Advertisement
ಕಡ್ತಲ ಮೂರ್ಸಾಲು ಮುನಿಯಾಲು ಸಂಪರ್ಕ ರಸ್ತೆಯು ಸುಮಾರು 2 ಕಿ.ಮೀ. ದೂರವಿದ್ದು ರಸ್ತೆ ದುರಸ್ತಿಪಡಿಸುವಂತೆ ಸ್ಥಳಿಯರ ಹಲವು ವರ್ಷ ಗಳಿಂದ ಮನವಿ ಮಾಡುತ್ತಾ ಬಂದಿದ್ದರು.
Related Articles
Advertisement
ಜಲ್ಲಿಕಲ್ಲು ರಾಶಿರಸ್ತೆಯ ವಿವಿಧೆಡೆ ಜಲ್ಲಿಕಲ್ಲುಗಳನ್ನು ರಾಶಿ ಹಾಕಿರುವುದರಿಂದ ಸ್ಥಳೀಯರು ವಾಹನದಲ್ಲಿ ಸಂಚಾರ ನಡೆಸುವುದು ಅಸಾಧ್ಯವಾಗಿದೆ. ಹಳೆಯ ರಸ್ತೆ ತೆಗೆದು ಹೊಸ ಕಾಂಕ್ರೀಟ್ ರಸ್ತೆ ಮಾಡಬೇಕಾದ ಗುತ್ತಿಗೆದಾರ ಕಳೆದ ಒಂದು ತಿಂಗಳಿನಿಂದ ಯಾವುದೇ ಕಾಮಗಾರಿ ನಡೆಸಿಲ್ಲ. ಕಾಮಗಾರಿ ನಡೆಸದಿದ್ದರೆ ಹಳೆಯ ರಸ್ತೆ ತೆರವುಗೊಳಿಸಿರುವುದೇಕೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಅಪೂರ್ಣ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸ್ಥಳೀಯರ ಸಂಚಾ ರಕ್ಕೆ ಅನುಕೂಲ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ತ್ವರಿತ ಕಾಮಗಾರಿಗೆ ಸೂಚನೆ
ಸ್ಥಳೀಯರು ಸಂಚಾರಕ್ಕೆ ಸಂಕಷ್ಟ ಪಡುತ್ತಿರುವ ಬಗ್ಗೆ ತಿಳಿದು ಈಗಾಗಲೇ ಗುತ್ತಿಗೆದಾರರ ಗಮನಕ್ಕೆ ತರಲಾಗಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು.
-ಸುಂದರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ,ಕಾರ್ಕಳ ಇಲಾಖೆಗೆ ಮುತ್ತಿಗೆ
ತ್ವರಿತವಾಗಿ ಕಾಮಗಾರಿ ನಡೆಸದಿದ್ದಲ್ಲಿ ಸ್ಥಳೀಯರು ಲೋಕೋಪಯೋಗಿ ಇಲಾಖೆಗೆ ಮುತ್ತಿಗೆ ಹಾಕಿ ತೀವ್ರ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು.
-ಗೋವಿಂದರಾಜ್ ಭಟ್, ಸ್ಥಳೀಯರು ದೂರು ನೀಡಲಾಗಿದೆ
ಕಾಮಗಾರಿ ಪ್ರಾರಂಭಿಸಿ ಸ್ಥಗಿತಗೊಳಿಸಿರುವುದರಿಂದ ಸ್ಥಳೀಯರಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವ, ಲೋಕೋಪಯೋಗಿ ಸಚಿವ, ಶಾಸಕರಿಗೆ ದೂರು ನೀಡಲಾಗಿದೆ.
-ಅರುಣ್ ಕುಮಾರ್ ಹೆಗ್ಡೆ,
ಅಧ್ಯಕ್ಷರು,ಕಡ್ತಲ ಗ್ರಾಮ ಪಂಚಾಯತ್