Advertisement

8500ರೂ. ಬೆಂಬಲ ಬೆಲೆ ನಿಗದಿಪಡಿಸಿ

05:44 PM Jun 06, 2020 | Naveen |

ಕಲಬುರಗಿ: ತೊಗರಿಗೆ ಸೂಕ್ತ ಬೆಂಬಲ ಬೆಲೆ ನೀಡಲು ಬೆಂಬಲ ಬೆಲೆಯನ್ನು ಕನಿಷ್ಟ 8500 ರೂ. ನಿಗದಿಪಡಿಸುವಂತೆ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ್‌ ಧಂಗಾಪುರ ಪ್ರಧಾನಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

Advertisement

ಡಾ.ಸ್ವಾಮಿನಾಥನ್‌ ವರದಿಯಂತೆ ಶೇ. 50ರಷ್ಟು ಲಾಭಾಂಶ ಸೇರಿಸಿದರೆ 8125 ರೂ. ಆಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ತೊಗರಿಗೆ ಕನಿಷ್ಟ 8500 ರೂ. ಬೆಂಬಲ ಬೆಲೆ ನಿಗದಿ ಮಾಡಬೇಕಿತ್ತು. ಬಹು ಮುಖ್ಯವಾಗಿ ಮೂರು ತಿಂಗಳಿನ ಹೆಸರಿನ ಬೆಂಬಲ ಬೆಲೆ 7196 ರೂ. ಇರುವಾಗ, ಆರು ತಿಂಗಳಿನ ತೊಗರಿಗೆ ಸಾವಿರ ರೂ.ಗಿಂತಲೂ ಕಡಿಮೆ ನಿಗದಿ ಮಾಡಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಹೀಗಾಗಿ ತೊಗರಿಗೆ ಸೂಕ್ತ ಬೆಂಬಲದ ಬೆಲೆ ನೀಡುವಂತೆ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಧಂಗಾಪುರ ಪತ್ರ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next