Advertisement

ಮಳೆಗಾಲ ಮುಗಿಯುವವರೆಗೆ ಕದ್ರಿ ಪಾರ್ಕ್‌ ಕಾರಂಜಿ ಶೋ ಸ್ಥಗಿತ

11:45 PM Jun 22, 2019 | mahesh |

ಮಹಾನಗರ: ಕದ್ರಿಯ ಜಿಂಕೆ ಪಾರ್ಕ್‌ ಖ್ಯಾತಿಯ ಹಳೆ ಮೃಗಾಲಯದಲ್ಲಿ ಸಂಗೀತ ಕಾರಂಜಿ-ಲೇಸರ್‌ ಶೋ ಪ್ರದರ್ಶನವು ಮಳೆಯ ಕಾರಣದಿಂದಾಗಿ ಸೋಮವಾರದಿಂದ ಮಳೆಗಾಲ ಕೊನೆಗೊಳ್ಳುವವರೆಗೆ ಸ್ಥಗಿತಗೊಂಡಿದೆ.

Advertisement

ಕದ್ರಿಯಲ್ಲಿ ಲೇಸರ್‌ ಶೋ ಪ್ರದರ್ಶನ ತೆರೆದ ಪ್ರದೇಶದಲ್ಲಿ ನಡೆಯುತ್ತದೆ. ಇದೇ ಕಾರಣದಿಂದಾಗಿ ಪ್ರವಾಸಿಗರಿಗೆ ಮಳೆಯಿಂದ ರಕ್ಷಣೆಗೆಂದು ಸ್ಥಳದಲ್ಲಿ ಯಾವುದೇ ರೀತಿಯ ಮೇಲ್ಛಾವಣಿ ವ್ಯವಸ್ಥೆ ಇಲ್ಲ. ಇನ್ನು, ಸಂಗೀತ ಕಾರಂಜಿ ನಡೆಯುವ ಜಾಗದಲ್ಲಿ ಮೇಲ್ಛಾವಣಿ ಅಳವಡಿಸಿ, ಶೋ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಜೂ. 17ರಿಂದ ಶೋ ಸ್ಥಗಿತಗೊಂಡಿದೆ. ಕಳೆದ ವರ್ಷ ಜಿಲ್ಲೆಗೆ ಮುಂಗಾರು ಜೂನ್‌ ಮೊದಲ ವಾರವೇ ಪ್ರವೇಶ ಪಡೆದ ಹಿನ್ನೆಲೆಯಲ್ಲಿ ಜೂ.7ರಿಂದ ಸಂಗೀತ ಕಾರಂಜಿ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿತ್ತು.

ಹೆಚ್ಚುವರಿ ಥೀಮ್‌ ಅಳವಡಿಸಿ
ಪ್ರಸಕ್ತ ಸಾಲಿನಲ್ಲಿ ಸಂಗೀತ ಕಾರಂಜಿ ವೀಕ್ಷಿಸಲು ದಿನಂಪ್ರತಿ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದರು. ಈಗಾಗಲೇ ತುಳುನಾಡಿನ ಸಂಸ್ಕೃತಿ, ಪರಂಪರೆ, ಆಚರಣೆ ಸಹಿತ ಕರಾವಳಿ ಸಂಸ್ಕೃತಿಯ ಬಗೆಗಿನ ಥೀಮ್‌ನಲ್ಲಿ ಸಂಗೀತ ಕಾರಂಜಿ ಪ್ರದರ್ಶನಗೊಳಿಸಲಾಗುತ್ತಿದೆ. ಶೋ ಪ್ರಾರಂಭವಾದಾಗಿನಿಂದಲೂ ಒಂದೇ ಕಲ್ಪನೆಯಲ್ಲಿ ಶೋ ಪ್ರದರ್ಶನಗೊಳಿಸಲಾಗುತ್ತಿದ್ದು, ಹೆಚ್ಚುವರಿ ಥೀಮ್‌ ಅಳವಡಿಸಬೇಕು ಎಂದು ಪ್ರವಾಸಿಗರಿಂದ ಈಗಾಗಲೇ ಬೇಡಿಕೆ ಕೇಳಿ ಬಂದಿದೆ.

ತೋಟಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರು ‘ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಈಗಾಗಲೇ ಕಮಿಟಿಯೊಂದಿದ್ದು, ಸಂಗೀತ ಕಾರಂಜಿ ಶೋ ಥೀಮ್‌ ಬದಲಾವಣೆಯ ಬಗ್ಗೆ ಜಿಲ್ಲಾಧಿಕಾರಿಗಳ ಗಮನಸೆಳೆಯಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಥೀಮ್‌ ಅಳವಡಿಸುವ ನಿಟ್ಟಿನಲ್ಲಿ ತೋಟಗಾರಿಕಾ ಇಲಾಖೆಯ ಮುಂದಾಗಿದೆ ಎಂದು ತಿಳಿಸಿದ್ದಾರೆ.

ದರ ಇಳಿಕೆ
ಕದ್ರಿ ಕಾರಂಜಿ ಶೋ ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿತ್ತು. ಈ ಹಿಂದೆ ಇದ್ದಂತಹ ಸಂಗೀತ ಕಾರಂಜಿ ಪ್ರದರ್ಶನದ ದರವನ್ನು ಇಳಿಕೆ ಮಾಡಲಾಗಿತ್ತು. ಈ ಹಿಂದೆ ಶೋಗೆ ವಯಸ್ಕರಿಗೆ 50 ರೂ. ಮತ್ತು ಮಕ್ಕಳಿಗೆ 25 ರೂ.ಇತ್ತು. ಇದನ್ನು ಪರಿಷ್ಕರಿಸಲಾಗಿದ್ದು, ವಯಸ್ಕರಿಗೆ 30 ರೂ. ಮತ್ತು ಮಕ್ಕಳಿಗೆ 15 ರೂ.ಗೆ ಇಳಿಕೆ ಮಾಡಲಾಗಿದೆ.

