Advertisement

ಬೆಳಗಿನ ಜಾವ ಜಿಲ್ಲಾದ್ಯಂತ 20 ಮಿ.ಮೀ ಮಳೆ

06:05 PM Jun 29, 2020 | Naveen |

ಕಲಬುರಗಿ: ರವಿವಾರ ಬೆಳಗಿನ ಜಾವ ಜಿಲ್ಲೆಯಾದ್ಯಂತ 20 ಮಿ.ಮೀ ಅಂದರೆ 2 ಸೆಂ.ಮೀ ಮಳೆಯಾಗಿದೆ.

Advertisement

ಮುಂಗಾರು ಆರಂಭದ ಮುಂಚೆ ಬಂದ ಮಳೆಗೆ ರೈತ ಕಳೆದೊಂದು ವಾರದಿಂದ ಬಿತ್ತನೆಯಲ್ಲಿ ತೊಡಗಿದ್ದ, ಈಗಾಗಲೇ ಜಿಲ್ಲೆಯಾದ್ಯಂತ ಶೇ. 45ರಷ್ಟು ಬಿತ್ತನೆಯಾಗಿದೆ. ಮುಂದೆ ಬಿತ್ತನೆ ಮಾಡಲಿರುವ ಹಾಗೂ ಈಗ ಬಿತ್ತನೆಯಾಗಿರುವ ಬೆಳೆಗೆ ಈ ಮಳೆ ಸಂಜೀವಿನಿ ಎನ್ನುವಂತೆ ಬಂದಿದೆ.

ಕೆಲವೆಡೆ ಧಾರಕಾರ ಮಳೆಗೆ ತೆಗ್ಗಿನ ಪ್ರದೇಶ ನೀರಿನಲ್ಲಿ ಕೊಚ್ಚಿಕೊಂಡು ವರದಿಯಾಗಿದ್ದರೆ, ಮಗದೊಡೆ ಹಳ್ಳ-ಕೊಳ್ಳಗಳಿಗೆ ನೀರು ಹರಿದು ಬಂದಿದೆ. ಒಟ್ಟಾರೆ ರವಿವಾರ ಬೆಳಗಿನ ಜಾವದಿಂದ 1:30ರಿಂದ ಮೂರುವರೆ ಗಂಟೆವರೆಗೆ ಜಿಲ್ಲೆಯಾದ್ಯಂತ ಉತ್ತಮವಾಗಿ ಮಳೆ ಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next