Advertisement

ನಿವೃತ್ತ ಯೋಧರ ವಜಾಕ್ಕೆ ಖಂಡನೆ

11:50 AM Jul 07, 2019 | Naveen |

ಕಲಬುರಗಿ: ಇಎಸ್‌ಐ ಆಸ್ಪತ್ರೆಯಲ್ಲಿ ನಿವೃತ್ತ ಅರ್ಧ ಸೈನಿಕ ಬಲ(ಪ್ಯಾರಾಮಿಲಿಟರಿ)ದ ಯೋಧರನ್ನು ಸುರಕ್ಷಾ ಸೇವೆಯಿಂದ ತೆಗೆದು ಹಾಕಿರುವುದನ್ನು ಖಂಡಿಸಿ ಇಎಸ್‌ಐ ಆಸ್ಪತ್ರೆ ದಿನಗೂಲಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಇಎಸ್‌ಐಸಿ ಆಸ್ಪತ್ರೆಯಲ್ಲಿ ನಿವೃತ್ತ ಸೈನಿಕ ಮತ್ತು ಅರೆ ಸೈನಿಕ ಯೋಧರು ಕಳೆದ ಮೂರು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದು, ಈ ವರೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡಿದ್ದಾರೆ. ಸುಮಾರು 80 ಜನ ಅರೆ ಸೇನಾ ಪಡೆಯ ನಿವೃತ್ತ ಸೈನಿಕರು ಹಾಗೂ ಡಿಫೆನ್ಸ್‌ ವತಿಯಿಂದ ಕೇವಲ 17 ಜನ ಭದ್ರತಾ ಸೇವೆಯನ್ನು ಮೇ 15ರ ವರೆಗೆ ಸಲ್ಲಿಸಿದ್ದಾರೆ. ಮೇ 16 ರಂದು ನೂತನವಾಗಿ ಬಂದ ಭದ್ರತಾ ಏಜೆನ್ಸಿ ವೇಣುಗೋಪಾಲರು ನಿಮಗೆ ಮೂರು ತಿಂಗಳ ಸಮಯ ನೀಡುವೆ. ಅಷ್ಟರಲ್ಲಿ ಸಂಸದರಿಂದ ಪತ್ರ ತಂದುಕೊಟ್ಟರೇ ಸೇವೆ ಮುಂದುವರಿಯುತ್ತದೆ ಎಂದು ಹೇಳಿದ್ದಾರಾದರೂ ಕೆಲವೇ ದಿನಗಳಲ್ಲಿ ಇವರ ಸೇವೆಯನ್ನು ವಜಾಗೊಳಿಸಿದ್ದಾರೆ ಎಂದರು.

ಪುಣೆ, ಅಹ್ಮದನಗರ, ಲಾತೂರ, ಉಸ್ಮಾನಾಬಾದ ಮುಂತಾದ ಕಡೆಯಿಂದ ಭದ್ರತಾ ಸಿಬ್ಬಂದಿಗಳನ್ನು ಕರೆಸಿದ್ದಾರೆ. ಸುಮಾರು 80 ಜನ ಭದ್ರತಾ ಸಿಬ್ಬಂದಿಗಳಿಗೆ ಯಾವುದೇ ಮುನ್ಸೂಚನೆಯಿಲ್ಲದೇ ಕೆಲಸದಿಂದ ವಜಾಗೊಳಿಸಿದ್ದಾರೆ. ಕೂಡಲೇ ವಜಾಗೊಳಿಸಿದವರನ್ನು ಮರುನೇಮಕ ಮಾಡಿಕೊಳ್ಳಬೇಕು. ಇಲ್ಲದಿದ್ದರೇ ಇಎಸ್‌ಐ ಆಸ್ಪತ್ರೆ ದಿನಗೂಲಿ ಸಿಬ್ಬಂದಿ ಉಗ್ರ ಹೋರಾಟ ಮಾಡಬೇಕಾಗುವುದು ಎಂದು ಎಚ್ಚರಿಸಿದರು.

ಸಂಘದ ಅಧ್ಯಕ್ಷ ಭಗವಾನ ಭುವಿ, ದಿಗಂಬರ ಕಾಂಬಳೆ, ಗೋಪಾಲರಾವ್‌, ಈಶ್ವರಪ್ಪ, ಬಸಪ್ಪ ಎಸ್‌.ಎಚ್., ರಾಮು ಪವಾರ, ಲಕ್ಷ್ಮೀಕಾಂತ, ಶ್ರಾವಣಕುಮಾರ ಹಾಗೂ ಕೆಲಸದಿಂದ ವಜಾಗೊಂಡ ಸಿಬ್ಬಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next