Advertisement

ಪೌರತ್ವ ತಿದ್ದುಪಡಿ ಕಾಯ್ದೆ

05:20 PM Jan 10, 2020 | Naveen |

ಕಲಬುರಗಿ: ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತರುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಸ್ವಾಗತಿಸಿ, ಕಲಬುರಗಿ ನಾಗರಿಕ ಸಮಿತಿ ವತಿಯಿಂದ ಜ.11ರಂದು ನಡೆಯುವ ಜನಜಾಗೃತಿ ನಡಿಗೆಗೆ ಜಿಲ್ಲೆಯ ವಿವಿಧ ಮಠಾಧೀಶರು ಮತ್ತು ಮುಖಂಡರು ಬೆಂಬಲ ಸೂಚಿಸಿದರು.

Advertisement

ದೇಶದ ಹಿತದೃಷ್ಟಿಯಿಂದ ಹಾಗೂ ಭದ್ರತೆ ದೃಷ್ಟಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಗಿದೆ. ಕಾಯ್ದೆಯಿಂದ ದೇಶದ ನಾಗರಿಕರಿಗ್ಯಾರಿಗೂ ತೊಂದರೆಯಿಲ್ಲ. ಆದರೆ, ಕಾಯ್ದೆ ಕುರಿತು ರಾಜಕೀಯವಾಗಿ ಗೊಂದಲ ಮೂಡಿಸಿ ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ನಡೆಯಬಾರದು ಎಂದು ಪಾಳಾದ ಡಾ| ಗುರುಮೂರ್ತಿ ಶಿವಾಚಾರ್ಯರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪೌರತ್ವ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಸ್ವಾಗತಾರ್ಹವಾಗಿದೆ. ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ ಮುಂದಾಳತ್ವದಲ್ಲಿ ಹಮ್ಮಿಕೊಂಡಿರುವ ಜಾಥಾದಲ್ಲಿ ಸಾವಿರಾರು ಜನರು ಭಾಗವಹಿಸಬೇಕೆಂದು ಕರೆ ನೀಡಲಾಗುವುದು. ತಮ್ಮ ಶಿಷ್ಯ ಬಳಗ ಕೂಡ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಲಿದೆ ಎಂದರು.

ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ಬಹು
ಸಂಖ್ಯಾತರಿಂದ ತೊಂದರೆ ಗೊಳಪಟ್ಟವರು ಇದ್ದಾರೆ. ಕೇಂದ್ರ ಸರ್ಕಾರದ ಕಾಯ್ದೆಯಿಂದ ಶೋಷಿತರಿಗೆ ಅನುಕೂಲವಾಗಲಿದೆ. ಆದರೆ, ದೇಶದಲ್ಲಿ ಇಲ್ಲ-ಸಲ್ಲದ ವದಂತಿ ಹಬ್ಬಿಸುವ ಕೆಲಸವಾಗುತ್ತಿದೆ. ಮುಸ್ಲಿಂರಲ್ಲಿ ದ್ವೇಷದ ವಿಷ ಬೀಜ ಬಿತ್ತಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ನೊಂದವರಿಗೆ ರಕ್ಷಣೆ ಕೊಡುವುದು ನಮ್ಮ ಧರ್ಮವಾಗಿದೆ ಎಂದರು.

ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ, ಸ್ಪೇಷನ್‌ ಬಬಲಾದನ ರೇವಣ್ಣಸಿದ್ದ ಶಿವಾಚಾರ್ಯರು, ಮುರಾಹರಿ ಮಹಾರಾಜ, ಅನೀಲ ಮಹಾರಾಜ, ದಕ್ಷಿಣ ಕನ್ನಡ ಸಂಘ ಹಾಗೂ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ನರಸಿಂಹ ಮೆಂಡನ್‌, ಜೈನ್‌ ಸಮಾಜದ ಅಧ್ಯಕ್ಷ ನಾಗನಾಥ ಚಿಂದೆ, ಡಾ| ರಾಘವೇಂದ್ರ
ಚಿಂಚನಸೂರ, ನಾಗರಿಕ ಸಮಿತಿ ಸದಸ್ಯರಾದ ಎಂ.ಎಸ್‌. ಪಾಟೀಲ ನರಿಬೋಳ, ಶರಣಬಸಪ್ಪ ಅಂಬೆಸಿಂಗೆ, ಸಿದ್ರರಾಜ ಬಿರಾದಾರ, ಮಂಜುನಾಥ ಕಾಳೆ, ರವೀಂದ್ರ ಮುತ್ತಿನ, ಸಿದ್ದು ಹಿರೇಮಠ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next