ಕಲಬುರಗಿ: ದಕ್ಷಿಣಮತಕ್ಷೇತ್ರದ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ ಜನ್ಮ ದಿನಾಚರಣೆ ಅಂಗವಾಗಿ ಫೆ. 28ರಂದು ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್ ಉದ್ಯೋಗ ಮೇಳಕ್ಕೆ ಭರದ ಸಿದ್ಧತೆಗಳು ನಡೆದಿವೆ.
ಬೃಹತ್ ಉದ್ಯೋಗಮೇಳದಲ್ಲಿ 150ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಈಗಾಗಲೇ ಎರಡು ಸಾವಿರ ಸಮೀಪ ಯುವಕರು ತಮ್ಮ ಹೆಸರುಗಳನ್ನು ಆನ್‌ಲೈನ್‌ದ ಮೂಲಕ ನೋಂದಾಯಿಸಿದ್ದಾರೆ. ಉದ್ಯೋಗ ಮೇಳಕ್ಕೆ ಬೃಹತ್ ವೇದಿಕೆ ನಿರ್ಮಿಸಲು ಶುಕ್ರವಾರ ಶಾಸ್ತ್ರೋಕ್ತವಾಗಿ ಭೂಮಿ ಪೂಜೆ ನೆರವೇರಿಸಲಾಗಿದ್ದು, ಬೃಹತ್ ಮಂಟದ ನಿರ್ಮಾಣ ಕಾರ್ಯ ಹಗಲಿರಳು ನಡೆದಿವೆ.
ವಿವಿಧ ಸಮಾಜದವರ ಸಭೆ: ಬೃಹತ್ ಉದ್ಯೋಗದ ಸದುಪಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ನಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿವಿಧ ಸಮಾಜದ ಸಭೆ ನಡೆಸಿ ಜಾಗೃತಿ ಮೂಡಿಸಲಾಗುತ್ತಿದೆ. ಹತ್ತಾರು ಧ್ವನಿವರ್ಧಕ ಮೂಲಕ ಜನರಲ್ಲಿ ಮಾಹಿತಿ ನೀಡುವ ಕಾರ್ಯವೂ ಮತ್ತೂಂದು ನಿಟ್ಟಿನಲ್ಲಿ ನಡೆದಿದೆ. ಆದರ್ಶ ಹಾಸ್ಪಿಟಲ್ ಮುಖ್ಯಸ್ಥ ಡಾ| ಅಲೋಕ ಸಿ. ಪಾಟೀಲ ಅವರು ಈಗಾಗಲೇ ಉದ್ಯೋಗ ಮೇಳದ ನಿಟ್ಟಿನಲ್ಲಿ ಉಚಿತ ಆರೋಗ್ಯ ತಪಾಸಣಾ ಹಾಗೂ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ನಡೆಸಿದ್ದಾರೆ. ಲಿಂ. ಚಂದ್ರಶೇಖರ ಪಾಟೀಲ ಅಭಿಮಾನಿಗಳ ಸಂಘ ಹಾಗೂ ಎಪಿಎಂಸಿ ಅಧ್ಯಕ್ಷ ಅಪ್ಪು ಕಣಕಿ, ಮುಖಂಡರಾದ ಶರಣಬಸಪ್ಪ ಪಾಟೀಲ ಅಷ್ಠಗಿ, ದಯಾಘನ ಧಾರವಾಡಕರ್, ವಿಜಯಕುಮಾರ ಸೇವಲಾನಿ, ಪ್ರಭುಲಿಂಗ ಹಾದಿಮನಿ, ರಾಮು ಗುಮ್ಮಟ, ಅಪ್ಪಾಸಾಬ ಪಾಟೀಲ್ ಗೊಬ್ಬುರ, ಶಾಂತಕುಮಾರ ದುಧನಿ, ಮಹೇಶ ರೆಡ್ಡಿ, ಮಹಾದೇವ ಬೆಳಮಗಿ, ಸಂಗಮೇಶ ರಾಜೋಳೆ, ಶ್ರೀನಿವಾಸ ದೇಸಾಯಿ, ಮಲ್ಲು ಉದನೂರ, ಸುನೀಲ ಬನಶೆಟ್ಟಿ, ಜಗು ನೀಲಾ, ಗುರು ಸುಲ್ತಾನಪುರ, ಸೂರಜ್ ತಿವಾರಿ, ವಿಜಕುಮಾರ ಹಲಕರ್ಟಿ, ಹಣಮಂತ ಪಾಟೀಲ, ಶರಣುರೆಡ್ಡಿ, ಚೇತನ ತಡಕಲ್, ಶಿವಾನಂದ ಪಾಟೀಲ ಅಷ್ಠಗಿ, ನಾಗರಾಜ ಗುಂಡಗುರ್ತಿ, ಬಸವರಾಜ ನಾಶಿ, ವಿಶಾಲ ದರ್ಗಿ, ರಾಜು ವಾಡೇಕಾರ, ವೀರಣ್ಣ ಹೊನ್ನಳ್ಳಿ, ಪೀರಶೆಟ್ಟಿ ಸೋಮಾ ಮುಂತಾದವರಿದ್ದರು.