Advertisement

Kaiva; ಆ್ಯಕ್ಷನ್ ಟೀಸರ್’ನಲ್ಲಿ ಧನ್ವೀರ್ ‘ಕೈವ’

03:09 PM Nov 10, 2023 | Team Udayavani |

ಸಿನಿಮಾದಿಂದ ಸಿನಿಮಾಕ್ಕೆ ಹೊಸದನ್ನು ಪ್ರಯತ್ನಿಸುತ್ತಾ, ಯಾವುದೇ ಒಂದು ಜಾನರ್‌ಗೆ ಬ್ರಾಂಡ್‌ ಆಗದೇ ಚಿತ್ರರಂಗ ದಲ್ಲಿ ಕೆಲವು ನಿರ್ದೇಶಕರುಗಳು ಗುರುತಿಸಿಕೊಂಡಿದ್ದಾರೆ. ಆ ಸಾಲಿಗೆ ಸೇರುವವರಲ್ಲಿ ನಿರ್ದೇಶಕ ಜಯತೀರ್ಥ ಕೂಡಾ ಒಬ್ಬರು. ಒಲವೇ ಮಂದಾರ, ಬ್ಯೂಟಿಫ‌ುಲ್‌ ಮನಸ್ಸುಗಳು, ಬೆಲ್‌ ಬಾಟಂ, ಬನಾರಸ್‌ನಂತಹ ಸಿನಿಮಾಗಳನ್ನು ಮಾಡಿರುವ ಜಯತೀರ್ಥ ಈಗ ಈಗ “ಕೈವ’ ಮೂಲಕ ಹೊಸ ದನ್ನು ಪ್ರಯತ್ನಿಸಿದ್ದಾರೆ.

Advertisement

ಧನ್ವೀರ್‌ ನಾಯಕರಾಗಿರುವ ಈ ಚಿತ್ರ ಆ್ಯಕ್ಷನ್‌ ಹಿನ್ನೆಲೆಯಿಂದ ಕೂಡಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಮೊದಲ ಹಂತವಾಗಿ ಚಿತ್ರದ ಆ್ಯಕ್ಷನ್‌ ಟೀಸರ್‌ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ 1983 ಎಂಬ ಟ್ಯಾಗ್‌ ಲೈನ್‌ ಕೂಡ ಇದೆ.

ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್‌ 13ರಂದು ಚಿತ್ರದ ಆ್ಯಕ್ಷನ್‌ ಟೀಸರ್‌ ರಿಲೀಸ್‌ ಮಾಡಲು ಚಿತ್ರತಂಡ ಮುಂದಾಗಿದೆ. ರಗಡ್‌ ಲುಕ್‌ನಲ್ಲಿ ಧನ್ವೀರ್‌ ಕಾಣಿಸಿಕೊಂಡಿದ್ದಾರೆ. ಮೇಘಾ ಶೆಟ್ಟಿ ಈ ಚಿತ್ರದ ನಾಯಕಿ. ಅಭುವನಸ ಕ್ರಿಯೇಶನ್ಸ್‌ ಬ್ಯಾನರ್‌ನಡಿ ರವೀಂದ್ರ ಕುಮಾರ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆ, ಡಾ. ವಿ. ನಾಗೇಂದ್ರ ಪ್ರಸಾದ್‌ ಸಾಹಿತ್ಯ ಹಾಡುಗಳಿಗಿದೆ. ಕೆ.ಎಂ.ಪ್ರಕಾಶ್‌ ಸಂಕಲನ, ರಘು ನಿಡುವಳ್ಳಿ ಸಂಭಾಷಣೆಗೆ ಇದೆ.

ಅಂದಹಾಗೆ, ಕೈವ ಚಿತ್ರದ ಕಥೆಗೂ ಕರಗ ಉತ್ಸವಕ್ಕೂ ನಂಟಿರುವುದರಿಂದ ಬೆಂಗಳೂರಿನ ತಿಗಳರ ಪೇಟೆಯ ಸುತ್ತಮುತ್ತ ಕೈವ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next