Advertisement

ಕಡೂರು: ಬೈಕ್ ಸೈಲೆನ್ಸರ್ ಗಳನ್ನು ರೋಡ್ ರೋಲರ್ ನಿಂದ ಪುಡಿಗಟ್ಟಿದ ಪೊಲೀಸರು !

01:32 PM May 26, 2022 | Team Udayavani |

ಚಿಕ್ಕಮಗಳೂರು: ಕಡೂರು ಪೊಲೀಸರು ಕರ್ಕಶ ಶಬ್ದ ಮಾಡುತ್ತಿದ್ದ ಬೈಕ್ ಗಳ ಸೈಲೆನ್ಸರ್ ಗಳನ್ನು ರೋಡ್ ರೋಲರ್ ಬಳಸಿ ಪುಡಿಗಟ್ಟಿದ್ದಾರೆ.

Advertisement

ಕಡೂರು ಠಾಣೆಯ ಪಿಎಸ್ಐ ರಮ್ಯಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಪಟ್ಟಣದಲ್ಲಿ ವಿಚಿತ್ರ ಶಬ್ದ ಮಾಡಿ ರೌಂಡ್ ಹಾಕುತ್ತಿದ್ದ ಯುವಕರ 35ಕ್ಕೂ ಹೆಚ್ಚು ಬೈಕ್ ಗಳ ಸೈಲೆನ್ಸರ್ ಗಳನ್ನು ರೋಡ್ ರೋಲರ್ ಹತ್ತಿಸಿ ಪುಡಿ ಮಾಡಲಾಗಿದೆ.

ಕಳೆದ ಎರಡು ತಿಂಗಳಿಂದ ವಿಚಿತ್ರ ಶಬ್ದ ಮಾಡುತ್ತಿದ್ದ ಬೈಕುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಸೈಲೆನ್ಸರ್ ಗಳನ್ನು ಬಿಚ್ಚಿ ವಾರ್ನಿಂಗ್ ನೀಡಿ ಸವಾರರಿಗೆ ಪೊಲೀಸರು ಬೈಕ್ ವಾಪಸ್ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next