Advertisement

Congress: ಪ್ರಧಾನಿ ವಿರುದ್ಧ ಕೈ ನಾಯಕನ ನಿಂದನೆ

11:51 PM Sep 23, 2023 | Team Udayavani |

ನವದೆಹಲಿ: ಬಿಜೆಪಿ ಸಂಸದ ರಮೇಶ್‌ ಬಿಧೂರಿ ಅವಾಚ್ಯ ಪದಬಳಕೆ ವಿಚಾರ ಮುನ್ನಲೆಯಲ್ಲಿರುವಾಗಲೇ ಹರ್ಯಾಣ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಉದಯ್‌ ಬಾನ್‌, ಪ್ರಧಾನಿ ಮೋದಿ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ವಿಡಿಯೋ ವೈರಲ್‌ ಆಗಿದೆ.

Advertisement

ಈ ಸಂಬಂಧಿಸಿದಂತೆ ಬಿಜೆಪಿ ಕಾಂಗ್ರೆಸಿಗರನ್ನು ತರಾಟೆ ತೆಗೆದುಕೊಂಡಿದ್ದು, ಬಾನ್‌ ಬಳಸಿರುವ ಪದಗಳೇನು ಕಾಂಗ್ರೆಸ್‌ನ “ಪ್ರೀತಿಯ ಅಂಗಡಿ”ಯೇ ಎಂದು ಪ್ರಶ್ನಿಸಿದೆ. ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲಾ ಬಾನ್‌ ಟ್ವೀಟ್‌ ಮಾಡಿ “ಪ್ರಧಾನಿ ಅವರನ್ನೂ, ಸಿಎಂ ಕಟ್ಟರ್‌ ಅವರನ್ನೂ ಗುರಿಯಾಗಿಸಿ ಅವಾಚ್ಯ ಪದಗಳಿಂದ ಬಾನ್‌ ಟೀಕಿಸಿದ್ದಾರೆ. ಇದೇನು ಪ್ರೀತಿಯ ಅಂಗಡಿಯೇ? ಕಾಂಗ್ರೆಸ್‌ ಇಂಥವುಗಳನ್ನೇ ಬೆಂಬಲಿಸುತ್ತದೆ. ಕಾಂಗ್ರೆಸ್‌ ನಾಯಕರಾದ ರಾಹುಲ್‌, ಖರ್ಗೆ, ಸೋನಿಯಾ ಅವರೇ ಕೆಟ್ಟ ಪದಗಳಿಂದ ನಿಂದಿಸುತ್ತಾರೆ. ಜನರನ್ನೇ ರಾಕ್ಷಸರು ಎನ್ನುತ್ತಾರೆ ಇದೇ ಕಾಂಗ್ರೆಸ್‌ನ ನಿಜಬಣ್ಣ’ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next