Advertisement
ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ ಹೊಂದಿರುವ ಕಲಬುರಗಿಗೆ ಈ ಸಲವಾದರೂ ಒಂದು ಸ್ಥಾನವಾದರೂ ಸಿಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆ ಠುಸ್ಸಾಗಿದೆ.
Related Articles
Advertisement
ಈ ಸಲ ಕೊಪ್ಪಳದ ಹಾಲಪ್ಪಚಾರ್ಯ, ಯಾದಗಿರಿಯಿಂದ ರಾಜುಗೌಡ, ಕಲಬುರಗಿಯಿಂದ ಸುಭಾಷ ಆರ್. ಗುತ್ತೇದಾರ, ದತ್ತಾತ್ರೇಯ ಪಾಟೀಲ್ ರೇವೂರ, ರಾಜಕುಮಾರ ಪಾಟೀಲ್ ತೇಲ್ಕೂರ ಮುಂತಾದವರ ಹೆಸರು ಸಚಿವ ಸ್ಥಾನಕ್ಕೆ ಪ್ರಮುಖವಾಗಿ ಕೇಳಿ ಬಂದಿತ್ತು. ಹಾಲಪ್ಪಚಾರ್ಯ ಹಾಗೂ ರಾಜುಗೌಡ ಹೆಸರು ಪಟ್ಟಿಯಲ್ಲಿ ಇದೆ ಎನ್ನಲಾಗಿತ್ತು. ಆದರೂ ಕೊನೆ ಘಳಿಗೆಯಲ್ಲಿ ಕೈ ತಪ್ಪಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಏಪ್ರಿಲ್, ಮೇ ತಿಂಗಳಲ್ಲಿ ಸಂಪುಟ ಪುನಾರಚನೆ ಯಾದರೆ ಆ ಸಂದರ್ಭದಲ್ಲಾದರೂ ಕಲಬುರಗಿ ಗೆ ಸಚಿವ ಸ್ಥಾನ ಸಿಗುವ ಬಗ್ಗೆ ದೃಢ ವಿಶ್ವಾಸ ಹೊಂದಲಾಗಿದೆ ಎಂದು ಬಿಜೆಪಿ ಕಲಬುರಗಿ ವಿಭಾಗೀಯ ಪ್ರಭಾರಿ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತಿಳಿಸಿದ್ದಾರೆ.
ನಿಯೋಗ: ಈ ಸಲ ಕಲಬುರಗಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪಕ್ಷದ ವರಿಷ್ಠರಿಂದ ದೃಢ ವಿಶ್ವಾಸ ದೊರಕಿತ್ತು. ಸ್ಥಾನ ಸಿಗದಿರುವ ಬಗ್ಗೆ ನಿರಾಸೆ ಉಂಟಾಗಿದೆ ಹೀಗಾಗಿ ಜಿಲ್ಲೆಯ ಐವರು ವಿಧಾನಸಭಾ ಸದಸ್ಯರು, ಮೂವರು ವಿಧಾನ ಪರಿಷತ್ ಸದಸ್ಯರು, ಸಂಸದರು ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ರೆಲ್ಲರೂ ಒಗ್ಗೂಡಿ ಸಿಎಂ ಹಾಗೂ ಪಕ್ಷದ ವರಿಷ್ಠರ ಬಳಿ ನಿಯೋಗ ಹೋಗಲಾಗುವುದು ಎಂದು ಕಲಬುರಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ತಿಳಿಸಿದ್ದಾರೆ.