Advertisement

34 ಎಕ್ರೆ ಭೂಮಿಯಲ್ಲಿ ನುಡಿ ಹಬ್ಬಕ್ಕೆ ಸಿದ್ಧತೆ

11:44 AM Jan 26, 2020 | Naveen |

ಕಲಬುರಗಿ: ಸುದೀರ್ಘ‌ 32 ವರ್ಷಗಳ ನಂತರ ನಡೆಯುವ ಅಖೀಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳು ನಡೆದಿದ್ದು, ಗುಲ್ವರ್ಗ ವಿವಿಯ ಆವರಣ ವಿಶಾಲದ 34 ಎಕರೆ ಭೂಮಿಯಲ್ಲಿ ಭವ್ಯವಾದ ವೇದಿಕೆ, ಮಳಿಗೆ ಸೇರಿದಂತೆ ಇತರ ಎಲ್ಲ ಕಾರ್ಯಗಳು ಭರದಿಂದ ಸಾಗಿವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮತ್ತು ಸಮ್ಮೇಳನದ
ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರಭದ್ರ ಸಿಂಪಿ ತಿಳಿಸಿದರು.

Advertisement

ಸಾಂಸ್ಕೃತಿಕ ಸಿರಿವಂತ ಹಾಗೂ ಸಾಮರಸ್ಯದ ನೆಲವಾಗಿರುವ ಕಲಬುರಗಿಯಲ್ಲಿ 85ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ದಾಖಲೆಯ ಪ್ರಮಾಣದಲ್ಲಿ 21,030 ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಶನಿವಾರ ಇಲ್ಲಿನ ಸಾಹಿತ್ಯ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಹಿಂದೆ ನಡೆದ ರಾಯಚೂರಿನಲ್ಲಿ 12,500, ಮೈಸೂರಿನಲ್ಲಿ 13,000 ಹಾಗೂ ಧಾರವಾಡದಲ್ಲಿ 13,500 ಜನ ನೋಂದಣಿ ಮಾಡಿಕೊಂಡಿದ್ದರು. ಆದರೆ ಕಲಬುರಗಿಯಲ್ಲಿ ದಾಖಲೆಯಾಗಿ 21,000 ಜನ ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ 15,178 ಪುರುಷರು ಮತ್ತು 5,852 ಮಹಿಳೆಯರು ಸೇರಿದ್ದಾರೆ. ಇದರಲ್ಲಿ ಕಲಬುರಗಿ ಜಿಲ್ಲೆಯಿಂದ 3,500ಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದಾರೆ ಎಂದರು.

ಸಮ್ಮೇಳನಕ್ಕಾಗಿ 379 ಪುಸ್ತಕ ಮತ್ತು 177 ವಾಣಿಜ್ಯ ಮಳಿಗೆಗಳು ಸೇರಿದಂತೆ ಇದೂವರೆಗೆ
566 ಮಳಿಗೆಗಳ ನೋಂದಣಿಯಾಗಿದ್ದು, ಎಲ್ಲವೂ ಗುಣಮಟ್ಟದಿಂದ ಕೂಡಿರಲಿವೆ. ಇನ್ನೂ ಮಳಿಗೆಗಳ ಸ್ಥಾಪನೆಗೆ ಹೆಸರು ನೋಂದಾಯಿಸಬಹುದು. ಅಕ್ಷರ ಜಾತ್ರೆ ಐತಿಹಾಸಿಕ ಯಶಸ್ವಿಯಾಗಲಿದೆ. ಇದರಲ್ಲಿ ಎರಡು ಮಾತಿಲ್ಲ ಎಂದು ಸಿಂಪಿ ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ದೌಲತರಾವ ಪಾಟೀಲ, ವಿಜಯಕುಮಾರ್‌ ಪೊರತೆ, ಮಡಿವಾಳಪ್ಪ
ನಾಗರಹಳ್ಳಿ, ಅಂಬಾಜಿ ಕವಲಗಾ, ಲಿಂಗರಾಜ, ಆನಂದ ನಂದೂರಕರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next