Advertisement

ಕನ್ನಡ ಕೆಲಸಕ್ಕೂ ಆದೇಶ ಬೇಕೆ?

07:53 PM Jan 20, 2020 | Naveen |

ಕಲಬುರಗಿ: ಕನ್ನಡ ಮತ್ತು ಕನ್ನಡ ಪರ ಕೆಲಸ ಮಾಡಲು ಸರ್ಕಾರದ ಆದೇಶವೇ ಬೇಕೆ? ಹಣದ ನೀಡಿದರೆ ಮಾತ್ರ ಕನ್ನಡದ ಕೆಲಸ ಮಾಡುತೀ¤ರಾ? ಎಂದು 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ಸಂಚಾಲಕರಾದ ಜಿಲ್ಲಾಧಿಕಾರಿ ಶರತ್‌ ಬಿ. ನೊಂದು ನುಡಿದರು.

Advertisement

ನಗರದ ಕನ್ನಡ ಭವನದಲ್ಲಿ ರವಿವಾರ ಆಯೋಜಿಸಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಪದಾಧಿಕಾರಿಗಳು, ತಾಲೂಕು, ವಲಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಸಾಹಿತ್ಯ ಸಮ್ಮೇಳನದ ಪ್ರಚಾರ ಕಾರ್ಯ ಮಾಡಲು ಗ್ರಾಮ ಪಂಚಾಯಿತಿಗಳಿಂದ ಅನುದಾನ ಕೊಡಿಸಬೇಕು ಮತ್ತು ತಹಶೀಲ್ದಾರ್‌ಗಳ ಮೂಲಕ ಪ್ರಚಾರಕ್ಕೆ ಆದೇಶ ಹೊರಡಿಸಬೇಕು. ಸರ್ಕಾರಿ ಶಿಕ್ಷಕರಿಗೆ ಮೂರು ದಿನ ಒಒಡಿ ನೀಡಬೇಕೆಂದು ಕಸಾಪ ಪದಾಧಿ ಕಾರಿಗಳು ಕೋರಿದರು.

ಇದರಿಂದ ತೀವ್ರ ಬೇಸರಗೊಂಡ ಜಿಲ್ಲಾಧಿಕಾರಿಗಳು, ಸಮ್ಮೇಳನದ ಮಾಡಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕನ್ನಡ ಮತ್ತು ಸಂಸ್ಕೃತಿ ಸಚಿವರು ಸೇರಿ ಸರ್ಕಾರ ಬೆನ್ನಿಗೆ ಇದೆ. ಆದರೆ, ನಿಮ್ಮ ಊರಲ್ಲಿ, ಶಾಲೆಗಳಲ್ಲಿ ಹತ್ತು ನಿಮಿಷ ಪ್ರಚಾರ ಮಾಡಲು ಸರ್ಕಾರ ಆದೇಶ ಹೊರಡಿಸಬೇಕೇ? ಸರ್ಕಾರದ ಅನುದಾನದಿಂದಲೇ ಕನ್ನಡದ ಕಾರ್ಯಕ್ರಮ ಮಾಡಬೇಕೇ? ಇದನ್ನು ಗಮನಿಸಿದರೆ ಇಲ್ಲಿ ಕನ್ನಡತನ ಕಾಣುತ್ತಿಲ್ಲ. ಇದು ನನಗೆ ತೀವ್ರ ನೋವು ತರಿಸಿದೆ ಎಂದರು.

ಜಿಲ್ಲೆಯಲ್ಲಿ 32 ವರ್ಷಗಳ ಬಳಿಕ ಸಮ್ಮೇಳನ ನಡೆಸುವ ಅವಕಾಶ ಒದಗಿ ಬಂದಿದೆ. ಸಮ್ಮೇಳನ ಆರಂಭವಾಗಲು ಕೆಲವೇ ದಿನಗಳಿವೆ. ಪ್ರಚಾರದಲ್ಲಿ ಹಿಂದೆ ಉಳಿದಿದ್ದೇವೆ ಎಂದು ಮಾತುಗಳು ಕೇಳಿ ಬರುತ್ತಿವೆ. ಸಮ್ಮೇಳನ ಬಗ್ಗೆ ನಿಮ್ಮೂರಲ್ಲಿ ನೀವು ಏನು ಮಾಡಿದ್ದೀರಿ? ಎಂದು ಅಸಮಾಧಾನ ಹೊರ ಹಾಕಿದರು.

