Advertisement

ಮಾಸ್ಕ್ ಬಗ್ಗೆ ಜಾಗೃತಿ: ಧರಿಸದವರಿಗೆ ದಂಡ ವಿಧಿಸಿದ ಕಲಬುರಗಿ ಡಿಸಿ

03:17 PM Nov 05, 2020 | keerthan |

ಕಲಬುರಗಿ: ಕೋವಿಡ್ ಸೋಂಕು ಹರಡದಂತೆ ನಿಯಂತ್ರಿಸಲು ಮತ್ತು ಮಾಸ್ಕ್ ಧರಿಸುವಿಕೆ ಬಗ್ಗೆ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದಲ್ಲದೇ ಮಾಸ್ಕ್ ಧರಿಸದರಿಗೆ ತಾವೇ ಮುಂದೆ ನಿಂತು ದಂಡ ಹಾಕಿಸಿದರು‌.

Advertisement

ಕೋವಿಡ್ ಕುರಿತು ಜಾಗೃತಿ ಮೂಡಿಸಲು ಗುರುವಾರ ಸ್ವತಃ ಜಿಲ್ಲಾಧಿಕಾರಿಗಳು ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳಿಗೆ ಭೇಟಿ ‌ನೀಡಿದರು. ಸರ್ದಾರ್ ವಲ್ಲಭಭಾಯಿ ಪಟೇಲ್‌ ವೃತ್ತ, ಜಗತ್ ವೃತ್ತದಲ್ಲಿ‌ ಕಾರು, ಆಟೋ, ಬೈಕ್ ಗಳಲ್ಲಿ ಮಾಸ್ಕ್ ಹಾಕದೆ ಸಂಚರಿಸುತ್ತಿದ್ದ ಸವಾರರನ್ನು ತಡೆದು ಮಾಸ್ಕ್ ಹಾಕಿಕೊಳ್ಳವಂತೆ ಸೂಚಿಸಿದರು. ಅಲ್ಲದೇ, ಸಂಚಾರ ಪೊಲೀಸರಿಗೆ ದಂಡ ವಿಧಿಸುವಂತೆ ಡಿಸಿ ಜ್ಯೋತ್ಸ್ನಾ ಸೂಚಿಸಿದರು.

ಸೂಪರ್ ಮಾರ್ಕೆಟ್ ಪ್ರದೇಶಕ್ಕೂ ಜಿಲ್ಲಾಧಿಕಾರಿಗಳು ಭೇಟಿ ಕೊಟ್ಟು, ಮಾಸ್ಕ್ ಹಾಕದೆ ತಿರುಗಾಡುತ್ತಿದ್ದ ಜನರಿಗೆ ನಿಮ್ಮ ಮಾಸ್ಕ್ ಎಲ್ಲಿದೆ? ಯಾಕೆ ಧರಿಸಿಲ್ಲ ಎಂದು ಪ್ರಶ್ನಿಸಿದರು. ಮಾಸ್ಕ್ ಇಲ್ಲದವರಿಗೆ ಮಾಸ್ಕ್ ವಿತರಿಸಿದರು. ಜಿಲ್ಲಾಧಿಕಾರಿಗಳಿಗೆ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಸಾಥ್ ನೀಡಿದರು

Advertisement

Udayavani is now on Telegram. Click here to join our channel and stay updated with the latest news.

Next