ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಗೆ ಬಂದರೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸ್ವಾಗತಿಸಲು ಬಾರದೇ ಇರುವುದರಿಂದ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋಗಬೇಕು ಎಂದು ಸಂಸದ ಡಾ. ಉಮೇಶ ಜಾಧವ್ ಆಗ್ರಹಿಸಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಅವರನ್ನು ಸ್ವಾಗತಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಅವರು ಇಲ್ಲಿಗೆ ಬಂದಿದ್ದರೂ ಉಸ್ತುವಾರಿ ಸಚಿವರಾಗಿ ಅದರಲ್ಲೂ ಮಿನಿಮಮ್ ಪ್ರೋಟೋಕಾಲ್ ವಾದರೂ ಸಚಿವ ಖರ್ಗೆ ಪಾಲನೆ ಮಾಡಬೇಕಿತ್ತು ಎಂದು ಅಸಮಾಧಾನ ಹೊರ ಹಾಕಿದರು.
ಇದನ್ನೂ ಓದಿ:Ayodhya:ಜ.22ರಂದು ಬ್ಯಾಂಕ್ ಗಳಿಗೆ ರಜೆ ಇದೆಯಾ? ಹಣಕಾಸು ಸಚಿವಾಲಯದ ಪ್ರಕಟನೆಯಲ್ಲಿ ಏನಿದೆ?
ಪ್ರಿಯಾಂಕ್ ಖರ್ಗೆ ಈ ಮೂಲಕ ಎರಡನೇ ಬಾರಿಗೆ ಪ್ರೋಟೋಕಾಲ್ ಪಾಲನೆ ಮಾಡುತ್ತಿಲ್ಲ. ಆದರೆ ಸರ್ಕಾರದ ಪರವಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಪಿಎಂ ಅವರನ್ನು ಸ್ವಾಗತ ಕೋರಲು ಬಂದಿದ್ದರು. ಅವರಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಧಾನಿ ಶುಭ ಕೋರಿದ್ದಾರೆ ಎಂದು ಡಾ. ಉಮೇಶ ಜಾಧವ್ ತಿಳಿಸಿದರು.
ಮೋದಿ ಕಲಬುರಗಿಗೆ ಆಗಮಿಸಿರುವುದು ತಮಗೆ ನೂರಕ್ಕೆ ನೂರರಷ್ಟು ಆನೆ ಬಲ ಬಂಂತಾಗಿದೆ. ಅದಲ್ಲದೇ ಕಾರ್ಯಕರ್ತರಿಗೂ ಶಕ್ತಿ ಬಂದಂತಾಗಿದೆ ಎಂದು ಹೇಳಿದರು.