Advertisement
ಆಸ್ಪತ್ತೆಗೆ ದಾಖಲು ಮಾಡಿದ್ದಾಗ ಸಿಪಿಐ ಅವರ ಪಲ್ಸ್ ಹೆಚ್ಚಾಗಿತ್ತು, ಬಿಪಿ ಕಡಿಮೆ ಇತ್ತು. ಎದೆಯಲ್ಲಿ 8 ರಿಬ್ಸ್ ಗಳು ಮುರಿತಕ್ಕೊಳಗಾಗಿವೆ. ಜೀವ ಉಳಿಸುವ ಔಷಧಿಗಳನ್ನು ಕೊಡಲಾಗಿದೆ. ಸಿಪಿಐ ಇಲ್ಲಾಳ ಚೇತರಿಸಿಕೊಳ್ಳುತ್ತಿದ್ದಾರೆ. ಕಿಡ್ನಿ ಫಂಕ್ಷನ್ ಸಹಜ ಸ್ಥಿತಿಗೆ ಬಂದಿದೆ. ನಿನ್ನೆಗಿಂತ ಇವತ್ತು ಚೇತರಿಸಿಕೊಂಡಿದ್ದಾರೆ. ಪ್ರಮುಖವಾಗಿ ಒಳಪೆಟ್ಟಿನಿಂದ ಆಗ್ತಿದ್ದ ರಕ್ತಸ್ರಾವ ಕಡಿಮೆ ಆಗಿದೆ.ಆಕ್ಸಿಜನ್ ಅವಶ್ಯಕತೆ ಸಹ ಕಡಿಮೆ ಆಗಿದೆ. ಕಣ್ಣು ತೆರೆಯುವ ಪ್ರಯತ್ನ ಮಾಡುತ್ತಿದ್ದಾರೆ. ಎಲುಬು ಮುರಿತವಾಗಿದ್ದರಿಂದ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.ತಲೆಗೆ ಪೆಟ್ಟು ಬಿದ್ದಿರೋದ್ರಿಂದ ಬ್ಲಡ್ ಕ್ಲಾಟ್ ಆಗಿದೆ.ಒಟ್ಟಾರೆ ನಿನ್ನೆಗಿಂದ ಸಿಪಿಐ ಶ್ರೀಮಂತ ಇಲ್ಲಾಳ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಸಧ್ಯಕ್ಕೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ಯುನೈಟೆಡ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿಕ್ರಮ ಸಿದ್ದಾರೆಡ್ಡಿ, ಡಾ. ಸುದರ್ಶನ ಲಾಖೆ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಿದರು.
Related Articles
ಹೆಚ್ಚಿನ ಚಿಕಿತ್ಸೆಗಾಗಿ ಶ್ರೀಮಂತ್ ಇಲ್ಲಾಳರನ್ನ ಏರ್ ಲಿಫ್ಟ್ ಮಾಡಲು ಕುಟುಂಬಸ್ಥರು ಒಲುವು ಹೊಂದಿದ್ದಾರೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲು ಇಲ್ಲಾಳ ಕುಟುಂಬದವರು ಇಚ್ಚಿಸಿದ್ದಾರೆ.
Advertisement
ಕಲಬುರಗಿ ಆಸ್ಪತ್ರೆ ವೈದ್ಯರು , ಮಣಿಪಾಲ್ ಆಸ್ಪತ್ರೆ ವೈದ್ಯರು , ಏರ್ ಅಂಬುಲೆನ್ಸ್ ವೈದ್ಯರು ಪೊಲೀಸರು ಚರ್ಚೆ ನಡೆಸಿದ್ದಾರಲ್ಲದೇ ಮಣಿಪಾಲ್ ಆಸ್ಪತ್ರೆಯವರು ಎಲ್ಲಾ ರೀತಿಗ ಸಿದ್ದತೆ ಮಾಡಿಕೊಂಡಿದ್ದಾರೆ. ಏರ್ ಲಿಫ್ಟ್ ಮಾಡುವ ಕುರಿತು ಎಲ್ಲಾ ರೀತಿಯಲ್ಲಿ ತಯಾರಿ ನಡೆಯುತ್ತಿದೆ. ಒಟ್ಟಾರೆ ಕುಟುಂಬಸ್ಥರ ಅಂತಿಮ ನಿರ್ಧಾರದ ಬಳಿಕ ಏರ್ ಲಿಫ್ಟ್ ಮಾಡಲು ಉದ್ದೇಶಿಸಲಾಗಿದೆ.
ಸಿಪಿಐ ಮೇಲಿನಹಲ್ಲೆ ಪ್ರಕರಣ ಸಂಬಂಧ ಬೀದರ್ ನ ಮಂಠಾಳ ಪೊಲೀಸರು 11 ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಮುಖ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ಎಸ್ಪಿ ಇಶಾ ಪಂತ್ ತಿಳಿಸಿದರು.
ಆಸ್ಪತ್ರೆಗೆ ಭೇಟಿಗಾಂಜಾ ದಂಧೆಕೋರರಿಂದ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಯುನೈಟೆಡ್ ಆಸ್ಪತ್ರೆಗೆ ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೇವೂರ, ಸದ್ಯ ಇಲ್ಲಾಳ್‌ರ ಆರೋಗ್ಯದಲ್ಲಿ ನಿನ್ನೆಗಿಂತ ಇಂದು ಚೇತರಿಕೆ ಕಂಡಿದೆ. ಕುಟುಂಬಸ್ಥರ ಜೊತೆ ಮಾತುಕತೆ ನಡೆಸಲಾಗಿದೆ. ಸರಕಾರ ನಿಮ್ಮೊಂದಿದೆ ಇದೆ ಅಂತಾ ಕುಟುಂಬಸ್ಥರಿಗೆ ಹೇಳಿದ್ದೇವೆ. ಯಾವುದೇ ರೀತಿಯ ಚಿಕಿತ್ಸೆ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಹೇಳಿದ್ದಾರೆ. ಆರೋಗ್ಯ ಸ್ಥಿತಿಗತಿ ಬಗ್ಗೆ ವೈದ್ಯರ ಜೊತೆ ಚರ್ಚೆ ನಡೆಸಲಾಗಿದೆ. ಸಧ್ಯ ಇಲ್ಲೆ ಚಿಕಿತ್ಸೆ ಮುಂದುವರಿಸಲು ಕುಟುಂಬಸ್ಥರು ಸಮ್ಮತಿಸಿದ್ದಾರೆ. ಅಗತ್ಯ ಬಿದ್ದರೆ ಸಿಪಿಐ ಇಲ್ಲಾಳ್‌ರನ್ನ ಏರ್‌ಲಿಫ್ಟ್ ಮಾಡಲಾಗುವುದು ಎಂದರು.