Advertisement

ಕೋವಿಡ್ ಪತ್ತೆ ಲ್ಯಾಬ್‌: ಸಿಯುಸಿ ಆಯ್ಕೆ

05:19 PM May 28, 2020 | Naveen |

ಕಲಬುರಗಿ: ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕು ಪತ್ತೆ ಪ್ರಯೋಗಾಲಯ ಸ್ಥಾಪನೆಗೆ ಆಳಂದ ತಾಲೂಕಿನ ಕಡಗಂಚಿ ಸಮೀಪದ ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯ (ಸಿಯುಕೆ) ಆಯ್ಕೆಯಾಗಿದೆ ಎಂದು ಕುಲಪತಿ ಪ್ರೊ| ಎಚ್‌.ಎಂ. ಮಹೇಶ್ವರಯ್ಯ ತಿಳಿಸಿದ್ದಾರೆ.

Advertisement

ಕೋವಿಡ್ ಮಹಾಮಾರಿ ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಯೋಗಾಲಯಗಳ ಪಾತ್ರ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಸೌಲಭ್ಯಗಳು ಕುರಿತು ಪ್ರಸ್ತಾವ ಸಲ್ಲಿಸುವಂತೆ ದೇಶದ ಎಲ್ಲ ಕೇಂದ್ರೀಯ ವಿವಿಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸೂಚಿಸಿತ್ತು. ಇದರಲ್ಲಿ ಆಯ್ಕೆಯಾದ ಕೆಲವೇ ಕೆಲ ವಿವಿಗಳಲ್ಲಿ ಸಿಯುಕೆ ಒಂದಾಗಿದೆ ಎಂದಿದ್ದಾರೆ.

ವಿವಿಯ ಸ್ಕೂಲ್‌ ಆಫ್‌ ಲೈಫ್‌ ಸೈನ್ಸ್‌ ವಿಭಾಗದಲ್ಲಿ ಐಸಿಎಂಆರ್‌ ಅನುಮೋದಿತ 2ನೇ ಮಟ್ಟದ 1.5 ಕೋಟಿ ರೂ. ವೆಚ್ಚದ ಅತ್ಯಾಧುನಿಕ ಉಪಕರಣಗಳು ಹೊಂದಿದೆ. ಐಸಿಎಂಆರ್‌ ಮಾರ್ಗಸೂಚಿ ಅನ್ವಯ ಲ್ಯಾಬ್‌ ಸ್ಥಾಪನೆಯಾಗಲಿದೆ. ಇದು ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಂಶೋಧನೆ ಮತ್ತು ತರಬೇತಿ ಕೇಂದ್ರವಾಗಲಿದೆ ಎಂದು ಹೇಳಿದ್ದಾರೆ.

ರಸಾಯನಶಾಸ್ತ್ರ ವಿಭಾಗದ ಹ್ಯಾಂಡ್‌ ಸ್ಯಾನಿಟೈಸರ್‌ ಮತ್ತು ಸೋಂಕು ನಿವಾರಕಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಆಡಳಿತ ಮತ್ತು ಶೈಕ್ಷಣಿಕ ಸಿಬ್ಬಂದಿ ಎಲ್ಲ ಸುರಕ್ಷತೆ ಮತ್ತು ಆರೋಗ್ಯ ಸೌಲಭ್ಯಕ್ಕೆ ಅನುಕೂಲವಾಗಲಿದೆ ಎಂದು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next