Advertisement

ಜಗತ್ತಿಗೆ ಹಿಂದೂ ಕಾನೂನು ನೀಡಿದ್ದೇ ಯಾಜ್ಞವ ಲ್ಕ್ಯಯರು

11:28 AM Jul 01, 2019 | Naveen |

ಕಕ್ಕೇರಾ: ಜಗತ್ತಿಗೆ ಹಿಂದೂ ಕಾನೂನನ್ನು ನೀಡಿದ್ದು ಯಾಜ್ಞವ ಲ್ಕ್ಯರು ಎಂದು ಲೋಕಸಭಾ ಸದಸ್ಯ ರಾಜಾ ಅಮರೇಶ್ವರ ನಾಯಕ ಹೇಳಿದರು.

Advertisement

ಸಮೀಪದ ಹುಣಸಿಹೊಳೆಯ ಶ್ರೀಕಣ್ವ ಮಠದಲ್ಲಿ ಹಿಂದಿನ ಯತಿಗಳಾದ ಪ.ಪೂ. ವಿದ್ಯಾಭಾಸ್ಕರ ತೀರ್ಥ ಶ್ರೀಪಾದಂಗಳವರ ಚತುರ್ಥ ಮಹಾ ಸಮಾರಾಧನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾಜ್ಞವ ಲ್ಕ್ಯ ಸ್ಮತಿಯನ್ನು ಕಾನೂನುನಲ್ಲಿ ಸೇರಿಸಿ ಇಡಿ ವಿಶ್ವವೇ ಗೌರವಿಸಿದೆ. ಇಂತಹ ಯಾಜ್ಞವ ಲ್ಕ್ಯರ ಏಕೈಕ ಕಣ್ವ ಮಠ ಹುಣಸಿಹೊಳೆಯಲ್ಲಿ ಇರುವುದು ಹೆಮ್ಮೆಯ ಸಂಗತಿ. ಹೀಗಾಗಿ ಕಣ್ವ ಮಠ ಸೇರಿದಂತೆ ವಿಪ್ರ ಸಮಾಜದ ಅಭಿವೃದ್ಧಿಗೆ ಸದಾ ಬದ್ಧನಾಗಿರುತ್ತೇನೆ ಎಂದರು.

ಕೃಷ್ಣಾ ತೀರದ ಈ ಭಾಗದಲ್ಲಿ ಇರುವ ಭಕ್ತಿ ಪರಂಪರೆಯ ಸ್ಥಾನಗಳು ಬೇರೆ ಯಾವಕಡೆಯೂ ಇಲ್ಲಾ. ಸಮಾಜದ ಒಳಿತಿಗೆ ಬೇಕಾಗುವ ಅನೇಕ ಮಾರ್ಗದರ್ಶನಗಳನ್ನು ನನಗೆ ಸದಾ ಶ್ರೀಮಠ ನೀಡಿದೆ. ಆದ್ದರಿಂದ ವಿಪ್ರ ಸಮಾಜದ ಎಲ್ಲಾ ಧಾರ್ಮಿಕ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಮುತುವರ್ಜಿ ವಹಿಸಲಾಗುವುದು ಎಂದು ತಿಳಿಸಿದರು.

ಶಾಸಕ ನರಸಿಂಹ ನಾಯಕ (ರಾಜುಗೌಡ) ಮಾತನಾಡಿ, ಭಾರತ ದೇಶದಲ್ಲಿ ಏಕೈಕ ಕಣ್ವಪೀಠ ಹುಣಸಿಹೊಳೆಯಲ್ಲಿ ಇದೆ. ದೇಶ ಕಂಡ ಮಹಾನ್‌ ನಾಯಕ ವಾಜಪೇಯಿ ಶ್ರೀಮಠದ ಭಕ್ತರಾಗಿದ್ದರು. ನನ್ನ ಬಾಲ್ಯದ ಎಲ್ಲಾ ಸಂಸ್ಕಾರಗಳು ಶ್ರೀಮಠದಿಂದಲೇ ದೊರಕಿವೆೆ. ಹಾಗಾಗಿ ಶ್ರೀಮಠದ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಸದಾ ಸಿದ್ಧ ಎಂದರು.

Advertisement

ನಾಸಿಕ್‌ನ ಪಿ.ಎಸ್‌. ಜೋಶಿ ಮಾತನಾಡಿ, ಜಮ್ಮು ಕಾಶ್ಮೀರದ ಪಂಡಿತರು ಕೂಡ ಶುಕ್ಲ ಯರ್ಜುವೇದಿಯರು ಆಗಿದ್ದರು ಎಂದು ಹೇಳಿದರು.

