Advertisement

ಕೈಲಾಶ್ ವಸತಿ ಸಮುಚ್ಚಯ: ಗುಣನಾಥನ ಮೋಕ್‌ ಅಪ್ ಫ್ಲ್ಯಾಟ್ ಗೆೆ ಅಭೂತಪೂರ್ವ ಸ್ಪಂದನೆ

08:02 PM Mar 27, 2023 | Team Udayavani |

ಭಾರ್ಗವಿ ಬಿಲ್ಡರ್ಸ್ ಅವರಿಂದ ಕೊಟ್ಟಾರದ ಮಾಲೆಮಾರ್ ಬಳಿ ನಿರ್ಮಾಣಗೊಳ್ಳುತ್ತಿರುವ ಅತ್ಯಾಧುನಿಕ ‘ಕೈಲಾಶ್’ ವಸತಿ ಸಮುಚ್ಚಯದಲ್ಲಿ ಗುಣನಾಥ-ಶಿಲ್ಪಾ ದಂಪತಿಯ ಮೋಕ್‌ಅಪ್ ಫ್ಲ್ಯಾಟ್ ಉದ್ಘಾಟನೆಯ ಬಳಿಕ ಜನರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ.

Advertisement

ಈ ಸಮುಚ್ಚಯದಲ್ಲಿ ಶೇ.75 ಷ್ಟು ಫ್ಲ್ಯಾಟ್ ಗಳು ಬುಕ್ಕಿಂಗ್ ಆಗಿವೆ. ಬುಕ್ಕಿಂಗ್ ಮಾಡಿದವರು ತಮ್ಮ ಸ್ನೇಹಿತರು, ಪರಿಚಯಸ್ಥರನ್ನು ಇಲ್ಲಿ ಫ್ಲ್ಯಾಟ್ ಬುಕ್ ಮಾಡಲು ಪ್ರೇರೇಪಿಸುತ್ತಿದ್ದಾರೆ. ಇನ್ನು ಕೆಲವೇ ಫ್ಲ್ಯಾಟ್ ಗಳು ಬಾಕಿ ಉಳಿದಿವೆ. 2 ಬಿಎಚ್‌ಕೆ 67 ಲಕ್ಷ ರೂ., 3 ಬಿಎಚ್‌ಕೆ 1.10 ಕೋ.ರೂ., 4 ಬಿಎಚ್‌ಕೆ ಡ್ಯುಪ್ಲೆಕ್ಸ್ ಫ್ಲ್ಯಾಟ್ ಗೆ 1.80 ಕೋ.ರೂ. ದರ ನಿಗದಿಪಡಿಸಲಾಗಿದೆ. ಈ ದರ ಕೆಲವು ಫ್ಲ್ಯಾಟ್ ಗಳಿಗೆ ಕೆಲವೇ ದಿನಗಳಿಗೆ ಸೀಮಿತ.

ಅತ್ಯಾಧುನಿಕ ಸೌಲಭ್ಯಗಳು
ಅಪಾರ್ಟ್ಮೆಂಟ್‌ನಲ್ಲಿ ಅತ್ಯಾಧುನಿಕ ಗುಣಮಟ್ಟದ ಸೌಲಭ್ಯ ದೊರೆಯಲಿದೆ. ಇಂತಹ ಸೌಲಭ್ಯಗಳು ಮಂಗಳೂರು ನಗರದಲ್ಲಿ ಈ ಯೋಜನೆಯಲ್ಲಿ ಮೊದಲ ಬಾರಿಗೆ ಲಭಿಸುತ್ತಿದೆ. ರೂಫ್‌ಟಾಪ್‌ನಲ್ಲಿ ಸ್ವಿಮ್ಮಿಂಗ್ ಫೂಲ್ ನಿರ್ಮಾಣವಾಗುತ್ತಿದೆ. 15 ಮಹಡಿಗಳಲ್ಲಿ 131 ಅಪಾರ್ಟ್ಮೆಂಟ್‌ಗಳು ವಾಸ್ತು ಪ್ರಕಾರವಾಗಿ ನಿರ್ಮಾಣಗೊಳ್ಳುತ್ತಿದೆ. ಮಿನಿ ಥಿಯೇಟರ್, ಹವಾನಿಯಂತ್ರಿತ ಜಿಮ್ನೇಶಿಯಂ, ಒಳಾಂಗಣ ಹಾಗೂ ಹೊರಾಂಗಣ ಕ್ರೀಡೆಗೆ ವಿಶಾಲ ಪ್ರದೇಶ, ಮಕ್ಕಳಿಗೆ ಆಟದ ಪ್ರದೇಶ, ಗ್ರಂಥಾಲಯ, ಯೋಗ ಪೆವಿಲಿಯನ್, ವಿಸಿಟರ್ಸ್ ಲಾಬಿ, ಇಂಟರ್‌ಕಾಮ್ ಲಾಬಿ, ಸೋಲಾರ್ ಪ್ಯಾನೆಲ್ಸ್, ರೆಕ್ಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ, 3 ಅಟೋಮ್ಯಾಟಿಕ್ ಎಲೆವೇಟರ್ಸ್, ಕಾರ್ ಪಾರ್ಕಿಂಗ್ ಮತ್ತು ಜನರೇಟರ್ ವ್ಯವಸ್ಥೆ ಮೊದಲಾದ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

ಭಾರ್ಗವಿ ಬಿಲ್ಡರ್ಸ್ ಈಗಾಗಲೇ 5 ವಸತಿ ಸಮುಚ್ಚಯ ಹಾಗೂ 1 ವಾಣಿಜ್ಯ ಸಮುಚ್ಚಯವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಅಪಾರ್ಟ್ಮೆಂಟ್ ಬುಕ್ಕಿಂಗ್‌ಗಾಗಿ ಗ್ರಾಹಕರು ಕೊಟ್ಟಾರದಲ್ಲಿರುವ ಭಾರ್ಗವಿ ಬಿಲ್ಡರ್ಸ್ ಸಂಸ್ಥೆ ಕಚೇರಿ ಸಂಪರ್ಕಿಸಬಹುದು. ಮಾಹಿತಿಗೆ www.bhargavibuilders.com ಗೆ ಭೇಟಿ ನೀಡಬಹುದು ಅಥವಾ 9611730555/7090933900 ಗೆ ಕರೆ ಮಾಡಬಹುದು ಎಂದು ಸಂಸ್ಥೆಯ ಪ್ರವರ್ತಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next