Advertisement

ಯುವತಿಯ ಕಾಡುತ್ತಿದ್ದ ಪ್ರೇಮಿ ಪಿಂಕ್‌ ಹೊಯ್ಸಳ ಪಡೆ ಬಲೆಗೆ

12:08 PM Apr 12, 2017 | |

ಬೆಂಗಳೂರು: ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ರಕ್ಷಣೆಗೆ ನಗರ ಪೊಲೀಸರು ಜಾರಿಗೆ ತಂದಿರುವ”ಪಿಂಕ್‌ ಹೊಯ್ಸಳ’ ಗಸ್ತು ವ್ಯವಸ್ಥೆ ನಂತರ ಮೊದಲ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಪರಿಚಯಸ್ಥ ಯುವತಿ ಜತೆ ಅನುಚಿತವಾಗಿ ವರ್ತನೆ ತೋರಿದ ಆರೋಪದ ಮೇಲೆ ಯುವಕನೊಬ್ಬನನ್ನು ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ.

Advertisement

ಟಿಂಬರ್‌ ಯಾರ್ಡ್‌ ನಿವಾಸಿ ದೀಪಕ್‌ (28) ಬಂಧಿತ ಯುವಕ. ಎಂಟು ವರ್ಷದಿಂದ ಪರಿಚಧಿಯವಿದ್ದ ಅಶ್ವಿ‌ನಿ (ಹೆಸರು ಬದಲಿಸಲಾಗಿದೆ.) ಎಂಬ ಯುವತಿ ಜತೆ ಕತ್ರಿಗುಪ್ಪೆ ವಾಟರ್‌ಟ್ಯಾಂಕ್‌ ಬಸ್‌ ನಿಲ್ದಾಣದಲ್ಲಿ ಅಸಭ್ಯವಾಗಿ ವರ್ತಿಸಿದ ಬಗ್ಗೆ ಆತನ ವಿರುದ್ಧ ದೂರು ದಾಖಲಾಗಿದೆ.

ಆದರೆ, ಮೂಲಗಳ ಪ್ರಕಾರ, ಇಬ್ಬರೂ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದು, ಇತ್ತೀಚೆಗೆ ಯುವಕನ ವರ್ತನೆಯಿಂದ ಆಕೆ ಬೇಸರಧಿಗೊಂಡಿದ್ದಳು. ಹೀಗಾಗಿ, ಅಂತರ ಕಾಯ್ದುಧಿಕೊಂಡಿದ್ದಳು. ಆದರೂ ಬಿಡದ ಯುವಕ ಪದೇ ಪದೇ ಹಿಂಬಾಲಿಸಿ ಪ್ರೀತಿಸುವಂತೆ ಪೀಡಿಸುತ್ತಿದ್ದ ಎಂದು ಹೇಳಲಾಗಿದೆ.

ಅದೇ ರೀತಿ ಮಂಗಳವಾರವೂ ಬಸ್‌ ನಿಲ್ದಾಣದಲ್ಲಿ ಯುವತಿ ನಿಂತಿದ್ದಾಗ ಅಲ್ಲಿಗೆ ಬಂದ ಯುವಕ ಆಕೆಯ ಕೈ ಎಳೆದು ತನ್ನ ಜತೆ ದ್ವಿಚಕ್ರ ವಾಹನದಲ್ಲಿ ಬರುವಂತೆ ಒತ್ತಾಯಿಸಿದ.  ಈ ದೃಶ್ಯಗಳು ಪಕ್ಕದ ಹೋಟೆಲ್‌ನ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. 

ಟಿಂಬರ್‌ ಯಾರ್ಡ್‌ನ ನಿವಾಸಿಗಳಾದ ದೀಪಕ್‌ ಹಾಗೂ ಅಶ್ವಿ‌ನಿ (ಹೆಸರು ಬದಲಾಯಿಸಲಾಗಿದೆ) ಕಳೆದ 8 ವರ್ಷಗಳಿಂದ ಪರಿಚಯಸ್ಥರು. ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ದೀಪಕ್‌ ಕಾರು ಚಾಲಕನಾಗಿದ್ದು, ಅಶ್ವಿ‌ನಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