ಸಮ್ಮೇಳನ ಹೆಸರಲ್ಲಿ ರಜೆ ಘೋಷಣೆ ಮಾಡುತ್ತಾರೆ ಎಂದು 250 ರೂ. ಕೊಟ್ಟು ನೋಂದಣಿ ಮಾಡಿಕೊಂಡಿಲ್ಲ. ಆದರೆ, ಮೂರು ದಿನ ಒಒಡಿ ಕೇಳುತ್ತಿದ್ದೀರಿ. ಒಒಡಿ ಕೊಡುವುದು ದೊಡ್ಡದಲ್ಲ. ಕನ್ನಡ ಕಾರ್ಯಕ್ರಮ ಮಾಡಲು ಮನಸು ಬೇಕೇ ಹೊರತು ಬೇರೇನಲ್ಲ. ಸ್ವಯಂ ಪ್ರೇರಣೆ ಇಲ್ಲದಿರುವುದು ನಿರಾಶೆ ಉಂಟಾಗಿದೆ. ಇದರಿಂದ ಹಿಂದುಳಿದವರು ಎನ್ನುವ ಪಟ್ಟವನ್ನು ನಾವೇ ಹಣೆ ಮೇಲೆ ಅಚ್ಚು ಹಾಕಿಕೊಳ್ಳತ್ತಿದ್ದೇವೆ ಎಂದರು.

Advertisement

ಸಮ್ಮೇಳನದ ಸಿದ್ಧತೆ ಬಗ್ಗೆ ತಹಶೀಲ್ದಾರ್‌ಗಳೊಂದಿಗೆ ಮಾತನಾಡಿದ್ದೇನೆ. ನಮ್ಮ ತಾಲೂಕಿನಲ್ಲಿ ಕ್ರಿಯಾಶೀಲ ಚಟುವಟಿಕೆಗಳನ್ನು ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಕಸಾಪ ಪದಾಧಿಕಾರಿ ಬಾಬುಮೀಯಾ ಫುಲ್ಲಾರಿ
ಮಾತನಾಡಿ, ಅಫಜಲಪುರ ತಾಲೂಕಿನ ಮಶಾಲ ಮಹಾರಾಷ್ಟ್ರದ ಗಡಿಯಲ್ಲಿ ಬರುತ್ತೇವೆ. ಮೂರು ದಿಕ್ಕುಗಳಲ್ಲಿ ಮಹಾರಾಷ್ಟು ಇದೆ. ಆದರೆ, ಒಂದೇ ಒಂದು ಮರಾಠಿ ಅಕ್ಷರಕ್ಕೆ ಅವಕಾಶ ಕೊಟ್ಟಿಲ್ಲ. ಈ ಹಿಂದೆ ಜಿಲ್ಲಾ ಸಮ್ಮೇಳನಗಳಿಗೆ ಬರುವಾಗ ಪೊಲೀಸರಿಂದ ತೊಂದರೆ ಆಗಿದೆ. ಇದನ್ನು ತಪ್ಪಿಸಬೇಕು ಎಂದರು.

ಸಾಹಿತಿ ಚಿ.ಸಿ.ಲಿಂಗಣ್ಣ ಮಾತನಾಡಿ, ಕಚ್ಚಾಡುವವರನ್ನು ಒಂದೂಡಿಸುವ ಕೆಲಸ ಜಿಲ್ಲಾ ಧಿಕಾರಿಗಳು ಮಾಡುತ್ತಿದ್ದಾರೆ. ಎಲ್ಲರ ಮನಸ್ತಾಪಗಳನ್ನು ಬದಿಗಿಟ್ಟು ಸಮ್ಮೇಳನದ ಯಶಸ್ವಿಗಾಗಿ ಶ್ರಮಿಸೋಣ. ದೇಣಿಗೆ ಸಂಗ್ರಹಿಸಲು ನಾವೆಲ್ಲರೂ ಕೈಜೋಡಿಸೋಣ ಎಂದರು.

ಕಸಾಪ ಜಿಲ್ಲಾ ಅಧ್ಯಕ್ಷ ವೀರಭದ್ರ ಸಿಂಪಿ, ಮಡಿವಾಳಪ್ಪ ನಾಗರಹಳ್ಳಿ, ದೌಲತರಾಯ ಪಾಟೀಲ ಕಸಾಪ ಪದಾಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next