Advertisement

ಬಸಲಿಂಗಯ್ಯ ಹಿರೇಮಠಗೆ ಬೀಳ್ಕೊಡುಗೆ

03:39 PM Jun 04, 2020 | Naveen |

ಕಲಬುರಗಿ: ಕಾಯಕವೇ ಕೈಲಾಸವೆಂದು ಸೇವೆಯುದ್ದಕ್ಕೂ ಉತ್ತಮ ಸೇವೆ ಸಲ್ಲಿಸಿದ್ದ ಪಿಎಸ್‌ಐ ಹುದ್ದೆಯೊಂದಿಗೆ ನಿವೃತ್ತಿಯಾಗಿರುವ ಬಸಲಿಂಗಯ್ಯ ಹಿರೇಮಠ ಬಸವಣ್ಣನವರ ಕರ್ಮಭೂಮಿಯಲ್ಲಿ ಪದೋನ್ನತ್ತಿ ಪಡೆದು ನಿವೃತ್ತಿಯಾಗುತ್ತಿರುವುದು ಸಂತಸ ತಂದಿದೆ ಎಂದು ಅಬಕಾರಿ ಇಲಾಖೆ ಜಂಟಿ ಆಯುಕ್ತ ಎಸ್‌.ಕೆ. ಕುಮಾರ ಹೇಳಿದರು.

Advertisement

ನಗರದ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಆಯೋಜಿಸಿದ ಸೇವಾ ನಿವೃತ್ತಿ ಮತ್ತು ಪದೋನ್ನತಿ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸದಾ ಹಸನ್ಮುಖೀ ಬಸಲಿಂಗಯ್ಯನವರಿಗೆ ಇನ್ನೇನು ಹಿರಿಯ ರಕ್ಷಕ ಹುದ್ದೆಯಿಂದ ನಿವೃತ್ತಿ ಹೊಂದುತ್ತಾರೆ ಎನ್ನುವ ಕೆಲವೇ ಕ್ಷಣದಲ್ಲಿ ಸರಕಾರ ಪಿಎಸ್‌ಐ ಹುದ್ದೆಗೆ ಪದೋನ್ನತ್ತಿ ನೀಡಿ ಆದೇಶಿಸಿರುವುದು ಅವರಿಗೆ ನೀಡಿದ ಪದೋನ್ನತಿ ಉಡುಗೊರೆಯೆಂತಲೇ ಹೇಳಬೇಕು ಎಂದು ಪ್ರಶಂಸಿಸಿದರು.

ಅಧೀಕ್ಷಕರ ಹುದ್ದೆಗೆ ಪದೋನ್ನತಿ ಹೊಂದಿರುವ ಸಂಜಯಕುಮಾರ ಗ್ಲ್ಯಾಡಸನ್‌, ಇಂದೂಮತಿ ಹಾಗೂ ಅದೇ ಹುದ್ದೆಗೆ ಪದೋನ್ನತಿ ಹೊಂದಿದ್ದರೂ ಅದನ್ನು ನಿರಾಕರಿಸಿರುವ ಮಹ್ಮದ್‌ ಇಸ್ಲಾಯಿಲ್‌ ಇನಾಮದಾರಗೆ ಸತ್ಕಾರ ನೀಡಿ ಬೀಳ್ಕೊಡಲಾಯಿತು. ಅಬಕಾರಿ ಅಧೀಕ್ಷಕ ಸಂಗನಗೌಡ ಪಾಟೀಲ ಮಾತನಾಡಿದರು. ಅಬಕಾರಿ ನಿರೀಕ್ಷಕರಾದ ಬಾಲಕೃಷ್ಣ ಮದುಕಣ್ಣ, ಗೋಪಾಲ ಪಂಡಿತ, ವನಿತಾ ಸಿತಾಳೆ, ಕಚೇರಿ ಅಧೀಕ್ಷಕ ಸಂಜಯಸಿಂಗ್‌, ಸೈಯ್ಯದ್‌ ನಜರೊದ್ದೀನ್‌, ಉಮೇಶ್‌ ಷನ್ಮುಖ, ಸಂತೋಷ ಕಡಿಮನಿ, ಶರಣು ಮೋತಕಪಲ್ಲಿ ಸೇರಿದಂತೆ ಹಲವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಅಬಕಾರಿ ನಿರೀಕ್ಷಕ ವಿಠಲ ವಾಲಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next