Advertisement

ಈ ನಡುವೆ ದೀಪಕ್‌ ನಡವಳಿಕೆಯಲ್ಲಿ ಬದಲಾವಣೆ ಕಂಡ ಅಶ್ವಿ‌ನಿ ಬದಲಾಗುವಂತೆ ಬುದ್ದಿವಾದ ಹೇಳಿದ್ದರು. ಆದರೂ ವರ್ತನೆಯಲ್ಲಿ ಬದಲಾಯಿಸಿಕೊಂಡಿರಲಿಲ್ಲ.  ಇದರಿಂದ ಕೋಪಗೊಂಡ ಆಕೆ ಬಹಳಷ್ಟು ಬಾರಿ ನಿಂದಿಸಿದ್ದಾಳೆ. ತನ್ನ ಜತೆ ಮಾತನಾಡದಂತೆ ಎಚ್ಚರಿಸಿದ್ದಳು.

ಕಾಲಿಗೆ ಬೀಳ್ತಿನಿ ಸ್ಕೂಟಿ ಹತ್ತು: ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಕತ್ರಿಗುಪ್ಪೆಯ ವಾಟರ್‌ ಟ್ಯಾಂಕ್‌ ರಸ್ತೆಯಲ್ಲಿ ನಡೆದು ಹೋಗುವಾಗ ಅಶ್ವಿ‌ನಿಯನ್ನು ಸ್ಕೂಟಿಯಲ್ಲಿ ಹಿಂಬಾಲಿಸಿದ ದೀಪಕ್‌,  ಆಕೆಯ ಕೈ ಹಿಡಿದು, “ಬಿಸಿಲು ಜಾಸ್ತಿಯಿದೆ ನಾನೇ ಸ್ಕೂಟಿಯಲ್ಲಿ ಮನೆಗೆ Yಬಿಡ್ತಿನಿ, ಸ್ಕೂಟಿ ಹತ್ತುವಂತೆ ಒತ್ತಾಯಿಸಿದ್ದಾನೆ.

ಇದಕ್ಕೆ ಒಪ್ಪದ ಅಶ್ವಿ‌ನಿ ಬಸ್‌ ನಿಲ್ದಾಣಕ್ಕೆ ಹೋಗಿ ನಿಂತಿದ್ದಾರೆ. ಆದರೂ ಸುಮ್ಮನಾಗದ ಆರೋಪಿ, ನಿಲ್ದಾಣದಲ್ಲೇ ಆಕೆಗೆ ತನ್ನ ಪ್ರೇಮ ನಿವೇದನೆ ತೋಡಿಕೊಂಡು, ಸ್ಕೂಟಿ ಹತ್ತುವಂತೆ ಮತ್ತೆ ಮನವಿ ಮಾಡಿದ್ದಾನೆ. ಪದೇ ಪದೇ ನಿರಾಕರಿಸುತ್ತಿದ್ದ ಆಕೆ ಕಾಲಿಗೆ ಬಿದ್ದು ಬೇಡಿಕೊಂಡಿದ್ದಾನೆ.

ಈ ವೇಳೆ ದೀಪಕ್‌ಗೆ ಸ್ಥಳೀಯರು ಬುದ್ದಿ ಹೇಳಲು ಯತ್ನಿಸಿದ್ದಾರೆ. ಆದರೆ, ಆತ ಅಶ್ವಿ‌ನಿಯನ್ನು ಕೈ ಹಿಡಿದು ಬಲವಂತವಾಗಿ ಕರೆದೊಯ್ಯಲು ಮುಂದಾಗಿದ್ದಾನೆ. ಆಗ ಕೂಡಲೇ ಸಾರ್ವಜನಿಕರು ಆಕೆಯನ್ನು ರಕ್ಷಿಸಿ, ಸಿ.ಕೆ. ಅಚುrಕಟ್ಟು ಠಾಣೆಗೆ ಮಾಹಿತಿ ನೀಡಿದ್ದಾರೆ.

