Advertisement

ಕೆಕೆಆರ್‌ಡಿಬಿಗೆ 3000 ಕೋಟಿ ರೂ. ಕೊಡಲು ಬದ್ಧ: ಮುಖ್ಯಮಂತ್ರಿ ಬೊಮ್ಮಾಯಿ

02:19 PM Oct 20, 2021 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಮಂಡಳಿ (ಕೆಕೆಆರ್‌ಡಿಬಿ)ಗೆ ಈಗಾಗಲೇ ಘೋಷಣೆಮಾಡಿರುವಂತೆ 1,500 ಕೋಟಿ ಅನುದಾನದ ಜತೆಗೆ ಹೆಚ್ಚುವರಿ 1,500 ಕೋಟಿ ಸೇರಿ ಮೂರುಸಾವಿರ ಕೋಟಿ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

Advertisement

ಸಿಂದಗಿ ವಿಧಾನಸಭೆ ಉಪ ಚುನಾವಣೆಪ್ರಚಾರ ಕಾರ್ಯಕ್ಕೆ ತೆರಳಲು ಮಂಗಳವಾರ ಇಲ್ಲಿನವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಲ್ಯಾಣ ಕರ್ನಾಟಕ ಉತ್ಸವ ದಿನದಂದು 1,500ಕೋಟಿ ರೂ. ಹೆಚ್ಚುವರಿ ಅನುದಾನ ನೀಡುವ ಬಗ್ಗೆ ಘೋಷಣೆ ಮಾಡಿದ್ದೆ.

ಆಗ ಬಾಕಿ ಇರುವ ಅನುದಾನ ಖರ್ಚು ಮಾಡಿದರೆ ನೀಡುವುದಾಗಿ ಹೇಳಿದ್ದೆ. ಇದರಅರ್ಥ ಅನುದಾನ ಸಮರ್ಪಕವಾಗಿ ಬಳಕೆ ಮಾಡಲುಪ್ರೋತ್ಸಾಹ ಕೊಡುವುದಾಗಿತ್ತು. ಆದರೆ, ಒಟ್ಟಾರೆಮೂರು ಸಾವಿರ ಕೋಟಿ ಅನುದಾನ ಕೊಡಲು ಸಿದ್ಧಎಂದರು.ಕೆಕೆಆರ್‌ಡಿಬಿ ಕ್ರಿಯಾ ಯೋಜನೆ ತಯಾರಿಸಲುವಿಳಂಬವಾಗುತ್ತಿದೆ.

ಹೆಚ್ಚುವರಿ ಅನುದಾನ ಮಾರ್ಚ್‌ನಂತರ ಕೊಡಬೇಕಾಗುತ್ತದೆ. ಹೀಗಾಗಿ ಮಾರ್ಚ್‌ಬಳಿಕ ಯೋಜನೆ ರೂಪಿಸುವ ಬದಲು, ನನೆಗುದಿಗೆಬಿದ್ದಿರುವ ಹಳೆ ಯೋಜನೆಗಳಿಗೆ ಹೆಚ್ಚುವರಿ 1,500ಕೋಟಿ ರೂ. ವೆಚ್ಚದ ಸಮಗ್ರ ಯೋಜನಾ ವರದಿ(ಡಿಪಿಆರ್‌) ತಯಾರಿಸುವಂತೆ ಯೋಜನೆಯಅಧಿ ಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಈ ಹಿಂದೆ ನೀಡಲಾದ ಭರವಸೆಯಂತೆ ಈಗಾ ಗಲೇಪೂರ್ಣಪ್ರಮಾಣದ ಕಾರ್ಯದರ್ಶಿ ನೇಮಿಸಲಾಗಿದೆ.ಜತೆಗೆ ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದಅಭಿವೃದ್ಧಿ ಹಾಗೂ ಹುದ್ದೆಗಳ ನೇಮಕಾತಿಮೇಲ್ವಿಚಾರಣೆ ನಡೆಸುವ 371ನೇ (ಜೆ) ಕೋಶವನ್ನುಬೆಂಗಳೂರಿನಿಂದ ಕಲಬುರಗಿಗೆ ಸ್ಥಳಾಂತರಿಸಲುಆದೇಶ ಹೊರಡಿಸಲಾಗಿದೆ.

Advertisement

ಶೀಘ್ರವೇ ಈ ಕೋಶಕಲಬುರಗಿಯಲ್ಲಿ ಕಾರ್ಯಾರಂಭ ಮಾಡಲಿದೆ.ಅಲ್ಲದೇ, ಈ ಭಾಗದಲ್ಲಿ ಖಾಲಿ ಹುದ್ದೆಗಳ ಭರ್ತಿಕುರಿತಂತೆ ಉಪ ಚುನಾವಣೆ ಮುಗಿದ ನಂತರಹೇಳಿಕೆ ನೀಡುತ್ತೇನೆ. ಆದರೆ, ನಾನು ನೀಡಿದಎಲ್ಲ ಭರವಸೆಗಳನ್ನು ಈಡೇರಿಸುತ್ತೇನೆ ಎಂದುಹೇಳಿದರು.ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ,ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲರೇವೂರ, ಶಾಸಕ ಬಸವರಾಜ ಮತ್ತಿಮಡು,ವಿಧಾನ ಪರಿಷತ್‌ ಸದಸ್ಯ ಸುನೀಲ ವಲ್ಯಾಪುರೆಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next