Advertisement

ಸಂಗಾತಿ ಮಾಹಿತಿ ಇಲ್ಲದೆಯೂ  ಕೈಸೇರುತ್ತೆ ಪಾಸ್‌ಪೋರ್ಟ್‌!

03:45 AM Feb 11, 2017 | Team Udayavani |

ನವದೆಹಲಿ: ಪಾಸ್‌ಪೋರ್ಟ್‌ ಪಡೆಯಲು ಇರುವ ನಿಬಂಧನೆಗಳನ್ನು ಸಡಿಲಗೊಳಿಸುತ್ತಿರುವ ಕೇಂದ್ರ ಸರ್ಕಾರ ಈಗ ಪೋಷಕರು, ಸಂಗಾತಿಯ ಹೆಸರುಗಳಂಥ ಖಾಸಗಿ ಮಾಹಿತಿಗಳು ಇಲ್ಲದೆಯೂ ಪಾಸ್‌ಪಾರ್ಟ್‌ ಪಡೆಯಬಹುದಾದ ಪ್ರಸ್ತಾಪಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ.

Advertisement

ಹೊಸ ನಿಯಮದನ್ವಯ ತಂದೆ ಅಥವಾ ತಾಯಿ ಇಬ್ಬರಲ್ಲಿ ಒಬ್ಬರ ಹೆಸರನ್ನು ನಮೂದಿಸಿ ಪಾಸ್‌ಪೋರ್ಟ್‌ ಪಡೆಯಬಹುದು. ಚಾಲ್ತಿಯಲ್ಲಿರುವ ನಿಯಮದ್ವನಯ ಪಾಸ್‌ಪೋರ್ಟ್‌ ಪಡೆಯಲು ತನ್ನ ಇಬ್ಬರೂ ಪೋಷಕರ ಅಥವಾ ಸಂಗಾತಿಯ ಹೆಸರನ್ನು ನೊಂದಾಯಿಸಬೇಕಿತ್ತು. 

ಪಾಸ್‌ಪೋರ್ಟ್‌ ಪಡೆಯಲು ತೊಡಕಾಗಿರುವ ಅಂಶಗಳ ಕುರಿತು ಪರಿಶೀಲಿಸುವಂತೆ ಕೇಂದ್ರ ಸರ್ಕಾರ ಸಮಿತಿಯನ್ನು ನೇಮಿಸಿತ್ತು. ಸಮಿತಿಯು ಒಂದು ವರ್ಷದ ಹಿಂದೆಯೇ ತನ್ನ ವರದಿಯನ್ನು ಸಲ್ಲಿಸಿತ್ತು. ಪಾಸ್‌ಪೋರ್ಟ್‌ ಪಡೆಯಲು ಖಾಸಗಿ ವಿಚಾರಗಳನ್ನು ನಮೂದಿಸಬೇಕೆಂಬ ನಿಯಮ ಇತರೆ ಯಾವುದೇ ದೇಶಗಳಲ್ಲಿ ಇಲ್ಲ. ಇದನ್ನು ತೆಗೆದು ಹಾಕಬಹುದು ಎಂದು ಸಮಿತಿ ಶಿಫಾರಸ್ಸು ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next