Advertisement

ಕದ್ರಿ ದೇಗುಲ: ಜೆಡಿಎಸ್‌ನಿಂದ ವಿಶೇಷ ಪೂಜೆ

09:58 AM Jul 05, 2018 | |

ಮಹಾನಗರ: ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ ಗುರುವಾರ ಮಂಡಿಸುವ ಬಜೆಟ್‌ಗೆ ಯಾವುದೇ ವಿಘ್ನಗಳು ತಲೆದೋರದಿರಲಿ ಎಂಬ ನಿಟ್ಟಿನಲ್ಲಿ ಜಿಲ್ಲಾ ಜೆಡಿಎಸ್‌ ವತಿಯಿಂದ ಕದ್ರಿ ಮಂಜುನಾಥ ದೇಗುಲದಲ್ಲಿ ಬುಧವಾರ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಮಾತನಾಡಿದ ಮಾಜಿ ಸಚಿವ ಕೆ. ಅಮರ ನಾಥ ಶೆಟ್ಟಿ, ಮುಖ್ಯಮಂತ್ರಿ ಸಲ್ಲಿಸುವ ಬಜೆಟ್‌ ಸರ್ವರಿಂದಲೂ ಪ್ರಶಂಸೆ ವ್ಯಕ್ತಪಡಿಸುವ ಬಜೆಟ್‌ ಆಗಿ ಮೂಡಿಬರಲಿ ಎಂದು ಹಾರೈಸಿದರು.

Advertisement

ಮಾದರಿ ಬಜೆಟ್‌ನ ನಿರೀಕ್ಷೆ
ಜೆಡಿಎಸ್‌ ಪಕ್ಷದ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ ಮಾತನಾಡಿ, ರಾಜ್ಯದ ಆರು ಕೋಟಿ ಜನರಿಗೆ ಹೊಸ ಭರವಸೆ ನೀಡುವ, ಬದುಕಿಗೆ ಹೊಸ ಆಯಾಮ ನೀಡುವ ಬಜೆಟ್‌ ಇದಾಗುತ್ತದೆ ಎಂಬ ನಿರೀಕ್ಷೆ ಇದೆ. ಇದೊಂದು ಮಾದರಿ ಬಜೆಟ್‌ ಆಗಲಿ ಎಂಬ ಅಶಯವೂ ಇದೆ. ಅನೇಕ ಸವಾಲು, ಸಮಸ್ಯೆಗಳಿದ್ದರೂ ಅವೆಲ್ಲವನ್ನೂ ಸರಿದೂಗಿಸಿಕೊಂಡು ಎಲ್ಲರ ನಿರೀಕ್ಷೆಗೂ ಮೀರಿದ ಅತ್ಯುತ್ತಮ ಬಜೆಟ್‌ ಮಂಡನೆಯಾಗಲಿ ಎಂಬ ಧ್ಯೇಯದೊಂದಿಗೆ ಭಗವಂತನಿಗೆ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು. ಜಿಲ್ಲಾ ಜೆಡಿಎಸ್‌ ವಕ್ತಾರ ಸುಶೀಲ್‌ ನೊರೋನ್ಹಾ, ಯುವ ಜನತಾದಳದ ಜಿಲ್ಲಾಧ್ಯಕ್ಷ ಅಕ್ಷಿತ್‌ ಸುವರ್ಣ, ಮುಖಂಡರಾದ ವಸಂತ ಪೂಜಾರಿ, ಅಜೀಜ್‌ ಕುದ್ರೋಳಿ, ಆರ್‌. ಧನ್‌ ರಾಜ್‌, ಸುರೇಶ್‌ ಕುಮಾರ್‌ ಕದ್ರಿ, ದಯಾಕರ್‌ ಮೆಂಡನ್‌, ಪುಷ್ಪಲತಾ, ಚಂದ್ರಕಲಾ, ವೀಣಾ ಶೆಟ್ಟಿ, ರಾಮ್‌ ಗಣೇಶ್‌, ಗೋಪಾಲಕೃಷ್ಣ ಅತ್ತಾವರ, ಪುಷ್ಪರಾಜ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next