ಕಲಬುರ್ಗಿ: ಇಲ್ಲಿ ವಿಮಾನ ನಿಲ್ದಾಣ ಮುಂದೆ ಬಿಜೆಪಿ ವಿಧಾನಪರಿಷತ್ ಸದಸ್ಯ ಬಿ.ಜಿ ಪಾಟೀಲ್ ಮತ್ತು ಪೊಲೀಸರ ನಡುವೆ ತೀವ್ರ ಚಕಮಕಿ ನಡೆಯಿತು.
ಸಿಎಂ ಭೇಟಿಗೆ ವಿಧಾನ ಪರಿಷತ್ ಸದಸ್ಯರನ್ನು ಅವಕಾಶ ನೀಡದ ಪೊಲೀಸರು, ಭೇಟಿಗೆ ಅವಕಾಶ ನೀಡದಿದ್ದಕ್ಕೆ ಆಕ್ರೋಶ.
ವಿಧಾನಪರಿಷತ್ ಸದಸ್ಯ ಬಿಜಿ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ಅವರು ಇರುವ ವಾಹನವನ್ನು ಪೊಲೀಸರು ತಡೆದಿದ್ದಾರೆ.
ಈ ವೇಳೆ ಪೊಲೀಸರು ಮತ್ತು ಬಿಜೆಪಿ ಮುಖಂಡರ ನಡುವೆ ತೀವ್ರ ವಾಕ್ಸಮರ ನಡೆದು ಕಲಬುರ್ಗಿ ವಿಮಾನ ನಿಲ್ದಾಣದ ಮುಂದೆ ಹೈಡ್ರಾಮಾ ನಡೆಯಿತು.
ಜಿಲ್ಲಾಡಳಿತದ ಸರ್ವಾಧಿಕಾರಿ ಧೋರಣೆ ವಿರುದ್ಧ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ ವಿಧಾನಪರಿಷತ್ ಸದಸ್ಯ ಬಿ.ಜಿ ಪಾಟೀಲ್ ನಮ್ಮ ಜಿಲ್ಲೆಗೆ ಮಂತ್ರಿ ಸ್ಥಾನ ಇರದಿದ್ದಕ್ಜೆ ಈ ತಾಪತ್ರೆಯಾಗುತ್ತಿದೆ ಎಂದರು. ಜಿಲ್ಲಾ ಆಡಳಿತ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ನೆರೆ ಸಂತ್ರಸ್ತರ ಸಂಕಷ್ಟ ಆಲಿಸಿ ಬಂದಿದ್ದೇನೆ.ಅದನ್ನ ಸಿಎಂ ಗಮನಕ್ಕೆ ತರುವುದಕ್ಕೆ ಹೋಗುತ್ತಿದ್ದೇನೆ ಹೊರತು ಶೋಕಿಗಾಗಿ ಅಲ್ಲ. ನಮ್ಮ ಮನವಿಯ ಮೇರೆಗೆ ಸಿಎಂ ವೈಮಾನಿಕ ಸಮೀಕ್ಷೆ ಆಗಮಿಸಿದ್ದಾರೆ, ನಮ್ಮ ಜಿಲ್ಲೆಗೆ ಮಂತ್ರಿ ಸ್ಥಾನ ನೀಡಿದ್ದರೆ ಹೀಗಾಗುತ್ತಿರಲಿಲ್ಲ. ನಮ್ಮಲ್ಲಿ ಯಾರೂ ಮಂತ್ರಿ ಇಲ್ಲದ್ದಕ್ಕಾಗಿ ಅಧಿಕಾರಿಗಳೇ ಸರ್ವಾಧಿಕಾರಿಯಾಗಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.
ಇದನ್ನೂ ಓದಿ:ತುಳು ಚಲನಚಿತ್ರ ನಟ ಸುರೇಂದ್ರ ಬಂಟ್ವಾಳ್ ಬರ್ಬರ ಹತ್ಯೆ