ಕಾಪು: ಕೈಪುಂಜಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಪ್ರಯುಕ್ತ ಕೈಪುಂಜಾಲು ವಿದ್ಯಾಸಾಗರ ಎಜುಕೇಶನ್ ಟ್ರಸ್ಟ್ ಆಡಳಿತಕ್ಕೊಳಪಟ್ಟ ಶಿಕ್ಷಣ ಸಂಸ್ಥೆ ಕೈಪುಂಜಾಲು ದಿ| ಚೆನ್ನಪ್ಪ ಸಾಹುಕಾರ್ ಅವರ ಸ್ಮರಣಾರ್ಥವಾಗಿ ನಿರ್ಮಾಣಗೊಂಡಿರುವ ವಿಶ್ವೇಶತೀರ್ಥ ವಿದ್ಯಾಲಯದ ನೂತನ ಕಟ್ಟಡವನ್ನು ನ. 30ರಂದು ಬೆಳಗ್ಗೆ 10.35ಕ್ಕೆ ಉಡುಪಿ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ.
ಡಾ| ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್ ಸಭಾಭವನವನ್ನು ಉದ್ಘಾಟಿಸಲಿದ್ದು ಶಾಲಾ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಸತೀಶ್ ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಯಶ್‌ಪಾಲ್ ಸುವರ್ಣ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಮಾಜಿ ಸಾಸಕ ಲಾಲಾಜಿ ಆರ್. ಮೆಂಡನ್, ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ನಿ.ಬೀ. ವಿಜಯ ಬಲ್ಲಾಳ್, ಗಣ್ಯರಾದ ಸಂತೋಷ್ ಎಸ್. ಮೆಂಡನ್, ರಾಮದಾಸ್ ಪುತ್ತಿಗೆ, ಕೆ. ಪ್ರಕಾಶ್ ಶೆಟ್ಟಿ ಬಂಜಾರ, ಆನಂದ ಸಿ. ಕುಂದರ್, ಹರಿಯಪ್ಪ ಕೋಟ್ಯಾನ್, ಸಾಧು ಸಾಲ್ಯಾನ್, ಬಿ.ಆರ್. ಶೆಟ್ಟಿ ಅಬುಧಾಬಿ, ಮನೋಹರ್ ಶೆಟ್ಟಿ, ಜ್ಞಾನೇಶ್ವರ ಕೋಟ್ಯಾನ್, ಬಿ. ಸುಬ್ರಹ್ಮಣ್ಯ ಸಾಮಗ, ಗಣಪತಿ ಕೆ., ಸಂತೋಷ್, ರಾಜಗೋಪಾಲ ಬಿ., ಸಾಕ್ಷಾತ್ ಯು.ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ರಾತ್ರಿ 8ಕ್ಕೆ ಶತಮಾನೋತ್ಸವ ಸಂಭ್ರಮಾಚರಣೆ ಸಭಾ ಕಾರ್ಯಕ್ರಮ ನಡೆಯಲಿದ್ದು ಕೈಪುಂಜಾಲು ಸರಕಾರಿ ಹಿ.ಪ್ರಾ. ಶಾಲೆಯ ಶತಮಾನೋತ್ಸವ ಸಮಿತಿ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಗಣ್ಯರಾದ ಸೀತಾರಾಮ ಶೆಟ್ಟಿ, ಸೀತಾರಾಮ ಭಟ್ ದಂಡತೀರ್ಥ, ಕಿರಣ್ ಆಳ್ವ, ಶೋಭಾ ಬಂಗೇರ, ಗಣೇಶ ಮಟ್ಟು, ಅಶೋಕ್ ಕಾಮತ್, ಆಶಾಲತಾ, ವೇದ, ಬಬಿತ, ರಾಮಕೃಷ್ಣ ತಂತ್ರಿ, ಶೇಖರ ಆಚಾರ್ಯ, ವಾಸುದೇವ ಶೆಟ್ಟಿ, ವಾಸುದೇವ ಭಟ್, ವಿಕ್ರಂ ಕಾಪು, ರೆ| ಶಶಿಕಲಾ ಅಂಚನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪ್ರಮುಖರಾದ ಜೆ.ಸಿ. ಕೈಪುಂಜಾಲು, ಚಂದ್ರಶೇಖರ್ ಅಮೀನ್, ವಿಠಲ ಶ್ರೀಯಾನ್, ಮನೋಹರ್ ಅಮೀನ್ ಉಪಸ್ಥಿತರಿರಲಿದ್ದಾರೆ ಎಂದು ಕೈಪುಂಜಾಲು ವಿದ್ಯಾಸಾಗರ ಎಜುಕೇಶನ್ ಟ್ರಸ್ಟ್, ನೂತನ ಶಾಲಾ ಕಟ್ಟಡ ನಿರ್ಮಾಣ ಸಮಿತಿ, ಹಳೇ ವಿದ್ಯಾರ್ಥಿ ಸಂಘ, ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದದ ಪ್ರಕಟನೆಯು ತಿಳಿಸಿದೆ.
ನ. 30ರಂದು ಬೆಳಗ್ಗೆ 7 ಗಂಟೆಗೆ ಗಣಪತಿ ಹೋಮ, ಸರಸ್ವತಿ ಪೂಜೆ, 9.30ರಿಂದ ನೃತ್ಯ, 10.35ಕ್ಕೆ ನೂತನ ಕಟ್ಟಡ ಉದ್ಘಾಟನೆ, 10.45ಕ್ಕೆ ಸಭೆ ನಡೆಯಲಿದೆ. ರಾತ್ರಿ 7 ಗಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ಸಭೆ, 9ಕ್ಕೆ ಕಾಪು ರಂಗತರಂಗ ಕಲಾವಿದರಿಂದ ತುಳು ನಾಟಕ ಪ್ರದರ್ಶನಗೊಳ್ಳಲಿದೆ.