Advertisement

ಮಳೆಯಿಂದಾಗಿ ಸಂಗೀತ ಕಾರಂಜಿ ಶೋ ಸ್ಥಗಿತಗೊಂಡರೂ ಕದ್ರಿ ಪಾರ್ಕ್‌ ಎದುರುಗಡೆ ಇರುವಂತಹ ಜಿಂಕೆ ಉದ್ಯಾನವನವು ಎಂದಿನಂತೆ ಪ್ರವಾಸಿಗರಿಗೆ ತೆರೆದಿರಲಿದೆ. ಉದ್ಯಾನವನ ವೀಕ್ಷಣೆಗೆ ಈಗಾಗಲೇ ದರ ನಿಗದಿ ಮಾಡಿದ್ದು, ವಯಸ್ಕರಿಗೆ 10 ರೂ. ಮತ್ತು ಮಕ್ಕಳಿಗೆ 5 ರೂ. ಇದೆ.

ತೋಟಗಾರಿಕಾ ಇಲಾಖೆ ನೀಡಿದ ಅಂಕಿ ಅಂಶದ ಪ್ರಕಾರ ಈ ವರ್ಷದಲ್ಲಿ ಅಂದರೆ, ಅಕ್ಟೋಬರ್‌ ತಿಂಗಳಿನಿಂದ ಜೂನ್‌ ತಿಂಗಳವರೆಗೆ ಕದ್ರಿ ಸಂಗೀತ ಕಾರಂಜಿ, ಲೇಸರ್‌ ಶೋ ವೀಕ್ಷಿಸಲು 12,098 ಮಂದಿ ವಯಸ್ಕರು ಮತ್ತು 2,717 ಮಂದಿ ಮಕ್ಕಳು ಆಗಮಿಸಿದ್ದಾರೆ. ಒಟ್ಟಾರೆಯಾಗಿ ಏಳು ತಿಂಗಳಿನಲ್ಲಿ 14,815 ಮಂದಿ ಶೋ ವೀಕ್ಷಣೆಗೆ ಆಗಮಿಸಿದ್ದು 7,60,830 ರೂ. ಶುಲ್ಕ ಸಂಗ್ರಹವಾಗಿದೆ.

ಸಭೆಯಲ್ಲಿ ಚರ್ಚಿಸಲಾಗುವುದು

ಕದ್ರಿ ಸಂಗೀತ ಕಾರಂಜಿ ಶೋ ಕಳೆದ ಸೋಮವಾರದಿಂದ ಮಳೆಗಾಲ ಮುಗಿಯುವವರೆಗೆ ಸ್ಥಗಿತಗೊಂಡಿದೆ. ಮುಂದಿನ ದಿನಗಳಲ್ಲಿ ಶೋದಲ್ಲಿ ಹೆಚ್ಚುವರಿ ಥೀಮ್‌ ಬೇಕೆಂದು ಪ್ರವಾಸಿಗರಿಂದ ಬೇಡಿಕೆ ಇದೆ. ಈ ಬಗ್ಗೆ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಲಾಗುವುದು.
– ಜಾನಕಿ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕಿ
ಜಿಂಕೆ ಉದ್ಯಾನವನ ತೆರೆದಿರುತ್ತದೆ

ಮಳೆಯಿಂದಾಗಿ ಸಂಗೀತ ಕಾರಂಜಿ ಶೋ ಸ್ಥಗಿತಗೊಂಡರೂ ಕದ್ರಿ ಪಾರ್ಕ್‌ ಎದುರುಗಡೆ ಇರುವಂತಹ ಜಿಂಕೆ ಉದ್ಯಾನವನವು ಎಂದಿನಂತೆ ಪ್ರವಾಸಿಗರಿಗೆ ತೆರೆದಿರಲಿದೆ. ಉದ್ಯಾನವನ ವೀಕ್ಷಣೆಗೆ ಈಗಾಗಲೇ ದರ ನಿಗದಿ ಮಾಡಿದ್ದು, ವಯಸ್ಕರಿಗೆ 10 ರೂ. ಮತ್ತು ಮಕ್ಕಳಿಗೆ 5 ರೂ. ಇದೆ.
ರೂ. 7.50 ಲಕ್ಷಕ್ಕೂ ಅಧಿಕ ಶುಲ್ಕ ಸಂಗ್ರಹ
ತೋಟಗಾರಿಕಾ ಇಲಾಖೆ ನೀಡಿದ ಅಂಕಿ ಅಂಶದ ಪ್ರಕಾರ ಈ ವರ್ಷದಲ್ಲಿ ಅಂದರೆ, ಅಕ್ಟೋಬರ್‌ ತಿಂಗಳಿನಿಂದ ಜೂನ್‌ ತಿಂಗಳವರೆಗೆ ಕದ್ರಿ ಸಂಗೀತ ಕಾರಂಜಿ, ಲೇಸರ್‌ ಶೋ ವೀಕ್ಷಿಸಲು 12,098 ಮಂದಿ ವಯಸ್ಕರು ಮತ್ತು 2,717 ಮಂದಿ ಮಕ್ಕಳು ಆಗಮಿಸಿದ್ದಾರೆ. ಒಟ್ಟಾರೆಯಾಗಿ ಏಳು ತಿಂಗಳಿನಲ್ಲಿ 14,815 ಮಂದಿ ಶೋ ವೀಕ್ಷಣೆಗೆ ಆಗಮಿಸಿದ್ದು 7,60,830 ರೂ. ಶುಲ್ಕ ಸಂಗ್ರಹವಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next