Advertisement
ಕೆಂಡದಂತಹ ಬಿಸಿಲಿದ್ದರೂ, ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದರೂ ಜನರು ಚುನಾವಣೆ ಚರ್ಚೆಯಲ್ಲಿ ಮಗ್ನವಾಗಿರುವುದು ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿದಾಗ ಕಂಡು ಬರುತ್ತಿದೆ. ಕಳೆದ 2014 ಹಾಗೂ ಅದರ ಹಿಂದಿನ 2009ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಗ್ರಾಮದಿಂದ ಇಂತಹ ಪಕ್ಷಕ್ಕೆ ಲೀಡ್ ಆಗಿದೆ. ತಾಲೂಕಿನಿಂದ ಇಷ್ಟು ಆಗಿದೆ ಎನ್ನುವ ಕುರಿತು ನಿಖರವಾಗಿ ಅಂಕಿ ಸಂಖ್ಯೆಗಳನ್ನು ಮುಂದಿಟ್ಟು ಚರ್ಚೆ ಮಾಡುತ್ತಿರುವುದನ್ನು ನೋಡಿದರೆ ಜನರಲ್ಲಿ ಚುನಾವಣೆ ಎಷ್ಟು ಪರಿಣಾಮ ಬೀರಿದೆ ಎನ್ನುವುದು ನಿರೂಪಿಸುತ್ತಿದೆ.
ರಾಜಕೀಯ ಪ್ರಜ್ಞಾವಂತಿಕೆ ಬಂದಿರುವುದು ಕಂಡು ಬರುತ್ತದೆ. ಕೈಯಲ್ಲಿಯೇ ರಾಜಕೀಯ ಆಗು ಹೋಗುಗಳನ್ನು ಅರಿಯುತ್ತಿರುವುದರಿಂದ ರಾಜಕೀಯ ಪ್ರಜ್ಞೆ ಜಾಗೃತಗೊಂಡಿದೆ. ವಾಟ್ಸ ಆ್ಯಪ್, ಇಂಟರನೆಟ್, ಫೆಸ್‌ಬುಕ್ ಹಾಗೂ ಮೊಬೈಲ್‌ದಲ್ಲೇ ಸುದ್ದಿವಾಹಿನಿಗಳ ವೀಕ್ಷಣೆಯು ಎಲ್ಲವನ್ನು ತಿಳಿಸುವಂತೆ ಮಾಡಿದೆ ಎಂದು ವಿಶ್ಲೇಷಿಸಬಹುದಾಗಿದೆ. ನೋಟಾ ಮತ: ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ 9888 ಮತಗಳು ನೋಟಾಗೆ ಚಲಾವಣೆಯಾಗಿದ್ದವು. ಕಣದಲ್ಲಿದ್ದ ಎಂಟು ಅಭ್ಯರ್ಥಿಗಳಲ್ಲಿ ನಾಲ್ವರು ಬಿಟ್ಟರೆ ಐದನೇ ಅಭ್ಯರ್ಥಿಯಾಗಿ ನೋಟಾಗೆ ಹೆಚ್ಚು ಮತ ಚಲಾವಣೆ ಆಗಿರುವುದನ್ನು ನಾವು ಪ್ರಮುಖವಾಗಿ ಅವಲೋಕಿಸಬಹುದಾಗಿದೆ. ಪ್ರಸ್ತುತ 2019ರ ಏ. 23ರಂದು ನಡೆಯುವ ಚುನಾವಣೆಯಲ್ಲಿ ಕಳೆದ ಸಲಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ನೋಟಾಗೆ ಮತಗಳು ಚಲಾವಣೆಯಾಗಲಿವೆ ಎನ್ನಲಾಗುತ್ತಿದೆ. ಕಲಬುರಗಿ ಉತ್ತರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಆಗಿದೆ ಎನ್ನಲಾದ ಅಸಮಾಧಾನವು ನೋಟಾಗೆ ಮತ ಹೆಚ್ಚಬಹುದು ಎಂದು ಊಹಿಸಲಾಗುತ್ತಿದೆ. ನೋಟಾಗೆ ಹೆಚ್ಚಾದರೆ ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬುದನ್ನು ಚರ್ಚೆ ಜೋರಾಗಿ ನಡೆದಿದೆ.
Related Articles
Advertisement