ವಿದ್ಯಾವಾರಿ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಿ, ಇಂದು ಶ್ರೀಮಠದಲ್ಲಿ ಹಮ್ಮಿಕೊಂಡಿದ್ದ ಯಜ್ಞಗಳಿಂದ ಸಮಸ್ತ ಮನುಕುಲಕ್ಕೆ ಆರೋಗ್ಯ ಭಾಗ್ಯ, ಕಾಲಕಾಲಕ್ಕೆ ಮಳೆ, ಉತ್ತಮ ಪರಿಸರಕ್ಕಾಗಿ ಹೋಮ ನಡೆಸಲಾಗಿದೆ. ಯಜ್ಞಗಳು ಇಳೆಗೆ ಮಳೆಯನ್ನು ನೀಡುವುದರೊಂದಿಗೆ ನಮಗೆ ಉಸಿರಾಟಕ್ಕೆ ಆಮ್ಲಜನಕವನ್ನು ನೀಡಲಿ ಎಂದರು.

ಅನಿಷ್ಟ ನಿವೃತ್ತಿ, ಇಷ್ಟ ಫಲ ಪ್ರಾಪ್ತಿ ಉಂಟಾಗುವುದು. ಇಂದು ಶ್ರೀ ಮಠದಲ್ಲಿ ನಡೆಸಲಾದ ಎಲ್ಲಾ ಹೋಮ ಹವನಗಳನ್ನು ನಮ್ಮ ದೇಶದ ರಕ್ಷಣೆ ಮಾಡುವ ಸೈನಿಕರಿಗೆ ಒಳಿತನ್ನು ಬಯಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.

ಈ ಸಂದರ್ಭ ಅಖೀಲ ಕರ್ನಾಟಕ ಬ್ರಾಹ್ಮಣ ಸಭಾದ ಕೆ.ಎನ್‌. ವೆಂಕಟನಾರಾಯಣ, ಪುಣೆ ಮಹಾನಗರ ಪಾಲಿಕೆಯ ಸದಸ್ಯ ವಿಲಾಸರಾವ ಮಾಡಿಗೇರಿ, ಬಿ.ಜಿ. ಸತ್ಯನಾರಾಯಣ, ವಾಯ್‌.ಎನ್‌. ಗುರುರಾಜರಾವ, ಡಾ| ನಾಗರಾಜರಾವ, ಪ್ರಮೋದ ಕುಲಕರ್ಣಿ, ಶೀಲಾದಾಸ ರಾಯಚೂರು, ಎಸ್‌. ನಾಗರಾಜರಾವ್‌ ಕೋಣಕುಂಟ್ಲು, ಅರುಣ ಕುಲಕರ್ಣಿ, ಪದ್ಮನಾಭರಾವ ತಲೇಖಾನ, ಕಿಶನರಾವ ಯಕರನಾಳ, ಸುರೇಶ ಕುಲಕರ್ಣಿ, ರಾಜಾ ಹನುಮಪ್ಪ ನಾಯಕ ತಾತಾ, ಎನ್‌.ಆರ್‌. ಕುಲಕರ್ಣಿ ಧಾರವಾಡ, ವಾಮನರಾವ ಕೆಂಭಾವಿ, ಕೃಷ್ಣ ಪುರಾಣಿಕ, ಮನೋಹರ ಮಾಡಿಗೇರ, ರಾಘವೇಂಧ್ರ ಮುಂಡರಗಿ, ಅರುಣಕುಮಾರ ಮೇಲು ಕೋಟೆ ಸೇರಿದಂತೆ ವಿಪ್ರ ಸಮಾಜದವರು ಇದ್ದರು.

ಇದೆ ವೇಳೆ ಅನೇಕ ಸಮಾಜದ ಗಣ್ಯರನ್ನು ಸನ್ಮಾನಿಸಿ ಕಣ್ವ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹತ್ತನೆ ತರಗತಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಗೌರವಿಸಿಲಾಯಿತು.

ಕಿಶನರಾವ ಕುಲಕರ್ಣಿ ಸ್ವಾಗತಿಸಿದರು. ಸುರೇಖಾ ಕುಲಕರ್ಣಿ ನಿರೂಪಿಸಿದರು. ವಿನೋದ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next