Advertisement

ಕಲಬುರಗಿಯಲ್ಲಿ ಹರಿಯಲಿದೆ ಅಮೃತ ಧಾರೆ

09:54 AM Jun 10, 2019 | Naveen |

ಕಲಬುರಗಿ: ಅತ್ಯಂತ ವಿಶಾಲ ಮತ್ತು ಶಾಂತವಾದ ಕಲಬುರಗಿ ಅಮೃತ ಸರೋವರದಲ್ಲಿ ಸದಾ ಅಮೃತ ಧಾರೆ ಹರಿಯಲಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಮುಖ್ಯಸ್ಥೆ, ಶತಾಯುಷಿ ರಾಜಯೋಗಿನಿ ದಾದಿ ಜಾನಕಿ ತಿಳಿಸಿದರು.

Advertisement

ನಗರ ಹೊರವಲಯದ ಗೀತಾ ನಗರದಲ್ಲಿರುವ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸುವರ್ಣ ಮಹೋತ್ಸವ, ಅಮೃತ ಸರೋವರ ರಿಟ್ರೀಟ್ ಸೆಂಟರ್‌ ಹಾಗೂ ಸಭಾಂಗಣವನ್ನು ರವಿವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಅಮೃತ ಸರೋವರದ ಸಭಾಂಗಣ ಅತ್ಯಂತ ಸುಂದರವಾಗಿದೆ. ಇದನ್ನು ಕಂಡು ನಾನು ಆಶ್ಚರ್ಯಚಕಿತಳಾಗಿದ್ದೇನೆ. ಇಂತಹ ಸಭಾಂಗಣ ಅಮೆರಿಕಾ, ಲಂಡನ್‌ನಲ್ಲೂ ನಾನು ನೋಡಿಲ್ಲ. ಶುಭ ಭಾವನೆಯಿಂದ ಎಲ್ಲರೂ ಚಿಂತನೆಯಲ್ಲಿ ತೊಡಗಿದರೆ ಇಲ್ಲಿ ಅಮೃತ ಧಾರೆ ಹರಿಯುತ್ತಲೇ ಇರುತ್ತದೆ ಎಂದರು.

ಮನುಷ್ಯನಿಗೆ ಶಾಂತಿ, ಪ್ರೇಮ, ಖುಷಿ ಬಹಳ ಮುಖ್ಯವಾಗಿ ಬೇಕು. ನಮ್ಮ ಐದು ಬೆರಳು ಸಮನಾಗಿಲ್ಲ. ಅದರಂತೆ ಎಲ್ಲರೂ ಸಮನಾಗಿರಲು ಸಾಧ್ಯವಿಲ್ಲ. ಯಾವುದಕ್ಕೂ ಭಯ ಪಡದೆ ಭಗವಂತನ ಮೇಲೆ ಶ್ರದ್ಧೆ ಇಟ್ಟು ಮನಸ್ಸನ್ನು ಶಾಂತವಾಗಿ ಇಟ್ಟುಕೊಂಡರೆ ಹರ್ಷ, ಸಂತೋಷದಿಂದ ಇರಲು ಸಾಧ್ಯ ಎಂದರು.

ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ ಮಾತನಾಡಿ, ವಿಶ್ವದ ಶಾಂತಿ ಮತ್ತು ಏಳ್ಗೆಗೆ ರಾಜಯೋಗಿನಿ ದಾದಿ ಜಾನಕಿ ಶ್ರಮಿಸುತ್ತಿದ್ದಾರೆ. ಪರಮಾತ್ಮನ ಸಂದೇಶ ತಲುಪಿಸುವ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ತಮ್ಮ 16ನೇ ವಯಸ್ಸಿನಿಂದಲೇ ಇಂತಹ ಕಾರ್ಯದಲ್ಲಿ ತೊಡಗಿರುವ ಅವರು 103 ವರ್ಷವಾದರೂ ವಿಶ್ರಾಂತಿ ಬಯಸದೇ ಇರುವುದು ನಮಗೆಲ್ಲ ಮಾದರಿ ಎಂದು ಹೇಳಿದರು

Advertisement

ವಿಶ್ವದಲ್ಲಿಯೇ ಸ್ಥಿರ ಮನಸ್ಸಿನ ಮಹಿಳೆ ಎನ್ನುವ ಖ್ಯಾತಿ ದಾದಿ ಜಾನಕಿ ಅವರದ್ದಾಗಿದೆ. ಮಹಿಳೆಯರ ಗೌರವ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಸೋದರ ಭಾವನೆಯಿಂದ ಸಮಾಜ ಸುಧಾರಣೆ ಎನ್ನುವುದರಲ್ಲಿ ದಾದಿ ಜಾನಕಿ ನಂಬಿಕೆ ಇಟ್ಟಿದ್ದಾರೆ ಎಂದರು.

ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ದಾದಿ ಜಾನಕಿ ಅವರು ಕಲಬುರಗಿ ಜನತೆಗೆ ಆಶೀರ್ವಾದ ಮಾಡಲು ಅಷ್ಟೇ ಬಂದಿಲ್ಲ. ಇಲ್ಲಿನ ಜನರ ನೀರು ಮತ್ತು ಜ್ಞಾನ ದಾಹ ನೀಗಿಸಲು ಬಂದಿದ್ದಾರೆ. ಅವರು ವಿಮಾನ ನಿಲ್ದಾಣದಲ್ಲಿ ಕಾಲಿಡುತ್ತಿದಂತೆ ಶನಿವಾರ ಮಳೆ ಸುರಿಯಿತು ಎಂದು ಬಣ್ಣಿಸಿದರು.

ಅಮೃತ ಸರೋವರ ಸಭಾಂಗಣ ಅದ್ಭುತವಾಗಿದೆ. ರಾಜಸ್ಥಾನದ ಮೌಂಟ್ ಅಬುವಿನಲ್ಲಿ ಸಿಗುವ ಭಕ್ತಿ ಮತ್ತು ಶ್ರದ್ಧೆಯನ್ನು ಕಲಬುರಗಿಯಲ್ಲೇ ಪಡೆಯಬಹುದಾಗಿದೆ ಎಂದು ಹೇಳಿದರು.

ಕಲಬುರಗಿ ವಲಯದ ಮುಖ್ಯಸ್ಥೆ ರಾಜಯೋಗಿನಿ ವಿಜಯಾ ಬೆಹನ್‌ ಸ್ವಾಗತಿಸಿದರು. ರಾಷ್ಟ್ರೀಯ ಸಂಚಾಲಕ ಪ್ರೇಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೈಸೂರಿನ ಲಕ್ಷ್ಮೀ ಬೆಹನ್‌, ಬೆಂಗಳೂರಿನ ಸರೋಜಾ ಬೆಹನ್‌, ನಿರ್ಮಲಾ ಬೆಹನ್‌, ಅಂಬಿಕಾ ಬೆಹನ್‌, ಪದ್ಮಾ ಬೆಹನ್‌, ಹಂಸಾ ಬೆಹನ್‌, ಮಹಾದೇವಿ ಬೆಹನ್‌, ರಾಗಿಣಿ ಬೆಹನ್‌, ಬಿ.ಕೆ. ಬಸವರಾಜ, ಕುಲದೀಪ ಮತ್ತು ರಾಜ್ಯದ ವಿವಿಧ ಜಿಲ್ಲೆಗಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣದಿಂದ ಬಂದಿದ್ದ ಭಕ್ತಾದಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next