Advertisement

ಸಾಮಾಜಿಕ ಸೇವಾ ಕಾರ್ಯಕ್ಕಿಂತ ಈಗ ಅಧಿಕಾರವೇ ಗುರಿ

06:17 PM Jan 23, 2023 | Team Udayavani |

ಹಿಂದೆ ರಾಜಕಾರಣದಲ್ಲಿ ಪ್ರಾಮಾಣಿಕವಾಗಿ, ಜನರ ಸಮಸ್ಯೆಗಳ ಚರ್ಚೆ ಮಾಡಿ ಅದರ ಪರಿಹಾರ ಮುಖ್ಯವಾಗಿರುತ್ತಿತ್ತು. ಈಗಿನ ರಾಜಕಾರಣದಲ್ಲಿ ಅ ಧಿಕಾರ ಹಿಡಿಯು ವುದೇ ಮುಖ್ಯ ಉದ್ದೇಶವಾಗಿದೆ. ಜನರ ಸಮಸ್ಯೆ ಬಗೆಹರಿಸುವ ದೃಷ್ಟಿಯಿಂದ ರಾಜಕಾರಣ ಮಾಡಬೇಕು. ರಾಜಕಾರಣ ಎಂದರೆ ಅ ಧಿಕಾರ ಹಿಡಿಯುವುದು ಮಾತ್ರ ಅಲ್ಲ. ಇದು ಸಾಮಾಜಿಕ ಸೇವಾ ಕ್ಷೇತ್ರ. ಅದನ್ನು ರಾಜಕಾರಣವಾಗಿ ಪರಿಗಣಿಸಿ ಚುನಾವಣೆಯಲ್ಲಿ ಭಾಗವಹಿಸಬೇಕು.

Advertisement

ಪ್ರಸ್ತುತ ಜನರ ಸಮಸ್ಯೆ ಮುಂದಿಟ್ಟುಕೊಂಡು ಚುನಾವಣೆ ಎದುರಿಸುವುದು ಹೋಗಿದೆ. ಸಾಮಾಜಿಕವಾಗಿ ಏನು ಅವ್ಯವಸ್ಥೆ ಇದೆ ಅದರಲ್ಲಿ ಬದಲಾವಣೆ ಮಾಡಿ ಸರಿಪಡಿಸಬೇಕು. ಯಾವ ಕಾರ್ಯಕ್ರಮ ಕೊಟ್ಟರೆ ಆ ವರ್ಗಕ್ಕೆ ಅನುಕೂಲ ಆಗುತ್ತದೆ. ಅದು ಅಭಿವೃದ್ಧಿ ಆಗಿರಬಹುದು. ಜನರ ಜೀವನದ ಸಮಸ್ಯೆಗಳಿಗೆ ಸಂಬಂಧಪಟ್ಟ ಕಾರ್ಯಕ್ರಮಗಳಿರಬಹುದು. ಆ ಪ್ರದೇಶದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಚುನಾವಣೆ ಮಾಡಬೇಕು.

ಈ ಹಿಂದೆ ಗೆಲ್ಲುವುದನ್ನೇ ಮುಖ್ಯ ಆಧಾರವಾಗಿಟ್ಟುಕೊಂಡು, ಕ್ಷೇತ್ರದ ಜನಸಂಖ್ಯೆ, ಕೆಲಸ ಮಾಡಿದ ಪ್ರಭಾವದ ಆಧಾರದ ಮೇಲೆ ಟಿಕೆಟ್‌ ಹಂಚಿಕೆ ಮಾಡುತ್ತಿದ್ದರು. ಸಾರ್ವಜನಿಕ ಸೇವೆ, ಸಾರ್ವಜನಿಕ ಜೀವನದಲ್ಲಿ ಉತ್ತಮ ಹೆಸರು ಪರಿಶೀಲಿಸಿ ಟಿಕೆಟ್‌ ನೀಡುತ್ತಿದ್ದರು. ಜಾತಿ ಕೂಡ ಅಷ್ಟೇ ಕೆಲಸ ಮಾಡುತ್ತಿತ್ತು. ಈಗ ಹಣ ಬಲ, ಜಾತಿ ಬಲಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಲಾಗುತ್ತಿದ್ದು, ಸಾರ್ವಜನಿಕ ಸೇವೆಯೆಲ್ಲ ಗೌಣವಾಗಿದೆ. ಈ ಹಿಂದೆ ಹೈಕಮಾಂಡ್‌ ಪ್ರಭಾವ ಅಷ್ಟು ಇರಲಿಲ್ಲ. ಈಗ ಉಮೇದುವಾರಿಕೆ ಜಾಸ್ತಿ ಇರುವುದರಿಂದ ಹೈಕಮಾಂಡ್‌ಗೆ ಹೆಚ್ಚಿನ ಆದ್ಯತೆ ಇದೆ. ಈ ಹಿಂದೆ ಸ್ಥಳೀಯ ವರದಿ ಆಧಾರದಲ್ಲಿ ಆದ್ಯತೆ ಮೇರೆಗೆ ಟಿಕೆಟ್‌ ನೀಡುತ್ತಿದ್ದರು.

