Advertisement

ಕೋವಿಡ್ ನೊಂದಿಗೆ ಬದುಕು ಅನಿವಾರ್ಯ

06:32 PM Jul 06, 2020 | Naveen |

ಕಡೂರು: ಕೋವಿಡ್‌ ಜೊತೆಗೆ ಜೀವನ ಶೈಲಿಯನ್ನು ಹೊಂದಾಣಿಕೆ ಮಾಡಿಕೊಂಡು ನಿತ್ಯದ ಕೆಲಸಕಾರ್ಯಗಳಲ್ಲಿ ತೊಡಗುವ ಅನಿವಾರ್ಯತೆ ಬಂದಿದೆ. ಹಾಗಾಗಿ, ಇದಕ್ಕೆ ಹೊಂದಿಕೊಳ್ಳುವುದು ಒಂದೇ ದಾರಿ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಎಚ್‌.ತಿಳಿಸಿದರು.

Advertisement

ಜಿಲ್ಲೆಯ ನೂತನ ಎಸ್‌ಪಿ ಆಗಿರುವ ಅವರು ಶನಿವಾರ ಕಡೂರು ತಾಲೂಕಿನ ವಿವಿಧ ಪೊಲೀಸ್‌ ಠಾಣೆಗಳಿಗೆ ಭೇಟಿ ನೀಡಿದ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಒಂದು ವಾರದ ಹಿಂದೆ ಅಧಿಕಾರ ಸ್ವೀಕರಿಸಿದ್ದು, ಚಿಕ್ಕಮಗಳೂರು ಜಿಲ್ಲೆಯ ಪ್ರಕೃತಿ, ಸುಂದರ ಪರಿಸರ ಹಾಗೂ ಉತ್ತಮ ಸಂಸ್ಕೃತಿಗಳಲ್ಲಿ ಸಂಪನ್ನವಾಗಿದೆ. ಅದೇ ರೀತಿ, ಯಾವುದೇ ದೊಡ್ಡ ಸಮಸ್ಯೆಗಳಿಲ್ಲ ಎಂಬ ಮಾಹಿತಿ ಇದೆ. ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಅಲ್ಲಿರುವ ಠಾಣೆಗಳ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ವಿವರ ಪಡೆಯುತ್ತಿದ್ದೇನೆ. ಜಿಲ್ಲೆಯ ಅಪರಾಧ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೆ ಮುಕ್ತವಾಗಿ ಸಂಪರ್ಕಿಸಿ ಬಗೆಹರಿಸಿಕೊಳ್ಳಲು ಸಾರ್ವಜನಿಕರಿಗೆ ಅವಕಾಶವಿದೆ ಎಂದು ಹೇಳಿದರು.

ಕೋವಿಡ್‌ ವೈರಸ್‌ 1-2 ದಿನದ ಲಾಕ್‌ಡೌನ್‌ನಿಂದ ಹೋಗಲು ಸಾಧ್ಯವಿಲ್ಲ. ಅದಕ್ಕಾಗಿ ಕೋವಿಡ್‌ ಜೊತೆಗೇ ಜೀವನ ನಡೆಸಬೇಕಾದ ಮಾರ್ಗಗಳನ್ನು ಹುಡುಕಿಕೊಂಡು ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್‌ ಬಳಕೆ, ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಗುಂಪುಗೂಡದೆ ಅಂತರದಲ್ಲಿರುವುದನ್ನು ತಪ್ಪದೇ ಪಾಲಿಸಬೇಕೆಂದರು.

ಜಿಲ್ಲೆಯಲ್ಲಿನ ನಕ್ಸಲ್‌ ಚಟುವಟಿಕೆ ಬಗ್ಗೆ ತಿಳಿದುಕೊಂಡಿದ್ದೇನೆ. ಜಿಲ್ಲಾಡಳಿತ ಈಗಾಗಲೇ ಮೂಲಭೂತ ಸೌಲಭ್ಯ ಗಳನ್ನು ನೀಡಿದ್ದು, ಅಂತಹ ಚಟುವಟಿಕೆ ಕಾಣಿಸುತ್ತಿಲ್ಲ. ಆದರೂ ಆ್ಯಂಟಿ ನಕ್ಸಲ್‌
ತಂಡ ಇದ್ದೇ ಇದೆ. ಅಪರಾಧಗಳು ಕೋವಿಡ್‌ ಅವಧಿಯಲ್ಲಿ ಕಡಿಮೆಯಾಗಿವೆ. ಜೊತೆಗೆ ಅಪಘಾತಗಳ ಸಂಖ್ಯೆಯೂ ಕ್ಷೀಣಿಸಿದೆ ಎಂದರು. ಪೊಲೀಸ್‌ ಇಲಾಖೆ ಜನರ ರಕ್ಷಣೆಗಾಗಿ ಇದೆ. ಯಾವುದೇ ಸಂದರ್ಭದಲ್ಲೂ ನಿಮ್ಮ ದೂರುಗಳನ್ನು ಸಮೀಪದ ಠಾಣೆಗೆ ಹೋಗಿ ಸಲ್ಲಿಸ ಬಹುದು. ಆದರೆ ಸಣ್ಣಪುಟ್ಟ ವ್ಯಾಜ್ಯಗಳನ್ನು ನಿಮ್ಮಲ್ಲಿಯೇ ಬಗೆಹರಿಸಿಕೊಂಡರೆ ಉತ್ತಮ ಎಂದರು. ತರೀಕೆರೆ ಡಿವೈಎಸ್‌ಪಿ ರೇಣುಕ ಪ್ರಸಾದ್‌, ಕಡೂರು ವೃತ್ತ ನಿರೀಕ್ಷಕ ಮಂಜುನಾಥ್‌, ಪಿಎಸ್‌ಐ ವಿಶ್ವನಾಥ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next