Advertisement
ಡಿ.ವಿ.ಗುಂಡಪ್ಪ ಅವರ 130ನೇ ಜನ್ಮದಿನದ ಅಂಗವಾಗಿ ನಗರದ ವಾಸವಿ ವಿದ್ಯಾನಿಕೇತನ ಶಾಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ “ಡಿವಿಜಿ ಒಂದು ನೆನಪು’ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಅವರು ಮಾತನಾಡಿದರು. ಮಂಕುತಿಮ್ಮನ ಕಗ್ಗ ಬದುಕಿನ ಭಗವದ್ಗೀತೆ ಎಂದು ಹೇಳಿದರು.
Related Articles
Advertisement
ಕಾರ್ಯಕ್ರಮ ಉದ್ಘಾಟಿಸಿದ ವಾಸವಿ ಶಾಲೆ ಅಧ್ಯಕ್ಷ ಬಿ.ಎನ್.ಸುರೇಂದ್ರನಾಥ ಗುಪ್ತ ಮಾತನಾಡಿ, ಕಲಿಯುವ ಮಕ್ಕಳಿಗೆ ಸಾಧಕರ ಮಾರ್ಗದರ್ಶನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ ಸಾಹಿತಿಗಳನ್ನು ಪರಿಚಯಿಸುವ ಕೆಲಸವನ್ನು ಶಾಲೆಗಳಲ್ಲಿ ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ. ಇನ್ನು ದೊಡ್ಡ ಪ್ರಮಾಣದ ಕಾರ್ಯಕ್ರಮ ಆಯೋಜಿಸಿದಲ್ಲಿ ಸೂಕ್ತ ಸಹಕಾರ ನೀಡುವುದಾಗಿ ಹೇಳಿದರು.
ಮಾಧ್ಯಮ ಕ್ಷೇತ್ರಕ್ಕೆ ಡಿವಿಜಿ ಮಾದರಿ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಸಿಂ.ಲಿಂ.ನಾಗರಾಜ್, ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಮಾತ್ರವಲ್ಲದೆ ದಾರಿತಪ್ಪುತ್ತಿರುವ ರಾಜಕೀಯ ಮತ್ತು ಮಾಧ್ಯಮ ಕ್ಷೇತ್ರಕ್ಕೆ ಡಿವಿಜಿ ಮಾದರಿಯಾಗಿದ್ದಾರೆ. ರಾಜಕೀಯ ಒಂದು ಉದ್ಯಮವಾಗಿ ಪರಿವರ್ತನೆಯಾಗುವ ಅಪಾಯದ ಬಗ್ಗೆ ಅಂದೇ ಡಿವಿಜಿಯವರು ಎಚ್ಚರಿಸಿದ್ದು, ಈಗ ನಿಜವಾಗಿದೆ ಎಂಬುದಕ್ಕೆ ಅವರ ಚಿಂತನೆಯು ಎಷ್ಟರ ಪ್ರಮಾಣದಲ್ಲಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.
ಡಿವಿಜಿ ಅವರ ಕಗ್ಗಗಳನ್ನು ಪೋಷಕರು ಮಕ್ಕಳಿಗೆ ಮನೆಯಲ್ಲಿ ಹೇಳಿಕೊಡುವ ಮೂಲಕ ಅವರ ಅದರ್ಶ ಮೈಗೂಡಿಸಿಕೊಳ್ಳುವಂತೆ ಪ್ರೇರೇಪಣೆ ನೀಡಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಬಿ.ವಿ. ಸೂರ್ಯಪ್ರಕಾಶ್, ಗಾಯಕರಾದ ಚೌ.ಪು.ಸ್ವಾಮಿ, ಜಿ.ಕೃಷ್ಣಾನಾಯಕ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಎಚ್.ಎಸ್.ರೂಪೇಶ್ ಕುಮಾರ್, ವಿಜಯ್‌ರಾಂಪುರ, ಕೋಶಾಧ್ಯಕ್ಷ ಎಚ್.ಪಿ.ನಂಜೇಗೌಡ, ವಾಸವಿ ವಿದ್ಯಾನಿಕೇತನ ಶಾಲೆಯ ಕಾರ್ಯದರ್ಶಿ ಪಿ.ವಿ.ಬದರಿನಾಥ್, ಪ್ರಮುಖರಾದ ಕೆ.ವಿ.ಉಮೇಶ್, ಎಂ.ಬಿ.ಜನಾರ್ಧನ, ಶಿಕ್ಷಕ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.