ಪ್ರಚಾರದ ವಿಷಯಕ್ಕೆ ಬಂದರೆ ನಮ್ಮ ಸರಕಾರ ಯಾವ ಯೋಜನೆ ಕೊಡುತ್ತದೆ. ಯಾವ ಜನರಿಗೆ ಅನುಕೂಲ ಮಾಡುತ್ತದೆ. ಸಾಮಾಜಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಅದನ್ನು ಬದಲಾವಣೆ ಮಾಡುವ ದೃಷ್ಟಿಯಿಂದ ಯಾವ ವರ್ಗದ ಜನರಿಗೆ ಏನು ಸಹಾಯ ಮಾಡಿದರೆ ಬದಲಾವಣೆ ಕಾಣಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಅದನ್ನು ಪ್ರಸ್ತಾವ ಮಾಡಲಾಗುತ್ತಿತ್ತು. ಬೂತ್‌, ಗ್ರಾಮ ಮಟ್ಟದಲ್ಲಿ ಪ್ರಚಾರ ಮಾಡುತ್ತಿದ್ದೆವು. ಹೋದ ಕಡೆ ಕಾರ್ಯಕರ್ತರು, ಅಭಿಮಾನಿಗಳು ನೆರವಿಗೆ ಬರುತ್ತಿದ್ದರು. ಹಿಂದೆಯೂ ಕಾರು, ಬೈಕ್‌ ಇದ್ದವು. ಅದನ್ನು ಬಳಸಿಕೊಂಡು ಹೋಗುತ್ತಿದ್ದೆವು. ಚುನಾವಣ ಪ್ರಚಾರದ ವಿಷಯದಲ್ಲಿ ಅಷ್ಟೇನೂ ಬದಲಾವಣೆ ಆಗಿಲ್ಲ.

ಚುನಾವಣ ಖರ್ಚು ಆಗಲೂ 50, 60 ಲಕ್ಷ ಇರುತ್ತಿತ್ತು. ಈಗ ಕೋಟ್ಯಂತರ ರೂ. ಬೇಕು. ಮತದಾರರ ಜತೆಗಿನ ಸಂಬಂಧ ಸಂಘಟನೆ ಮೇಲೆ ಹೋಗುತ್ತದೆ. ಸಂಘಟನೆ ಮಾಡಿದಾಗ ಜನರ ಸಮಸ್ಯೆಗಳನ್ನು ತಿಳಿದುಕೊಂಡು, ಪರಿಹಾರ ನೀಡುವ ನಿಟ್ಟಿನಲ್ಲಿ ಜನರನ್ನು ಸಂಪರ್ಕ ಮಾಡುತ್ತಿದ್ದೆವು. ಈಗಲೂ ಅದರಲ್ಲಿ ಏನು ಬದಲಾವಣೆ ಆಗಿಲ್ಲ. ಚುನಾವಣೆಯಲ್ಲಿ ಗೆದ್ದ ಮೇಲೆ ಹಳ್ಳಿ ಹಳ್ಳಿಗೆ ಹೋಗಿ ಕೃತಜ್ಞತೆ ಸಲ್ಲಿಸುವ ಪರಿಪಾಠ ಇತ್ತು. ಸಕ್ರಿಯವಾಗಿ ಕೆಲಸ ಮಾಡಿದ ಕಾರ್ಯಕರ್ತರಿಗೆ, ಮುಖಂಡರಿಗೂ ಕೃತಜ್ಞತೆ ಸಲ್ಲಿಸಲಾಗುತ್ತಿತ್ತು. ಈಗಿನ ರೀತಿ ಟಿವಿ, ಸಾಮಾಜಿಕ
ಜಾಲತಾಣಗಳು ಇರಲಿಲ್ಲ. ಈಗಲೂ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಪರಿಪಾಠ ಇದೆ.

Advertisement

– ಕಾಗೋಡು ತಿಮ್ಮಪ್ಪ

Advertisement

Udayavani is now on Telegram. Click here to join our channel and stay updated with the latest news.

Next