Advertisement

ಗ್ರಾಮೀಣ ಪ್ರದೇಶದಲ್ಲಿ ಅರಳಿದ ಕಲಾ ಕುಸುಮ: ಅನಾರು ನಾರಾಯಣ ರಾವ್‌

11:09 AM Nov 10, 2017 | Team Udayavani |

ಗ್ರಾಮೀಣ ಪ್ರದೇಶಗಳಲ್ಲಿ ಹಗಲಿರುಳು ಎನ್ನದೆ ಮೈಲುಗಟ್ಟಲೆ ಕಾಲ್ನಡಿಗೆಯಲ್ಲಿ ಸಾಗಿ, ಸ್ವಂತ ಬಂಡವಾಳ ಹೂಡಿ ಕಲೆಗಾಗಿ ಜೀವನ ಮುಡಿಪಾಗಿಟ್ಟವರು ಯಕ್ಷಗಾನ ಅರ್ಥಧಾರಿ, ಸಂಘಟಕ ಅನಾರು ಎಸ್‌. ನಾರಾಯಣ ರಾವ್‌. ವಿದ್ಯುದ್ದೀಪದ ವ್ಯವಸ್ಥೆ ಇಲ್ಲದ ಕಾಲದಲ್ಲಿ ಗ್ಯಾಸ್‌ಲೈಟ್‌ ಮಂದಬೆಳಕಲ್ಲೇ ಅರ್ಥ ಹೇಳುತ್ತ ಯಕ್ಷ ಹವ್ಯಾಸ ಬೆಳೆಸಿಕೊಂಡವರು. 

Advertisement

ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಅನಾರು ಎ.ಎನ್‌.ಸುಬ್ಬ ರಾವ್‌ -ಸೀತಮ್ಮ ದಂಪತಿಯ ಪುತ್ರ. ತನ್ನ ವಿದ್ಯಾಭ್ಯಾಸವನ್ನು 5ನೇ ತರಗತಿ ಯಲ್ಲೇ ಮೊಟಕುಗೊಳಿಸಿ ಮನೆಯ ಜವಾಬ್ದಾರಿಯನ್ನು ಹೊತ್ತರು. ಜತೆಗೆ ಕಲಾವಲಯ ದಲ್ಲಿ ಅಭಿರುಚಿಯನ್ನು  ತೋರಿಸುತ್ತಾ ಮುಂದು ವರಿದರು. ಅನೇಕ ಯಕ್ಷಗಾನ ತಾಳಮದ್ದಳೆಗಳನ್ನು ಸಂಘಟಿಸುತ್ತಾ ತಾನೂ ಅರ್ಥಧಾರಿಯಾಗಬೇಕೆನ್ನುವ ಹಂಬಲದೊಂದಿಗೆ ವೇದಿಕೆ ಏರಿದರು. ಇವರ ಅರ್ಥಧಾರಿಕೆಯಲ್ಲಿ ಬಹುತೇಕ ಹಾಸ್ಯದ ಛಾಯೆ ಇರುತ್ತಿತ್ತು. ಆದ್ದರಿಂದಲೇ “ಶರಸೇತು ಬಂಧನ’ದ ಕೃಷ್ಣ, “ಸಂಧಾನ’ದ ಕೃಷ್ಣ, “ಸುಭದ್ರಾರ್ಜುನ’ದ ಬಲರಾಮ, “ವೀರಮಣಿ’ಯ ಹನುಮಂತ, “ದಕ್ಷಾಧ್ವರ’ದ ಬ್ರಾಹ್ಮಣ, “ಕರ್ಣಾರ್ಜುನ’ದ ಶಲ್ಯ ಮುಂತಾದ ಪಾತ್ರಗಳು ಇವರಿಗೆ ಪ್ರಸಿದ್ಧಿ ತಂದವು. 

