Advertisement

‘ಸಮಾಧಾನ್‌’ಯೋಜನೆಗೆ ಶರಣಬಸವ ವಿವಿ ಆವಿಷ್ಕಾರ ಆಯ್ಕೆ

11:41 AM Apr 20, 2020 | Naveen |

ಕಲಬುರಗಿ: ಕೋವಿಡ್‌ -19 ವಿರುದ್ಧ ರಾಷ್ಟ್ರದ ಹೋರಾಟ ಬಲಪಡಿಸುವ “ಸಮಾಧಾನ್‌’ ಯೋಜನೆಗಾಗಿ ಶರಣಬಸವ ವಿಶ್ವವಿದ್ಯಾಲಯದ ಅಧ್ಯಾಪಕರು, ವಿದ್ಯಾರ್ಥಿಗಳು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ಸಲ್ಲಿಸಿದ ಮೂರು ಯೋಜನೆ-ಆವಿಷ್ಕಾರಗಳು ಆಯ್ಕೆಯಾಗಿವೆ.

Advertisement

ಐಐಟಿ, ಐಐಎಂ ಹಾಗೂ ಇನ್ನಿತರ ವಿಶ್ವವಿದ್ಯಾಲಯ, ಕಾಲೇಜುಗಳು ಮತ್ತು ಉನ್ನತ ಶಿಕ್ಷಣ ಕೇಂದ್ರಗಳ ವಿದ್ಯಾರ್ಥಿಗಳು ಸಲ್ಲಿಸಿದ ಒಟ್ಟು 2500ಕ್ಕೂ ಹೆಚ್ಚು ಯೋಜನೆಗಳು ಮತ್ತು ಆವಿಷ್ಕಾರಗಳಲ್ಲಿ ಮುಂದಿನ ಸುತ್ತಿಗೆ 200 ಅತ್ಯುತ್ತಮ ಯೋಜನೆಗಳನ್ನು ಆಯ್ಕೆ ಮಾಡಲಾಗಿದೆ.

ಇವುಗಳಲ್ಲಿ ಶರಣಬಸವ ವಿವಿಯ ಮೂರು ಯೋಜನೆಗಳು ಇರುವುದು ಶ್ಲಾಘನೀಯವಾಗಿದೆ. ಐಐಟಿ, ಐಐಎಂ, ಎನ್‌ಐಟಿ, ಕೇಂದ್ರೀಯ ವಿಶ್ವವಿದ್ಯಾಲಯ, ಖಾಸಗಿ ವೃತ್ತಿಪರರು ಸೇರಿದಂತೆ ಹೆಸರಾಂತ ಉನ್ನತ ಶಿಕ್ಷಣ ಕೇಂದ್ರಗಳ ವಿದ್ಯಾರ್ಥಿಗಳು, ನಾವಿನ್ಯಕಾರರು, ಶಿಕ್ಷಕರು, ಶಿಕ್ಷಣತಜ್ಞರು ಇದರಲ್ಲಿ ಭಾಗವಹಿಸಿದ್ದಾರೆ. ತಾತ್ಕಾಲಿಕ ಪಟ್ಟಿಯಲ್ಲಿ ಗುರುತಿಸಿಕೊಂಡ ತಂಡಗಳು ಮುಂದಿನ ಹಂತದಲ್ಲಿ ವಿದ್ಯಾರ್ಥಿಗಳು, ಸಂಶೋಧಕರು, ಶಿಕ್ಷಣ ತಜ್ಞರು, ಉದ್ಯಮಿಗಳನ್ನು ತಾಂತ್ರಿಕ ಸುಧಾರಿತ ಪರಿಹಾರಗಳ ಕಾರ್ಯಸೂಚಿ ಪ್ರಸ್ತುತಪಡಿಸಲು ಆಹ್ವಾನಿಸಲಾಗುತ್ತದೆ.