ಪಿಂಕ್‌ ಹೊಯ್ಸಳ ಅಲರ್ಟ್‌: ಅಚ್ಚುಕಟ್ಟು ಠಾಣೆಗೆ ದೂರು ಬಂದೊಡನೇ ಠಾಣೆ ಸಿಬ್ಬಂದಿ ಹೊಯ್ಸಳ ಕಂಟ್ರೋಲ್‌ ರೂಂಗೆ ಕರೆ ಮಾಡಿ ಘಟನೆ ವಿವರಿಸಿದ್ದಾರೆ. ಕಂಟ್ರೋಲ್‌ ರೂಂನಿಂದ ಹತ್ತಿರದಲ್ಲಿದ್ದ ಪಿಂಕ್‌ ಹೊಯ್ಸಳ ಸಿಬ್ಬಂದಿಗೆ ಮಾಹಿತಿ ಸಿಕ್ಕಿದೆ. ಕೂಡಲೇ ಸ್ಥಳಕ್ಕೆ ಬಂದ ಮಹಿಳಾ ಸಿಬ್ಬಂದಿ ಆರೋಪಿಯಿಂದ ಯುವತಿಯನ್ನು ರಕ್ಷಿಸಿದ್ದಾರೆ.

ಅದೇ ಸಂದರ್ಭಕ್ಕೆ ಸ್ಥಳಕ್ಕೆ ಬಂದ ಸಿ.ಕೆ. ಅಚುrಕಟ್ಟು ಠಾಣೆ ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದ್ದಾರೆ. ನಂತರ ಯುವತಿಯಿಂದ ದೂರು ಪಡೆದು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಹಿಂದೆಯೂ ದೂರು: ಪ್ರೀತಿ ನಿರಾಕರಿಸಿದ್ದ ಅಶ್ವಿ‌ನಿಯನ್ನು ದೀಪಕ್‌ ಆಗಾಗ್ಗೇ ಕಾಡುತ್ತಿದ್ದ. ಆಕೆಯ ಮನೆ ಮತ್ತು ಕಾಲೇಜು ಬಳಿ ಬಂದು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತಿದ್ದ ಅಶ್ವಿ‌ನಿ ಆಕೆ ಕೆಲ ತಿಂಗಳ ಹಿಂದೆ ಬಸವನಗುಡಿ ಠಾಣೆಯಲ್ಲಿ ದೂರು ನೀಡಿದ್ದರು. ಆರೋಪಿಯ ಬಂಧನವಾಗಿತ್ತು. ಬಳಿಕ ಜಾಮೀನು ಪಡೆದು ಹೊರ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಡಿ ಬೇಡುತ್ತಿದ್ದ ವಿಡಿಯೋ ವೈರಲ್‌ 
ತಪ್ಪಾಯ್ತು ಪ್ಲೀಸ್‌.. ಕಾಲಿಗೆ ಬಿಳ್ತಿನಿ ಕಣೇ .. ಎಲ್ಲರೂ ನೋಡ್ತಿದ್ದಾರೆ ಬಂದ್‌ ಸ್ಕೂಟಿಯಲ್ಲಿ ಕುತ್ಕೊ.. ಸತಾಯಿಸಬೇಡ ಬಾ.. ಐ ಲವ್‌ ಯೂ…,’ಎಂದು ದೀಪಕ್‌ ಪರಿ ಪರಿಯಾಗಿ ಅಶ್ವಿ‌ನಿಗೆ ಮನವಿ ಮಾಡುತ್ತಿದ್ದ ದೃಶ್ಯಗಳು ಕತ್ರಿಗುಪ್ಪೆ ವಾಟರ್‌ಟ್ಯಾಂಕ್‌ ಬಸ್‌ ನಿಲ್ದಾಣ ಪಕ್ಕದ ಹೋಟೆಲ್‌ನ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ.

ಜತೆಗೆ ಆತ, ಒಮ್ಮೆ ಆಕೆಯ ಕಾಲಿಗೆ ಬಿದ್ದು ಕೈ ಹಿಡಿದು ಎಳೆದಾಡಿದ ದೃಶ್ಯಗಳೂ ಇವೆ.  ಈ ದೃಶ್ಯಗಳು ಎಲೆಕ್ಟ್ರಾನಿಕ್‌ ಮಾದ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ಇಡೀ ದಿನ ಚರ್ಚೆಗೆ ಗ್ರಾಸವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next