Advertisement

ಕಲಬುರಗಿ : ನಾಳೆಯೂ ಶಾಲಾ –ಕಾಲೇಜ್ ಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ

08:43 PM Jul 10, 2022 | Team Udayavani |

ಕಲಬುರಗಿ : ಮಳೆ ಬರುವ ಮುನ್ಸೂಚನೆ ಹಿನ್ನೆಲೆಯಲ್ಲಿ ಜುಲೈ 11ರ ಸೋಮವಾರದಂದು ಜಿಲ್ಲೆಯಾದ್ಯಂತ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Advertisement

ಗುರುವಾರ ಶುಕ್ರವಾರ ಈ ಎರಡು ದಿನ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ದಿನವೂ ರಜೆ ಘೋಷಿಸಲಾಗಿತ್ತು. ರವಿವಾರ ದಿನ ಮೋಡ ಕವಿದ ವಾತಾವರಣವಿತ್ತು. ಭಾರಿ ಮಳೆ‌ ಬರುವ ಮುನ್ಸೂಚನೆ ಕಂಡು ಬಂದಿತ್ತು. ಆದರೆ ಮಳೆ ಬಾರದಿರುವುದು ಸ್ವಲ್ಪ ನೆಮ್ಮದಿ ತಂದಿತ್ತು.‌ ಆದರೆ ಸೋಮವಾರ ಭಾರಿ ಮಳೆ‌ ಬರುವ ಸಾಧ್ಯತೆ ಯನ್ನು ಮನಗಂಡು ಜಿಲ್ಲಾಧಿಕಾರಿ ಯಶವಂತ ಗುರುಕರ್ ರಜೆ ಘೋಷಿಸಿದ್ದಾರೆ.

ರವಿವಾರ ದಿನ ವ್ಯಾಪಕ ಮಳೆಯಾಗದಿದ್ದರೂ ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಶನಿವಾರ ದಿನವಂತು ದಿನ ತುಂತುರು ಹಾಗೂ ಸ್ವಲ್ಪ ಜೋರಾಗಿ ಮಳೆ ಸುರಿದಿತ್ತು.‌

ಇದನ್ನೂ ಓದಿ : ರಾಷ್ಟ್ರಪತಿ ಚುನಾವಣೆ: ಔಪಚಾರಿಕಕ್ಕೆ ಮಾತ್ರ ಯಶವಂತ ಸಿನ್ಹಾ ಪ್ರವಾಸ

 

Advertisement
Advertisement

Udayavani is now on Telegram. Click here to join our channel and stay updated with the latest news.

Next