Advertisement

ಸರ್ಕಾರದಿಂದ ಪಪ್ಪಾಯಿ ಖರೀದಿಸಲು ಮನವಿ

06:35 PM Apr 16, 2020 | Team Udayavani |

ಕಲಬುರಗಿ: ಚಿಂಚೋಳಿ ಮತಕ್ಷೇತ್ರದ ರಾಜಾಪುರ ಗ್ರಾಮದಲ್ಲಿ ಜಗದೀಶ ಪಾಟೀಲ ತಮ್ಮ 15 ಎಕರೆ ತೋಟದಲ್ಲಿ 20 ಲಕ್ಷ ರೂ. ಖರ್ಚು
ಮಾಡಿ ಸುಮಾರು ಒಂದೂವರೆ ಕೋಟಿ ರೂ. ಬೆಲೆ ಬಾಳುವ ಪಪ್ಪಾಯಿ ಬೆಳೆದಿದ್ದು, ಇವುಗಳನ್ನು ಸರಕಾರದಿಂದ ಖರೀದಿಸುವ ವ್ಯವಸ್ಥೆ ಮಾಡಿಸಬೇಕು ಎಂದು ಕಲ್ಯಾಣ ಕರ್ನಾಟಕ ತೋಟಗಾರಿಕೆ, ಕೃಷಿ, ಅರಣ್ಯ ಮತ್ತು ಪರಿಸರ ಸಂರಕ್ಷಣೆ ಸಮಿತಿಯು ಚಿಂಚೋಳಿ ಶಾಸಕ ಡಾ| ಅವಿನಾಶ ಜಾಧವಗೆ ಮನವಿ ಸಲ್ಲಿಸಿದೆ.

Advertisement

ಇದಕ್ಕೆ ಸ್ಪಂದಿಸಿದ ಶಾಸಕರು ಸಚಿವ ಬಿ.ಸಿ. ಪಾಟೀಲ ಅವರೊಂದಿಗೆ ಚರ್ಚಿಸಿ, ಜಿಲ್ಲಾ ಧಿಕಾರಿ ಮತ್ತು ತೋಟಗಾರಿಕೆ ಇಲಾಖೆ ಮುಖಾಂತರ ಖರೀದಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಜಿಲ್ಲೆಯಲ್ಲಿ ಸಾವಿರಾರು ರೈತರು ಪಪ್ಪಾಯಿ, ಕಲ್ಲಂಗಡಿ, ಕರಬೂಜ, ಬಾಳೆ ಮುಂತಾದ ಹಣ್ಣುಗಳನ್ನು ಬೆಳೆದಿದ್ದಾರೆ. ಈ ಹಣ್ಣುಗಳನ್ನು ಖರೀದಿ ಮಾಡದೇ ಇರುವುದರಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ. ಈಗಾಗಲೇ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಬೆಳೆದ ಹಣ್ಣುಗಳನ್ನು ಸರಕಾರದಿಂದ ಖರೀದಿಸುವಂತೆ ಮತ್ತು ಹೂ ಬೆಳೆಗೆ ಪರಿಹಾರ ನೀಡುವಂತೆ ಸರಕಾರಕ್ಕೆ ಒತ್ತಾಯಿಸಬೇಕೆಂದು ವೀರೆಂದ್ರ ಪಾಟೀಲ ಕುಮಸಿ, ಎಂ.ಬಿ. ಅಂಬಲಗಿ, ಜಗದೀಶ ಪಾಟೀಲ ಶಾಸಕರಿಗೆ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next