ಪುರಾಣ ಲೋಕದ ಸತ್ವ, ತಣ್ತೀ, ಸತ್ಯಗಳನ್ನು ಜನಮಾನಸಕ್ಕೆ ತಲುಪಿಸುವ ಸಂಘಟನೆಯಲ್ಲಿ ಉತ್ಸಾಹದಿಂದ, ಆ ಕಾಲದ ಕಲಾವಿದರಿಗೆ ವೇದಿಕೆ ಒದಗಿಸುತ್ತ ಅವರ ಕಷ್ಟದ ದಿನಗಳಲ್ಲಿ ತನ್ನ ಮನೆ ಯನ್ನೇ ಅನ್ನ ಛತ್ರವಾಗಿಸಿದ ಶ್ರಿಧೀಮಂತ ಹೃದಯಿ ನಾರಾಯಣ ರಾಯರು. ಅವರು ಬಹುಭಾವ ಪ್ರಕಟನಾವಕಾಶವುಳ್ಳ ಸುಪುಷ್ಟ ಸಾಹಿತ್ಯ, ಪ್ರಯೋಗ, ಪರಿಣಾಮದ ಪೂರ್ವದೃಷ್ಟಿಯುಳ್ಳ ಅಪರಿಮಿತ ಬದ್ಧತೆಯ ಅಪ್ಪಟ ಪ್ರತಿಭಾಶಾಲಿ ಕಲಾಕಾರ. ರಸಿಕ ಪ್ರೇಕ್ಷಕರನ್ನು ರಸವಾಹಿನಿಯಲ್ಲಿ ಕೊಂಡೊಯ್ಯುತ್ತಲೇ ತಾನು ಬೆಳೆದು, ಕಲೆ ಬೆಳಗಬಹುದು ಎಂಬುದಕ್ಕಾಗಿ ಸದಾ ಚಿಂತನಶೀಲ ರಾಗಿ, ಕಲೆಗಾಗಿ ಜೀವ ತೇದವರು.

ಆ ಕಾಲಘಟ್ಟದಲ್ಲಿ ಕೇಳುಗನ ಕಿವಿ, ವಿಮಶಾìತ್ಮಕವಾದ ಮನಸ್ಸು, ದೂರದೃಷ್ಟಿಯನ್ನು ಹೊಂದಿದ ವಿವೇಚನೆ ಆರೋಗ್ಯಪೂರ್ಣವಾಗಿ ಇದ್ದುದರಿಂದ ಮತ್ತು ಮುಂದಿನ ಪೀಳಿಗೆಗೆ ಸರಿಯಾದದ್ದನ್ನೇ ಕೊಡ ಬೇಕು ಮತ್ತು ಕಲೆ ಉಳಿದು ಬೆಳೆಯ ಬೇಕು ಎಂಬ ಆಶಯವನ್ನು ಹೊಂದಿದ್ದ ಕಲಾವಿದ ರಿಂದಾಗಿ ಕಲೆ ಸುಲಲಿತವಾಗಿ ಬೆಳಗಿತು; ನಾರಾಯಣ ರಾಯರಂತಹ ನೂರಾರು ಹವ್ಯಾಸಿ ಕಲಾವಿದರಿಂದ ಮುಂದಿನವರಿಗೆ ಸ್ಫೂರ್ತಿ ದೊರಕಿದಂತಾಯಿತು.

ಅನೇಕ ಸಮಾಜಮುಖೀ ಸಂಘಟನೆಗಳಲ್ಲೂ ಮುಂಚೂಣಿಯಲ್ಲಿದ್ದು ಸಹಕಾರಿಗಳಾಗಿದ್ದ ನಾರಾಯಣ ರಾವ್‌, ಅನಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಯಕ್ಷಗಾನ ತರಬೇತಿ ಆರಂಭಗೊಂಡು ಅನೇಕ ಕಲಾವಿದರು ರೂಪುಗೊಳ್ಳುವುದಕ್ಕೆ ಕಾರಣರಾದರು. ದೇವಳದ ಜೀಣೊìàದ್ಧಾರ ಸಮಿತಿ ಕಾರ್ಯದರ್ಶಿಯಾಗಿ, ಅನಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್‌.ಡಿ.ಎಂ.ಸಿ. ಅಧ್ಯಕ್ಷರಾಗಿಯೂ ಹಲವರು ವರ್ಷ ಸೇವೆ ಸಲ್ಲಿಸಿದ್ದರು. ಕಳೆದ ಅಕ್ಟೋಬರ್‌ 11ರಂದು ನಾರಾಯಣ ರಾವ್‌ ನಿಧನ ಹೊಂದಿದರು. 

Advertisement

ಎಂ. ದೇವಾನಂದ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next