Advertisement

Kalaburagi: ಕೊಲೆಯಲ್ಲಿ ಅಂತ್ಯವಾಯ್ತು ಮದುವೆ ಮಾತುಕತೆ: ಆರು ಆರೋಪಿಗಳ ಬಂಧನ

05:21 PM Sep 23, 2024 | Team Udayavani |

ಕಲಬುರಗಿ: ಮದುವೆ ಮಾತುಕತೆಯೊಂದು ಯುವಕನ ಸಹೋದರನ ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ ನಗರದ ಹೊರ ವಲಯ ನಾಗನಹಳ್ಳಿಯಲ್ಲಿ ನಡೆದಿದ್ದು, ಘಟನೆ ಸಂಬಂಧ ಪ್ರೀತಿಸಿದ ಯುವತಿ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಗುಲ್ಬರ್ಗ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ನಾಗನಹಳ್ಳಿಯ ಸಚಿನ್ ಹಾಗೂ ಉಷಾ ಅಲಿಯಾಸ್ ವೈಷ್ಣವಿ ಪ್ರೀತಿಸುತ್ತಿದ್ದರಂತೆ. ಈ ಹಿನ್ನೆಲೆಯಲ್ಲಿ ಉಷಾ ಸಹೋದರ ವರುಣಕುಮಾರ ಹಾಗೂ ಇತರರೊಂದಿಗೆ ಸಚಿನ್ ಮನೆಗೆ ಮದುವೆ ಮಾತುಕತೆಗೆಂದು ಹೋಗಿದ್ದಾರೆ.‌ ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಸಚಿನ್ ಸಹೋದರ ಸುಮಿತ್‌ ಗೆ ಚಾಕುವಿನಿಂದ ಹೊಟ್ಟೆಗೆ ಇರಿದಿದ್ದಾನೆ. ಪರಿಣಾಮ ಸುಮಿತ್ ಕೊನೆಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಮೊದಲು ಕೊಲೆ ಯತ್ನ ತದನಂತರ ಕೊಲೆ ಎಂಬುದಾಗಿ ಪ್ರಕರಣ ದಾಖಲಿಸಿಕೊಂಡು ಆರು ಜನ ಆರೋಪಿಗಳನ್ನು ತಕ್ಷಣವೇ ಬಂಧಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್ ಢಗೆ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಕೊಲೆಗೆ ಸಂಬಂಧಿಸಿದಂತೆ ಪ್ರೀತಿಸಿದ ಯುವತಿ ಉಷಾ ಅಲಿಯಾಸ್ ವೈಷ್ಣವಿ, ಸಹೋದರ ವರುಣ್‌ ಕುಮಾರ ಹಾಗೂ ಯುವತಿಯ ತಂದೆ ರಾಜಕುಮಾರ ಮತ್ತು ತಾಯಿ ಜಯಮ್ಮ ಮತ್ತು ವರುಣನ ಸ್ನೇಹಿತರಾದ ಸಿದ್ದು ಜಮಾದಾರ, ಪ್ರಜ್ವಲ ಎನ್ನುವ ಆರು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನಿಬ್ಬರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಆಯುಕ್ತರು ವಿವರಣೆ ನೀಡಿದರು.

ಈ ಮೊದಲು ಯುವಕನ ಮನೆಗೆ ಯುವತಿಯ ಮನೆಯವರು ಹೋಗಿ ಮದುವೆ ಸಂಬಂಧ ಜಗಳ ತೆಗೆದ ಘಟನೆ ನಡೆದಿದೆಯಂತೆ. ಈಗಲೂ ಮದುವೆ ಸಂಬಂಧ ಮಾತಿಗೆ ಮಾತು ಬೆಳೆದು ಜಗಳ ನಡೆದು ಕೊನೆಗೆ ಕೊಲೆ ನಡೆದಿದೆ.‌ ಕೊಲೆ ನಡೆಯುವಾಗ ಯುವತಿಯೊಂದಿಗೆ ಪ್ರೀತಿ ಮಾಡುತ್ತಿದ್ದ ಸಚಿನ್ ಇರಲಿಲ್ಲ. ಯುವಕನ ತಾಯಿ ಶೋಭಾ ನಾಗೇಂದ್ರ‌ ಮಲ್ಲಾಬಾದಿ ನೀಡಿರುವ ದೂರನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೊಲೆ‌ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ. ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯ ಪ್ರಶಂಸನೀಯವಾಗಿದೆ ಎಂದು ಪೊಲೀಸ್ ಆಯುಕ್ತರು ಶ್ಲಾಘಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next