Advertisement

ಹಸಿರು ಝೋನ್‌: ಲಾಕ್‌ಡೌನ್‌ ಕೊಂಚ ಸಡಿಲಿಕೆ

05:08 PM Apr 30, 2020 | Naveen |

ಕಡೂರು: ಕಳೆದ ಒಂದು ತಿಂಗಳಿನಿಂದ ಕೋವಿಡ್  ನಿಂದ ಲಾಕ್‌ಡೌನ್‌ ಆಗಿದ್ದ ಪಟ್ಟಣ ಹಸಿರು ಝೋನ್‌ನಲ್ಲಿರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತವು ಲಾಕ್‌ಡೌನ್‌ನ್ನು ಸ್ವಲ್ಪ ಸಡಿಲಿಸಿದೆ ಎಂದು ತರೀಕೆರೆ ಉಪ ವಿಭಾಗಾಧಿಕಾರಿ ಎ.ಸಿ.ರೇಣುಕಾಪ್ರಸಾದ್‌ ತಿಳಿಸಿದರು.

Advertisement

ತಹಶೀಲ್ದಾರ್‌ ಕಚೇರಿಯಲ್ಲಿ ಬುಧವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಹಾಗೂ ಪಟ್ಟಣದಲ್ಲಿ ಜ್ಯುವೆಲರ್ಅಂ ಗಡಿ, ಪಾನ್‌ ಬೀಡಾ, ಗುಟಕಾ, ಅಬಕಾರಿ, ಬಾರ್‌ ಆಂಡ್‌ ರೆಸ್ಟೋರೆಂಟ್‌, ಬಟ್ಟೆ ಅಂಗಡಿಗಳು, ಸಲೂನ್‌, ದಂತ ವೈದ್ಯರ ಕ್ಲಿನಿಕ್‌ ತೆರೆಯುವಂತಿಲ್ಲ. ದಿನಸಿ, ಔಷಧ, ಹಾರ್ಡ್‌ವೇರ್‌, ಎಲೆಕ್ಟ್ರಿಕಲ್‌, ಹೂವು, ಹಣ್ಣು ತರಕಾರಿ, ಹೋಟೆಲ್‌ಗ‌ಳು ತೆರಯಬಹುದು. ಆದರೆ ಪಾರ್ಸಲ್‌ ಮೂಲಕ ಮಾತ್ರ ಗ್ರಾಹಕರಿಗೆ ನೀಡಬಹುದು. ಹಾಲು ಮತ್ತಿತರ ದಿನ ನಿತ್ಯದ ಉಪಯೋಗದ ವಸ್ತುಗಳ ಖರೀದಿಗೆ ಸಂಬಂಧಿಸಿದ ಅಂಗಡಿಗಳನ್ನು ತೆರೆಯಬಹುದು. ಆದರೆ ಎಲ್ಲ ಕಡೆ ಅಂತರ ಕಾಪಾಡಿಕೊಳ್ಳಬೇಕು ಎಂದರು.

ಯಾವುದೇ ಅಂಗಡಿ-ಮುಂಗಟ್ಟು ತೆರೆಯುವ ಮೊದಲು ಪುರಸಭೆ, ನಗರಸಭೆಗಳಿಂದ ಪರವಾನಗಿ ಪತ್ರ ಪಡೆದಿದ್ದರೆ ಮಾತ್ರ ಅಂಗಡಿ, ಹೋಟೆಲ್‌ ತೆರೆಯಲು ಅವಕಾಶವಿದೆ. ಒಂದು ವೇಳೆ ಪರವಾನಗಿ ನವೀಕರಿಸಿಕೊಂಡು ತೆರೆಯಬಹುದು. ಕಾನೂನನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಒಂದೇ ಸಾಲಿನಲ್ಲಿ ಒಂದೇ ವಿಧವಾದ ಅಂಗಡಿಗಳಿದ್ದರೆ ಪರಸ್ಪರ ಅರ್ಥ ಮಾಡಿಕೊಂಡು ದಿನ ಬಿಟ್ಟು ದಿನ ತೆರೆಯಲು ಮುಕ್ತ ಅವಕಾಶ ನೀಡಲಾಗಿದೆ. ಕಾರಣ ಜನಸಂದಣೆಯಾಗದಿರಲಿ ಎಂಬ ನಿಯಮಕ್ಕೆ ಎಲ್ಲರೂ ಬದ್ಧರಾಗಿರಬೇಕು. ಪ್ರತಿಯೊಬ್ಬರು ಮಾಸ್ಕ್ ಹಾಕಿರಲೇಬೇಕು ಎಂದರು.

ಮೇ 3 ರ ನಂತರ ಪುನಃ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತವು ನೀಡುವ ಸೂಚನೆಯ ಮೇರೆಗೆ ಅವಕಾಶ ನೀಡಲು ತಾಲೂಕಾಡಳಿತವು ಆಲೋಚನೆ ಮಾಡಲಿದೆ ಎಂದರು. ಕೊರೊನಾ ಓಡಿಸಲು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next