ಶರಣಬಸವ ವಿಶ್ವವಿದ್ಯಾಲಯದ ಮಾಸ್ಟರ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಷನ್‌ ವಿಭಾಗದ ಡೀನ್‌ ಪ್ರೊ| ಕಿರಣ ಮಾಕಾ, ಎಲೆಕ್ಟ್ರಾನಿಕ್‌ ಆ್ಯಂಡ್‌ ಕಮ್ಯುನಿಕೇಷನ್‌ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಡಾ| ಶಿವಕುಮಾರ ಜವಳಗಿ ಮತ್ತು ತಂಡ, ಸಹಾಯಕ ಪ್ರಾಧ್ಯಾಪಕ ಕೈಲಾಸ ಪಾಟೀಲ, ಪ್ರೊ| ಸಂಜೀವ್‌ ಕುಮಾರ ಜೀವಣಗಿ, ಪ್ರೊ| ರೇಖಾ ಪಾಟೀಲ ಮತ್ತು 6ನೇ ಸೆಮಿಸ್ಟರ್‌ ವಿದ್ಯಾರ್ಥಿ ಗುಂಡೇರಾವ್‌ ಕುಲಕರ್ಣಿ, ಪ್ರೊ| ಮಯೂರ ಕೋಟಿ ಹಾಗೂ ಬಿಸಿನೆಸ್‌ ಅಡ್ಮಿನಿಸ್ಟ್ರೇಷನ್‌ ವಿಭಾಗದ ಪ್ರೊ| ಬಸವರಾಜ ಮಮ್ಮಣಿ ಅವರು ಸಲ್ಲಿಸಿದ ನೂತನ ಯೋಜನೆಗಳು ಮುಂದಿನ ಸುತ್ತಿನ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.

ಪ್ರೊ| ಕಿರಣ ಮಾಕಾ ಅವರು ಸಲ್ಲಿಸಿದ್ದ ಯೋಜನೆಯು ಸಾಂಕ್ರಾಮಿಕ ರೋಗ ಎದುರಿಸುತ್ತಿರುವ ಸಮಾಜಕ್ಕೆ ಸಹಾಯಕ ಲಭ್ಯವಾದ ಅವಕಾಶ ಹೇಗೆ ಬಳಸಿಕೊಳ್ಳಬಹುದು ಎನ್ನುವುದನ್ನು ತಿಳಿಸಿದ್ದಾರೆ. ಉದ್ಯಮಿಗಳು ಮತ್ತು ವ್ಯಾಪಾರಸ್ಥರು ಆನ್‌ಲೈನ್‌ ಹೆಲ್ತ್‌ಕೇರ್‌ ಡೆಲಿವರಿ ಪದ್ಧತಿ, ಮನೆ ಬಾಗಿಲಿಗೆ ಕಿರಾಣಿ ಪದಾರ್ಥ ವಿತರಣೆ ವ್ಯವಸ್ಥೆ, ಆನ್‌ಲೈನ್‌ ಶಿಕ್ಷಣ ವ್ಯವಸ್ಥೆ, ಆರೋಗ್ಯ ಸದೃಢತೆ ಕುರಿತು ಆನ್‌ಲೈನ್‌ ಕುರಿತು ಅರ್ಜಿ ನೀಡುವುದು ಹೇಗೆ ಎನ್ನುವುದನ್ನು ಯೋಜನೆಯಲ್ಲಿ ತಿಳಿಸಲಾಗಿದೆ.

Advertisement

ಇಸಿಇ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಲ್ಲಿಸಿದ ಎರಡನೇ ಯೋಜನೆಯು ಡ್ರೋಣ್‌ ಸಹಾಯದಿಂದ ಕೋವಿಡ್‌-19 ಶಂಕಿತ ರೋಗಿಗಳ ಉಷ್ಣ ತಪಾಸಣೆ, ಹೆಚ್ಚಿನ ಉಷ್ಣತೆಯಿರುವ ವ್ಯಕ್ತಿಗಳನ್ನು ಅವರವರ ಆಧಾರ ಕಾರ್ಡ್‌ ಆಧಾರದ ಮೇಲೆ ಗುರುತಿಸುವುದು, ಆಸ್ಪತ್ರೆಗೆ ದಾಖಲಿಸಲು ಅಧಿಕಾರಿಗಳನ್ನು ಎಚ್ಚರಿಸುವುದು, ಕೋವಿಡ್‌ -19 ರೋಗದಿಂದ ಬಳಲುತ್ತಿದ್ದಾರೆ ಇಲ್ಲವೋ ಎಂದು ಶಂಕಿತ ರೋಗಿಯನ್ನು ಪರೀಕ್ಷಿಸುವುದು, ವೈದ್ಯಕೀಯ ಸಿಬ್ಬಂದಿ ರೋಗ ಪೀಡಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಒಳಪಡದೇ ಹೇಗೆ ಕಾರ್ಯ ನಿರ್ವಹಿಸುವುದು ಎನ್ನುವ ಅಂಶಗಳನ್ನು ಪ್ರಸ್ತುತಪಡಿಸಿದ್ದಾರೆ.

