Advertisement

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ರೈಲ್ವೆ ಸೌಲಭ್ಯಕ್ಕೆ ಆಗ್ರಹ

04:40 PM Jun 14, 2020 | Naveen |

ಕಲಬುರಗಿ: ಏಳೆಂಟು ವರ್ಷಗಳಾದರೂ ಮುಗಿಯದೇ ಸ್ಮಾರಕಗಳಾಗಿ ಉಳಿದಿರುವ ನಗರದ ರೈಲ್ವೆ ಮೇಲ್ಸೇತುವೆ ಮಾರ್ಗ ಮತ್ತು ಪಿಟ್‌ಲೈನ್ ‌ ಕಾಮಗಾರಿಗಳನ್ನು ಈಗಲಾದರೂ ಆದ್ಯತೆ ನೀಡಿ ಪೂರ್ಣಗೊಳಿಸುವಂತೆ ಇಲ್ಲಿನ ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ) ಆಗ್ರಹಿಸಿದೆ.

Advertisement

ಸೊಲಾಪುರ ಮಧ್ಯೆ ರೈಲ್ವೆಯ ವಿಭಾಗಿಯ ರೈಲ್ವೆ ವ್ಯವಸ್ಥಾಪಕ ಶೈಲೇಷ ಗುಪ್ತಾ ಅವರು ರೈಲ್ವೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ನಡೆಸಲಾದ ಸಂವಾದದಲ್ಲಿ ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಸಿ. ಪಾಟೀಲ, ಉಪಾಧ್ಯಕ್ಷ ಶರಣಬಸಪ್ಪ ಎಂ. ಪಪ್ಪಾ ಇತರರು ಪಾಲ್ಗೊಂಡು ಕಲ್ಯಾಣ ಕರ್ನಾಟಕ ಪ್ರದೇಶದ ರೈಲ್ವೆ ಬೇಡಿಕೆಗಳ ಕುರಿತಾಗಿ ಪಟ್ಟಿಯೊಂದನ್ನು ಸಲ್ಲಿಸಿದರು. ಸೊಲ್ಲಾಪುರ-ಬೆಂಗಳೂರು-ಹಾಸನ ರೈಲನ್ನು ಕಲಬುರಗಿ -ಬೆಂಗಳೂರು ನಡುವೆ ಮಾತ್ರ ಓಡಿಸುವುದು, ಕಲಬುರಗಿ- ಹೆ„ದರಾಬಾದ ಮತ್ತು ಕಲಬುರಗಿ-ಮುಂಬೈ ನಡುವೆ ಸರಕು ಸಾಗಾಣಿಕೆ ರೈಲುಗಳ ಸಂಚಾರ ಒದಗಿಸುವುದು ಅಗತ್ಯವಾಗಿದೆ. ವೃದ್ಧರ, ಸಣ್ಣ ಮಕ್ಕಳ ಮತ್ತು ವಿಕಲಚೇತನರ ಅನುಕೂಲಕ್ಕಾಗಿ ಕಲಬುರಗಿ ರೈಲು ನಿಲ್ದಾಣ ಪ್ಲಾಟ್‌ ಫಾರ್ಮದಲ್ಲಿ ವ್ಯವಸ್ಥೆ ಕಲ್ಪಿಸುವುದು, ಮುಖ್ಯವಾಗಿ ಮೇಲ್ಸೇತುವೆ ಮಾರ್ಗ ಮತ್ತು ಪಿಟ್‌ ಲೈನ್‌ ಕಾಮಗಾರಿಗಳನ್ನು ಪೂರ್ತಿಗೊಳಿಸುವಂತೆ ಒತ್ತಾಯಿಸಲಾಯಿತು.

ಕಲಬುರಗಿ ರೈಲು ನಿಲ್ದಾಣಕ್ಕೆ ಎ ದರ್ಜೆಯ ಎಲ್ಲ ಸೌಲಭ್ಯ ಒದಗಿಸುವುದು ಅಗತ್ಯವಿದೆ. ಚೆನ್ನೈ-ಮುಂಬೈ ಬ್ರಾಡ್‌ಗೇಜ್‌ ಮಾರ್ಗದಲ್ಲಿ ಕಲಬುರಗಿ ರೈಲು ನಿಲ್ದಾಣವು ದೇಶದ ಅತ್ಯಂತ ಪುರಾತನ ರೈಲು ನಿಲ್ದಾಣವಾಗಿದೆ. ಸೊಲ್ಲಾಪುರ ರೈಲ್ವೆ ವಿಭಾಗಕ್ಕೆ ಈ ರೈಲು ನಿಲ್ದಾಣದಿಂದ ಶೇ. 40ರಿಂದ ಶೇ. 50ರಷ್ಟು ಆದಾಯ ಸಲ್ಲಿಸುತ್ತದೆ. ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಈ ರೈಲು ನಿಲ್ದಾಣದಿಂದ ಪ್ರಯಾಣಿಸುತ್ತಾರೆ. ಆದರೆ ಈ ರೈಲು ನಿಲ್ದಾಣವು ಆಧುನಿಕ ಸೌಲಭ್ಯ ಹೊಂದಿಲ್ಲ. ಆದ್ದರಿಂದ ಈ ರೈಲು ನಿಲ್ದಾಣದಲ್ಲಿ ಎ ದರ್ಜೆಯ ಆಧುನಿಕ ಸೌಲಭ್ಯಗಳಾಗಿರುವ ವೈ-ಫೈ, ಏಸ್ಕಲೇಟರ್ಸ್‌, ಲಿಫ್ಟ್‌ ಹಾಗೂ ಮಿನರಲ್‌ ವಾಟರ್ಸ್‌ಗಳ ಅಂಗಡಿಗಳನ್ನು ವ್ಯವಸ್ಥೆ ಮಾಡಬೇಕೆಂದು ಕೋರಿದರು. ಈ ಎಲ್ಲ ಬೇಡಿಕೆಗಳಿಗೆ ಅಧಿಕಾರಿ ಶೈಲೇಶ ಗುಪ್ತಾ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next