Advertisement

ಕ್ವಾರಂಟೈನ್‌ ಕೇಂದ್ರ ಸ್ಥಾಪಿಸಿದರೆ ಹೋರಾಟ

05:07 PM Apr 25, 2020 | Naveen |

ಕಲಬುರಗಿ: ಕೋಟನೂರ-ಧರಿಯಾಪುರ ಜಿಡಿಎ ಬಡಾವಣೆಯಲ್ಲಿರುವ ವಸತಿ ನಿಲಯಗಳಲ್ಲಿ ಕೊವಿಡ್‌-19 ಹೋಂ ಕ್ವಾರಂಟೈನ್‌ ಕೇಂದ್ರ ಸ್ಥಾಪಿಸದಿರುವಂತೆ ಆಗ್ರಹಿಸಿ ಬಡಾವಣೆ ನಾಗರಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

ಶುಕ್ರವಾರ ಬೆಳಗ್ಗೆ ದತ್ತಾತ್ರೇಯ ಪಾಟೀಲ್‌ ಬಡಾವಣೆ ಅಭಿವೃದ್ಧಿ ಸಂಘದವರು ತಮ್ಮ ಬಡಾವಣೆಯಲ್ಲಿರುವ ವಸತಿ ನಿಲಯಗಳಲ್ಲಿ ಕೊವಿಡ್‌-19 ಹೊಂ ಕ್ವಾರಂಟೈನ್‌ ಕೇಂದ್ರವನ್ನು ಸ್ಥಾಪಿಸದಿರುವಂತೆ ಆಗ್ರಹಿಸಿ ಬಡಾವಣೆ-ವರ್ತುಲ್‌ ರಸ್ತೆ ಸಂಪರ್ಕದ ರಸ್ತೆಯನ್ನು ಅಗೆದು ಪ್ರತಿಭಟನೆ ನಡೆಸಿದರು.

ಈಗಾಗಲೇ ಪಿಡಬ್ಲ್ಯುಡಿ ಕ್ವಾರ್ಟರ್ಸ್‌ ಕೆಲ ಮನೆಗಳಲ್ಲಿ ಹೋಂ ಕ್ವಾರಂಟೈನ್‌ ಮಾಡುತ್ತಿರುವ ನಾಗರಿಕರು ಪ್ರತಿಭಟಿಸಿದ್ದಕ್ಕೆ ಹಿಂದೆ ಸರಿಯಾಗಿದೆ. ಅದೇ ರೀತಿ ಜಿಡಿಎ ಬಡಾವಣೆಯಿಂದ ಹಿಂದೆ ಸರಿಯಬೇಕು. ಬಹು ಮುಖ್ಯವಾಗಿ ವಸತಿ ನಿಲಯಗಳ ಸುತ್ತ ನೂರಾರು ಮನೆಗಳಿರುವುದರಿಂದ ಯಾವುದೇ ಕಾರಣಕ್ಕೂ ಹೋಂ ಕ್ವಾರಂಟೈನ್‌ ಕೇಂದ್ರಕ್ಕೆ ಕ್ರಮ ಕೈಗೊಳ್ಳಬಾರದು ಎಂದರು. ಅಣ್ಣಾರಾಯ ಪಾಟೀಲ್‌ ಸಿರಸಗಿ, ಕುಶಾಲ ಯಡವಳ್ಳಿ, ಮಂಜುನಾಥ ಹಿರೇಮಠ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next