Advertisement

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

01:26 PM Mar 29, 2024 | Team Udayavani |

ಕಲಬುರಗಿ: ಶೋಕಿಗಾಗಿ ಪಿಸ್ತೂಲ್ ಮಾದರಿಯ ಲೈಟರ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹರಿಬಿಡುವ ಮೂಲಕ ಸಮಾಜದಲ್ಲಿ ಅಶಾಂತಿ ಹಾಗೂ ಭಯದ ವಾತಾವರಣ ಸೃಷ್ಠಿಸಿದ ಇಬ್ಬರ ಯುವಕರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿ ಬಿಸಿ ಮುಟ್ಟಿಸಿದ್ದಾರೆ.

Advertisement

ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದಿದ್ದ ಇಬ್ಬರು ಯುವಕರ ಮೇಲೆ ಜಿಲ್ಲೆಯ ಸೇಡಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೇಡಂ ಪಟ್ಟಣದ ಇಂದಿರಾನಗರದ ನಿವಾಸಿಗಳಾದ ಮಹೇಶ ಹಾಗೂ ಬಸವರಾಜ ಎಂಬುವ ಯುವಕರೇ ನಕಲಿ ಲೈಟರ್ ಮಾದರಿ ಪಿಸ್ತೂಲ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹರಿಬಿಟ್ಟ ಯುವಕರಾಗಿದ್ದಾರೆ.

ಇದೇ ಘಟನೆಗೆ ಸಂಬಂಧಿಸಿದಂತೆ ಇನ್ನಿಬ್ಬರು ಯುವಕರನ್ನು ಕರೆಯಿಸಿ ವಿಚಾರಣೆ ನಡೆಸಿದ್ದು, ಅವರಿಂದ ನಕಲಿ‌ ಲೈಟರ್ ಮಾದರಿ ಪಿಸ್ತೂಲ್ ನ್ನು ವಶಕ್ಕೆ ಪಡೆಯಲಾಗಿದ್ದು‌, ಮುಂದಿನ ದಿನಗಳಲ್ಲಿ ಈ ರೀತಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಭಾವಚಿತ್ರಗಳನ್ನು ಹರಿಬಿಡುವ ಮೂಲಕ ಅಶಾಂತಿ ಸೃಷ್ಠಿಸದಂತೆ ಎಚ್ಚರಿಸಿದ್ದಾರೆ.

ಪೊಲೀಸರು ಬಿಸಿ ಮುಟ್ಟಿಸಿದ ನಂತರ ಯುವಕರು, ಇನ್ನು ಈ ರೀತಿಯಲ್ಲಿ ನಕಲಿ ಪಿಸ್ತೂಲ್ ಮಾರಕಾಸ್ತ್ರಗಳನ್ನು ಹಿಡಿದ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಾರ್ವಜನಿಕರಲ್ಲಿ ಭಯ ಸೃಷ್ಟಿಸುವ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

Advertisement

ಮುಂದಿನ ದಿನಗಳಲ್ಲಿ ಇದೇ ತೆರನಾದ ಘಟನೆಗಳು ಮರುಕಳಿಸಿದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.‌ ಈ ಹಿಂದೆ ಜನ್ಮ ದಿನಾಚರಣೆ ಕೇಕನ್ನು ಮಾರಕಾಸ್ತ್ರಗಳಿಂದ ಕಟ್ ಮಾಡಿದ್ದಲ್ಲದೇ ಮಾರಕಾಸ್ತ್ರ ಪ್ರದರ್ಶಿಸಿದ್ದಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next