Advertisement

ಕದ್ರಿ ಶ್ರೀ ಮಂಜುನಾಥ ದೇವಸ್ಥಾನ: ವೈಭವದ ವರ್ಷಾವಧಿ ಜಾತ್ರೆ

10:29 AM Jan 17, 2018 | |

ಮಹಾನಗರ: ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವರ್ಷಾವಧಿ ಜಾತ್ರೆಯು ಜ. 14ಕ್ಕೆ ಆರಂಭಗೊಂಡಿದ್ದು, ಅತ್ಯಂತ ವೈಭವದಿಂದ ಜರಗುತ್ತಿದೆ. ಜಾತ್ರೆ ಅಂಗವಾಗಿ ಕ್ಷೇತ್ರವನ್ನು ವಿದ್ಯುತ್‌ ದೀಪಗಳಿಂದ ಸಿಂಗರಿಸಲಾಗಿದ್ದು, ಭಕ್ತರು ಸಂಭ್ರಮದಿಂದ ಪಾಲ್ಗೊಳ್ಳುತ್ತಿದ್ದಾರೆ.

Advertisement

ಜ. 21: ಕದ್ರಿ ರಥೋತ್ಸವ
ಜ. 17ರಂದು ಮಲ್ಲಿಕಟ್ಟೆ ಸವಾರಿ ಬಲಿ, ಜ. 18ರಂದು ಮುಂಡಾಣಕಟ್ಟೆ ಸವಾರಿ ಬಲಿ, ಜ. 19ರಂದು ಕೊಂಚಾಡಿ
ಸವಾರಿ ಬಲಿ, ಜ. 20ರಂದು ಏಳನೇ ದೀಪೋತ್ಸವ ಜರಗಲಿದೆ. ಜ. 21ರಂದು ಮಧ್ಯಾಹ್ನ ರಥಾರೋಹಣ, ಸಂಜೆ ಶ್ರೀ ಮನ್ಮಹಾರಥೋತ್ಸವ, ಬೆಳ್ಳಿ ರಥೋತ್ಸವ, ಕವಾಟ ಬಂಧನ, ಜ. 22ರಂದು ಅವಭೃಥ ಸ್ನಾನ, ಕವಾಟೋದ್ಘಾಟನೆ, ತುಲಾಭಾರ ಸೇವೆ, ರಾತ್ರಿ ಚಂದ್ರಮಂಡಲ ಉತ್ಸವ, ಅವಭೃತ ಬಳಿಕ ಕದ್ರಿ ಹತ್ತು ಸಮಸ್ತರಿಂದ ಧ್ವಜಾವರೋಹಣ ನಡೆಯಲಿದೆ.

ಜ. 24ರಂದು ದೇಗುಲದಿಂದ ಮಲರಾಯ ದೈವದ ಭಂಡಾರ ಹೊರಡುವುದು, ಮಧ್ಯಾಹ್ನ 12ಕ್ಕೆ ಸಂಪ್ರೋಕ್ಷಣೆ, ಅಣ್ಣಪ್ಪ ದೈವಕ್ಕೆ ವಾರ್ಷಿಕ ಪರ್ವ ಸೇವೆ ಹಾಗೂ ರಾತ್ರಿ ಮಲರಾಯ ಹಾಗೂ ಪರಿವಾರ ದೈವಗಳ ನೇಮ ಜರಗಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು
ಕ್ಷೇತ್ರದ ಉತ್ಸವದ ಸಂದರ್ಭದಲ್ಲಿ ಮಲ್ಲಿಕಾ ಕಲಾವೃಂದದ ವತಿಯಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜ. 17ರಂದು ಸಂಜೆ ಭಕ್ತಿಗಾಯನ, ಭಜನೆ, ಭಕ್ತಿಸುಧೆ, ಸಾಂಸ್ಕೃತಿಕ ವೈಭವ, ನೃತ್ಯ, ತಾಳಮದ್ದಳೆ. ಜ. 18ರಂದು ಸಂಜೆ ಭಜನೆ, ಭಕ್ತಿಗಾಯನ, ನೃತ್ಯ ನಡೆಯಲಿದೆ.

ಜ. 19ರಂದು ಸಂಜೆ ಸಂಗೀತ, ಯಕ್ಷನೃತ್ಯ, ಸಂಗೀತ ವೈಭವ, ಭರತನಾಟ್ಯ, ತುಳುನಾಟಕ, ಭಕ್ತಿ ಗಾಯನ ಸಂಭ್ರಮ, ಜ. 20ರಂದು ಬೆಳಗ್ಗೆ ಭಜನೆ, ಭಕ್ತಿಗೀತೆ, ಸಂಜೆ ವೈವಿಧ್ಯಮಯ ಕಾರ್ಯಕ್ರಮ, ಭಕ್ತಿ ರಸಧಾರೆ, ಮಕ್ಕಳ ಯಕ್ಷಗಾನ. ಜ. 21ರಂದು ಬೆಳಗ್ಗೆ ವಾದ್ಯಗೋಷ್ಠಿ, ಭಜನೆ, ಸ್ಯಾಕ್ಸೋಫೋನ್‌ ವಾದನ, ಮಧ್ಯಾಹ್ನ ಹಿಂದೂಸ್ಥಾನಿ ಗಾಯನ, ಭಜನೆ, ಯಕ್ಷಗಾನ, ಸಂಜೆ ಭಕ್ತಿಲಹರಿ, ಚೆಂಡೆವಾದನ ಜರಗಲಿದೆ.

Advertisement

ಜ. 22ರಂದು ಬೆಳಗ್ಗೆ ಭಜನೆ, ಸಂಗೀತ, ಭರತನಾಟ್ಯ, ಸಾಂಸ್ಕೃತಿಕ ವೈವಿಧ್ಯ, ಭರತನಾಟ್ಯ. ಜ. 23ರಂದು ಸಂಜೆ ಗೀತ ಗಾಯನ, ಸಂಗೀತ, ವಾದ್ಯಗೋಷ್ಠಿ, ನಾಟ್ಯ. 24ರಂದು ಸಂಜೆ ಭಜನೆ, ಭರತನಾಟ್ಯ, ದಾಸವಾಣಿ, ಇಂದ್ರಜಾಲ ಪ್ರದರ್ಶನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next