Advertisement
2009ರಂತೆ ಕಠಿಣ ಪರಿಸ್ಥಿತಿ2009ರ ಚುನಾವಣೆಯಲ್ಲಿ ಡಾ| ಮಲ್ಲಿಕಾರ್ಜುನ ಖರ್ಗೆ ಕೇವಲ 13,404 ಮತಗಳ ಅಂತರಿಂದ ಚುನಾಯಿತರಾಗಿದ್ದರು. ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಮುಖ್ಯವಾಗಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಚುನಾವಣೆ ವೇಳೆಯಲ್ಲಿ ಕ್ಷೇತ್ರದ 8 ವಿಧಾನಸಭೆ ಕ್ಷೇತ್ರಗಳ ಪೈಕಿ ಐದು ವಿಧಾನಸಭಾ ಸ್ಥಾನಗಳನ್ನು ಕಾಂಗ್ರೆಸ್ ಹೊಂದಿತ್ತು. ಆದರೆ 2014ರ ಚುನಾವಣೆಯಲ್ಲಿ ಮೋದಿ ಹವಾ ನಡುವೆ ಅತ್ಯಧಿಕ 74 ಸಾವಿರ ಮತಗಳಿಂದ ಖರ್ಗೆ ಪುನರಾಯ್ಕೆಯಾದರು. ಅಭಿವೃದಿಟಛಿ ಕಾರ್ಯಗಳ ಮೇಲೆ ಮತಯಾಚಿಸಿದ್ದರಿಂದ ಹಾಗೂ ಕ್ಷೇತ್ರ ವ್ಯಾಪ್ತಿಯ ಎಂಟು ಕ್ಷೇತ್ರದಲ್ಲಿ ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಶಾಸಕರು ಬಿಟ್ಟರೆ ಉಳಿದ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರು. ಆದರೆ ಬದಲಾದ ಇಂದಿನ ಪರಿಸ್ಥಿತಿಯಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂವರು ಬಿಜೆಪಿ ಶಾಸಕರಿದ್ದರೆ, ನಾಲ್ಕರಲ್ಲಿ ಕಾಂಗ್ರೆಸ್ ಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಇದೆನ್ನೆಲ್ಲ ಲೆಕ್ಕಚಾರ ಹಾಕಿದರೆ 2009ರಂತೆ ಕಾಂಗ್ರೆಸ್ ಪಕ್ಷಕ್ಕೆ ಸಂಕಷ್ಟ ಎದುರಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ಡಾ| ಎ.ಬಿ.ಮಾಲಕರೆಡ್ಡಿ, ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರು ಕಾಂಗ್ರೆಸ್ ಪಕ್ಷ ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾಗಿರುವುದು ಹಾಗೂ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿದ್ದ ಡಾ| ಉಮೇಶ ಜಾಧವ್ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಅಭ್ಯರ್ಥಿಯಾಗಿರುವುದು ನಿಜಕ್ಕೂ ಕಾಂಗ್ರೆಸ್‌ಗೆ ಅಗ್ನಿ ಪರೀಕ್ಷೆ ಎದುರಾದಂತಾಗಿದೆ.
ಮಾ.6ರಂದು ಚುನಾವಣೆ ಘೋಷಣೆ ಮುಂಚೆ ಕಲಬುರಗಿಗೆ ಬಂದು ಪಕ್ಷದ ರ್ಯಾಲಿ ಮುಖಾಂತರ ಚುನಾವಣಾ ಪ್ರಚಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತೂಮ್ಮೆ ಕಲಬುರಗಿಗೆ ಬಂದು ಪಕ್ಷದ ಪರ ಚುನಾವಣಾ ಭಾಷಣ ಮಾಡಲಿದ್ದಾರೆ ಎನ್ನಲಾಗಿದೆ. ಏ.19ರಂದು ಕಲಬುರಗಿಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಮೋದಿ ಬಂದರೆ ವರ್ಷದಲ್ಲೇ ಪ್ರಧಾನಿಯಾಗಿ ಮೂರು ಸಲ ಕಲಬುರಗಿಗೆ ಬಂದಂತಾಗುತ್ತದೆ. ಹೇಗಿದೆ ಜಾತಿ ಲೆಕ್ಕಾಚಾರ?
ಕ್ಷೇತ್ರದಲ್ಲಿ ಲಿಂಗಾಯತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಿರ್ಣಾಯಕರು ಇವರಾದರೂ ಮತ ವಿಭಜನೆಯಾಗುವ ಲಕ್ಷಣಗಳು ಕಂಡು ಬರುತ್ತಿವೆ. ಬಿಜೆಪಿ ಲಿಂಗಾಯತ ಹಾಗೂ ಬಂಜಾರ ಸಮುದಾಯವನ್ನು ನೆಚ್ಚಿಕೊಂಡರೆ, ಕಾಂಗ್ರೆಸ್ ಅಲ್ಪಸಂಖ್ಯಾತರು, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ
ವರ್ಗದವರನ್ನು ನೆಚ್ಚಿಕೊಂಡಿದೆ. ಲೋಕಸಭೆ ಕ್ಷೇತ್ರದಲ್ಲಿ ಒಟ್ಟಾರೆ 19.20 ಲಕ್ಷ ಮತದಾರರಿದ್ದಾರೆ.
ಲಿಂಗಾಯತರು, ಕುರುಬರು ಹಾಗೂ ಕಬ್ಬಲಿಗರ ಮತಗಳೇ ನಿರ್ಣಾಯಕವಾಗಲಿದ್ದು, ಇವರು
ಯಾರ ಕಡೆ ಹೆಚ್ಚಿಗೆ ವಾಲುತ್ತಾರೆಯೋ ಅವರಿಗೆ ಲಾಭವಾಗುವ ನಿರೀಕ್ಷೆಯಿದೆ. ಲಿಂಗಾಯತರು
5.20 ಲಕ್ಷ, ಕುರುಬರು 2 ಲಕ್ಷ, ಪರಿಶಿಷ್ಟ ಜಾತಿ 4 ಲಕ್ಷವಿದ್ದರೆ ಇದರಲ್ಲಿ ಬಂಜಾರ ಸಮುದಾಯದವರು
1.65 ಲಕ್ಷ ಇದ್ದಾರೆ. ಅದೇ ರೀತಿ ಮುಸ್ಲಿಂ 3 ಲಕ್ಷ ಹಾಗೂ ಕಬ್ಬಲಿಗರು (ಕೋಲಿ ಸಮಾಜ) 2.20 ಲಕ್ಷ
ಎಂಬುದಾಗಿ ಅಂದಾಜಿಸಲಾಗಿದೆ. ಹೀಗಾಗಿ ಯಾವ ಸಮಾಜದ ಮತಗಳನ್ನು ಯಾವ ನಿಟ್ಟಿನಲ್ಲಿ
ಸೆಳೆದುಕೊಳ್ಳಬಹುದು ಎಂಬುದನ್ನು ಎರಡೂ ಪಕ್ಷಗಳು ಲೆಕ್ಕಾಚಾರದಲ್ಲಿ ಮುಳುಗಿವೆ.