Advertisement
ಬಿಜೆಪಿ ಪಕ್ಷದ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ ತಿಂಗಳಿನಿಂದಲೂ ಮಳೆ ಕೊರತೆಯಿದ್ದರೂ ಸಿಎಂ ಸಿದ್ದರಾಮಯ್ಯ ಕಿಸಾನ್ ಸಮ್ಮಾನ ನಿಧಿ ಯೋಜನೆ ಬಂದ್ ಮಾಡಿದ್ದೇಕೆ? ಉತ್ತರ ಪ್ರದೇಶ, ಮಹಾರಾಷ್ಟ್ರ ನಂತರ ಕರ್ನಾಟಕದಲ್ಲೇ ಹೆಚ್ಚಿನ ರೈತರಿದ್ದಾರೆ. ಇದರರ್ಥ ರೈತರ ಬಗೆಗೆ ರಾಜ್ಯ ಸರ್ಕಾರದ ಕಾಳಜಿ ಇಲ್ಲ ಎಂಬುದು ಸಾಬೀತಾಗುತ್ತದೆ ಎಂದು ಟೀಕಿಸಿದರು.
Related Articles
Advertisement
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 9 ಸಲ ಶಾಸಕರು ಹಾಗೂ ಎರಡು ಸಲ ಸಂಸದರಾಗಿ ಎಲ್ಲ ಹಂತದ ಆಡಳಿತ ಅಧಿಕಾರ ಹೊಂದಿದ್ದರೂ ಜತೆಗೆ ಅವರ ಮಗ ಮೂರು ಸಲ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದರೂ ಕಲಬುರಗಿ ಭಾಗ ಏಕೆ ಹಿಂದುಳಿಯುವಂತಾಗಿದೆ ಎಂಬುದು ಮತದಾರರಿಗೆ ಮನವರಿಕೆವಿದ್ದು ಇದೇ ಕಾರಣಕ್ಕೆ ಡಾ. ಉಮೇಶ ಜಾಧವ್ ಮತ್ತೊಮ್ಮೆ ಭಾರಿ ಅಂತರದಿಂದ ಸಂಸದರಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ಡಾ. ಉಮೇಶ ಜಾಧವ್, ಶಾಸಕರಾದ ಬಿ.ಜಿ.ಪಾಟೀಲ್, ಶಶೀಲ್ ನಮೋಶಿ, ಬಸವರಾಜ ಮತ್ತಿಮಡು, ರಘುನಾಥ್ ಮಲ್ಕಾಪುರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ನಗರಾಧ್ಯಕ್ಷ ಚಂದು ಪಾಟೀಲ್, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಸೇರಿದಂತೆ ಮುಂತಾದವರಿದ್ದರು.