎಂದು ಹೇಳಿದ್ದಾರೆ. ಹಾಗಾಗಿ ನಾನು ಸುಡುವ ಮನೆ ಬಿಟ್ಟು ಬಿಜೆಪಿ ಎನ್ನುವ ಅಭಿವೃದ್ಧಿಯ ಮನೆಗೆ ಬಂದಿದ್ದೇನೆ. ನಾನು ಗೆದ್ದರೆ ನರೇಂದ್ರ ಮೋದಿ ಗೆದ್ದಂತೆ. ಖರ್ಗೆ ವಿರುದ್ಧ ಸೋತವರೆಲ್ಲಾ ಕಾಂಗ್ರೆಸ್ ಸೇರಿದ್ದಾರೆ. ಖರ್ಗೆ ಹತ್ತಿರ ಅಂತಹ ಯಾವ ಮಂತ್ರವಿದೆಯೋ ನನಗೆ ಅರ್ಥವಾಗುತ್ತಿಲ್ಲ.
ಡಾ| ಉಮೇಶ ಜಾಧವ,
ಕಲಬುರಗಿ ಲೋಕಸಭೆ
ಕ್ಷೇತ್ರದ ಬಿಜೆಪಿ ಅಭ್ಯರ್ಥಿ