ಪ್ರೊ| ಮಯೂರ್‌ ಕೋಟಿ, ಪ್ರೊ| ಬಸವರಾಜ ಮಮ್ಮಾಣಿ ಸಲ್ಲಿಸಿದ ಮೂರನೇ ಯೋಜನೆಯಲ್ಲಿ ಎಲ್ಲ ಶೈಕ್ಷಣಿಕ ಚಟುವಟಿಕೆ ಮುಚ್ಚಿದ ನಂತರ ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ಕಾಲೇಜುಗಳ ಕ್ಯಾಂಟಿನ್‌, ನಿಷ್ಕ್ರಿಯ ಅಡುಗೆ ಮನೆ ಹೇಗೆ ಬಳಸಿಕೊಳ್ಳಬಹುದು, ಕ್ಯಾಂಟಿನ್‌ ಗಳಲ್ಲಿ ಲಭ್ಯವಿರುವ ಮೂಲ ಸೌಕರ್ಯ ಸೌಲಭ್ಯ ಹೇಗೆ ಬಳಸಿಕೊಳ್ಳಬಹುದು ಎನ್ನುವುದರ ಕುರಿತು
ಪ್ರಸ್ತಾಪಿಸಿದ್ದಾರೆ.

ವಿಶ್ವವಿದ್ಯಾಲಯ ಕುಲಾ ಧಿಪತಿ ಪೂಜ್ಯ ಡಾ| ಶರಣಬಸವಪ್ಪ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೆರ್‌ಪರ್ಸನ್‌ರಾದ ಮಾತೋಶ್ರೀ ದಾಕ್ಷಾಯಿಣಿ ಅವ್ವ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿವಿ ಕುಲಪತಿ ಡಾ| ನಿರಂಜನ್‌ ವಿ. ನಿಷ್ಠಿ, ವಿವಿ ಕುಲಸಚಿವ ಡಾ| ಅನೀಲ ಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ| ಲಿಂಗರಾಜ ಶಾಸ್ತ್ರೀ, ಡೀನ್‌ ಲಕ್ಷ್ಮೀ ಪಾಟೀಲ, ಡಾ| ಬಸವರಾಜ ಮಠಪತಿ ಪ್ರಾಧ್ಯಾಪಕರ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ದೇಶಾದಂತ್ಯ ವೇಗವಾಗಿ ಹರಡುತ್ತಿರುವ ಕೋವಿಡ್‌-19 ಪರಿಣಾಮ ಎದುರಿಸಲು ಹೆಚ್ಚುತ್ತಿರುವ ಸವಾಲು ಎದುರಿಸಲು ಹಾಗೂ ಸಾಂಕ್ರಾಮಿಕ ರೋಗದ ವಿರುದ್ಧ ಸರ್ಕಾರಿ ಇಲಾಖೆಗಳು ನಡೆಸುತ್ತಿರುವ ಹೋರಾಟದಲ್ಲಿ ಕೈ ಜೋಡಿಸಲು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಶಿಕ್ಷಣ ತಜ್ಞರಿಗೆ ನೂತನ ಯೋಜನೆ ಹಾಗೂ ಆಲೋಚನೆ ಕುರಿತ ಆವಿಷ್ಕಾರ ಸಲ್ಲಿಸಲು ಆಹ್ವಾನಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next