Advertisement

ಕಡೂರು: ಪರಿಸರ ದಿನಾಚರಣೆ

06:49 AM Jun 06, 2020 | Suhan S |

ಕಡೂರು: ಮಲೆನಾಡಿನ ಪರಿಸರಕ್ಕೆ ಗಿಡ- ಮರಗಳು ಆಸರೆಯಾದರೆ ಬಯಲು ಸೀಮೆಗೆ ತೆಂಗಿನ ತೋಟಗಳೇ ಪರಿಸರವನ್ನು ಉಳಿಸಿವೆ ಎಂದು ಶಾಸಕ ಬೆಳ್ಳಿಪ್ರಕಾಶ್‌ ಹೇಳಿದರು.

Advertisement

ವಿಶ್ವ ಪರಿಸರದ ದಿನದ ಅಂಗವಾಗಿ ತಾಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪರಿಸರವನ್ನು ನಾವು ರಕ್ಷಿಸಿದರೆ ಮಾತ್ರ ಮುಂದೆ ನಮ್ಮ ಪೀಳಿಗೆಯನ್ನು ಪರಿಸರ ರಕ್ಷಿಸುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಿಡಗಳನ್ನು ನೆಡುವುದರ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಅಧಿಕಾರಿಗಳು, ಪಿಡಿಒ, ಗ್ರಾಮ ಲೆಕ್ಕಿಗರು, ತಮ್ಮ ಕೆಲಸಗಳಿಗೆ ಬರುವ ರೈತರು, ಸಾರ್ವಜನಿಕರಿಗೆ ಕನಿಷ್ಟ 10 ಸಸಿಗಳನ್ನು ನೆಟ್ಟರೆ ನಿಮ್ಮ ಕೆಲಸವನ್ನು ಬೇಗ ಮಾಡಿಕೊಡುವುದಾಗಿ ಅವರ ಮನವೊಲಿಸಿದರೆ ಕ್ಷೇತ್ರದಲ್ಲಿ ಪರಿಸರ ಕ್ರಾಂತಿಯನ್ನೇ ಮಾಡಬಹುದು. ಆದರೆ ನಿಮ್ಮಲ್ಲಿ ಇಚ್ಛಾಶಕ್ತಿ ಬರಬೇಕು. ಮುಂದಿನ ದಿನಗಳಲ್ಲಿ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು. ತಹಶೀಲ್ದಾರ್‌ ಜೆ. ಉಮೇಶ್‌, ತಾಪಂ ಇಒ ಡಾ| ದೇವರಾಜನಾಯ್ಕ, ತಾಪಂ ಅಧ್ಯಕ್ಷೆ ಪ್ರೇಮಾಬಾಯಿ ಇದ್ದರು. ಮುಂಜಾನೆ ಮಂಜು ಪರಿಸರ ಗೀತೆ ಹಾಡಿದರು. ಎ. ಮಣಿ ಮತ್ತು ಪುರಸಭೆ ಮಾಜಿ ಸದಸ್ಯ ಮಂಜುನಾಥ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next