ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಚಿಕ್ಕಮಗಳೂರು ಶಾಸಕರ ನಿಯೋಗವಿಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿತು.
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಭೇಟಿ ಮಾಡಿದ ನಿಯೋಗ, ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ, ಮತ್ತು ಭದ್ರಾ ಉಪಕಣವೆಯ 2 ಮತ್ತು 3 ನೇ ಹಂತದ ಯೋಜನೆಗೆ ಹಣ, ಹಾಗೂ ಜಿಲ್ಲೆಯ ಜಲಧಾರೆ ಯೋಜನೆಗೆ ಬಜೆಟ್ ಹಣ ನೀಡುವಂತೆ ಮನವಿ ಸಲ್ಲಿಸಿದೆ.
ಉಪ ಸಭಾಪತಿ ಪ್ರಾಣೇಶ್, ಶಾಸಕ ಸುರೇಶ್, ಬೆಳ್ಳಿ ಪ್ರಕಾಶ್, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್ ನಿಯೋಗದಲ್ಲಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬೆಳ್ಳಿ ಪ್ರಕಾಶ್, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಮ್ಮ ಜಿಲ್ಲೆಯಲ್ಲಿ ನನಗಿಂತಲೂ ಹಿರಿಯರಿದ್ದಾರೆ, ಮೂಡಿಗೆರೆ ಎಂ ಪಿ ಕುಮಾರಸ್ವಾಮಿ, ತರೀಕೆರೆ ಸುರೇಶ್ ಇದಾರೆ, ಅವರಿಗೆ ಕೊಡಲಿ. ಸಿ.ಟಿ ರವಿ ಮಾರ್ಗದರ್ಶನದಲ್ಲಿ ಮುಂದೆ ಹೋಗುತ್ತೇವೆ. ಸಂಪುಟ ವಿಸ್ತರಣೆ ಸಮಯದಲ್ಲಿ ನಮ್ಮ ಜಿಲ್ಲೆಗೆ ಸ್ಥಾನ ಸಿಗಬಹುದು, ಸಿಗದೆಯೂ ಇರಬಹುದು. ಯಾರಿಗೆ ಕೊಟ್ಟರು ಸಂತೋಷ, ಕೊಟ್ಟಿಲ್ಲವಾದರೂ ಸಂತೋಷ ಎಂದರು.
ಇದನ್ನೂ ಓದಿ:ಟಿಪ್ಪು ಸುಲ್ತಾನ್ ನ ಹೊಗಳಿದ್ದ ರಾಷ್ಟ್ರಪತಿ ಕೋವಿಂದ್ ರಾಜೀನಾಮೆ ಕೇಳುತ್ತೀರಾ? BJPಗೆ ರಾವತ್
ಬಿಜೆಪಿ ಶಾಸಕರು ಕಾಂಗ್ರೆಸ್ ನವರ ಸಂಪರ್ಕದಲ್ಲಿರುವ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕಡೂರು ಶಾಸಕರು, ‘ನಮ್ಮ ಪಕ್ಷದಿಂದ ಯಾರು ಹೋಗುವುದಿಲ್ಲ. ಚುನಾವಣಾ ಹತ್ತಿರ ಬಂದಾಗ ಏನೆಲ್ಲಾ ಆಗುತ್ತದೆಂದು ದೇವರೊಬ್ಬರಿಗೆ ಮಾತ್ರ ಗೊತ್ತು. ಒಮ್ಮೆ ಪಕ್ಷಕ್ಕೆ ಸೇರ್ಪಡೆಯಾದರೆ ಅಲ್ಲಿ ವಲಸಿಗ ಮೂಲ ಎನ್ನುವುದಿಲ್ಲ. ಈಶ್ವರಪ್ಪ ಉಸ್ತುವಾರಿಯಾಗಿ ಬಂದಿರುವುದನ್ನು ನಾವು ಸ್ವಾಗತ ಮಾಡುತ್ತೇವೆ ಎಂದರು.